ಕೈ ತೊರೆದು ಕಮಲ ಹಿಡಿದ ಕಾಗೋಡು ಪುತ್ರಿ : ಬೇಳೂರಿಗೆ ಸಂಕಟ ತಂದ ಬಂಡಾಯ

ಬೇಳೂರು : ರಾಜಕಾರಣ ವಂಶಪಾರಂಪರ್ಯವಲ್ಲ. ಆದರೆ ಎಲ್ಲ ರಾಜಕಾರಣಿಗಳು ವಂಶವೃಕ್ಷವನ್ನು ರಾಜಕೀಯದಲ್ಲೇ ಮುಂದುವರೆಸಲು ಬಯಸುತ್ತಾರೆ. ಹೀಗಾಗಿ ಚುನಾವಣೆ ಹೊತ್ತಿನಲ್ಲಿ ರಾಜಕೀಯದಲ್ಲಿ ಹಿಂದೆಂದೂ ಊಹಿಸದ ಪಕ್ಷಾಂತರಗಳಾಗುತ್ತವೆ.‌ಇಂತಹುದೇ ಅನೀರಿಕ್ಷಿತ ಬದಲಾವಣೆಯಲ್ಲಿ ಕಾಂಗ್ರೆಸ್ ಎಂದರೇ ಕಾಗೋಡು, ಕಾಗೋಡು ಎಂದರೇ ಕಾಂಗ್ರೆಸ್ ಎಂಬ ಪರಿಪಾಟ ಬದಲಾಗಿದ್ದು ತಂದೆಯ ಸೂಚನೆ ಮೇರೆಗೆ (Kagodu’s daughter joins BJP) ಕಾಗೋಡು ಪುತ್ರಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ತಂದೆಯ ವಯೋಸಹಜ ಅನಾರೋಗ್ಯ ಹಾಗೂ ವಂಶವನ್ನು ರಾಜಕಾರಣದಲ್ಲಿ ಮುಂದುವರೆಸಿ ತಂದೆಯ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸುವ ಪ್ರಯತ್ನ ದಲ್ಲಿದ್ದ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು.

ತಮ್ಮ ತಂದೆಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ, ಸಮಾಜ ಸೇವೆ ಕಾರ್ಯದಲ್ಲಿ ತೊಡಗಿದ್ದರು. ಇದರೊಂದಿಗೆ ತಂದೆಗೆ ವಯಸ್ಸಾಗಿದ್ದರಿಂದ ಸಹಜವಾಗಿ ಅವರ ಉತ್ತರಾಧಿಕಾರಿಯಾಗಿ ರಾಜಕಾರಣದಲ್ಲಿ ಮುಂದುವರೆಯುವ ಲೆಕ್ಕಾಚಾರದಲ್ಲಿದ್ದರು. ಆದರೆ ಎಲ್ಲ ಪಕ್ಷಗಳಂತೆ ಕಾಂಗ್ರೆಸ್ ಟಿಕೇಟ್ ಹಂಚಿಕೆ ವೇಳೆ ವಲಸಿಗರಿಗೆ ಮಣೆ ಹಾಕಿದೆ. ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಕಾಗೋಡು ಸೋದರ ಸಂಬಂಧಿಯಾದ ಬೇಳೂರು ಗೋಪಾಲ್ ಕೃಷ್ಣಾಗೆ ಟಿಕೇಟ್ ನೀಡಿದೆ.

ಇದು ಸಹಜವಾಗಿ ರಾಜನಂದಿನಿ ಹಾಗೂ ಕಾಗೋಡು ತಿಮ್ಮಪ್ಪನವರಿಗೆ ಬೇಸರ ತಂದಿದೆ. ಹೀಗಾಗಿ ತಂದೆಯ ಸೂಚನೆಯಂತೆ ಕಾಂಗ್ರೆಸ್ ಗೆ ಬುದ್ಧಿ ಕಲಿಸಲು ಹಾಗೂ ತಮ್ಮ ನಿರಾಸೆಗೆ ಉತ್ತರ ಪಡೆಯಲು ರಾಜನಂದಿನಿ ಬಿಜೆಪಿ ಬಾಗಿಲು ಬಡಿದಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ವೈ ಸೇರಿದಂತೆ ಹಲವು ಬಿಜೆಪಿ ನಾಯಕರ ಆಶೀರ್ವಾದ ಪಡೆದ ರಾಜನಂದಿನಿ ಬುಧವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಡಾ.ರಾಜನಂದಿನಿ, ನಾನು ಟಿಕೇಟ್ ಅಕಾಂಕ್ಷಿಯಾಗಿದ್ದೆ. ಅದಕ್ಕೆ ಪೂರಕವಾಗಿ ಪಕ್ಷ ಸಂಘಟನೆ ಕಾರ್ಯದಲ್ಲೂ ತೊಡಗಿದ್ದೆ. ತಂದೆಯವರು ಅನಾರೋಗ್ಯ ಹಾಗೂ ವಯಸ್ಸಿನ ಕಾರಣಕ್ಕೆ ಟಿಕೇಟ್ ಬೇಡ ಎಂದಿದ್ದರು. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಬೇಳೂರು ಗೋಪಾಲ್ ಕೃಷ್ಣಾಗೆ ಟಿಕೇಟ್ ನೀಡಿದ್ದು ಸರಿಯಲ್ಲ. ಅವರ ನಮ್ಮ ಸಂಬಂಧಿಯೇ ಇರಬಹುದು. ಆದರೆ ಅವರನ್ನು ಬೆಂಬಲಿಸಲು ನಮಗೆ ಇಷ್ಟವಿಲ್ಲ. ಹೀಗಾಗಿ ನಾನು ಯಾವುದೇ ಷರತ್ತು ಇಲ್ಲದೇ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು.

ಇದನ್ನೂ ಓದಿ : Bommai temple run : ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ದೇಗುಲಗಳಿಗೆ ಸಿಎಂ ಬೊಮ್ಮಾಯಿ ಭೇಟಿ

ಅಲ್ಲದೇ, ನಾನು ಸಾಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಗೆ ಬುದ್ದಿ ಕಲಿಸುತ್ತೇನೆ. ಕಾಂಗ್ರೆಸ್ ನಲ್ಲಿ ವಯಸ್ಸಾಗಿರುವ ಶ್ಯಾಮನೂರ್ ಶಿವಶಂಕರಪ್ಪನವರಿಗೆ ಟಿಕೇಟ್ ನೀಡಲಾಗಿದೆ. ಆದರೆ ನನ್ಬ ತಂದೆಯವರಿಗೆ ಮತ್ತು ನನಗೆ ಇಬ್ಬರಿಗೂ ನೀಡಿಲ್ಲ. ಇದು ನನಗೆ ಬೇಸರ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ . ಕಾಂಗ್ರೆಸ್ ನಿರ್ಧಾರ ಹಾಗೂ ರಾಜನಂದಿನಿ ಬಂಡಾಯದ ಮೂಲಕ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಹಾದಿ ಸುಗಮವಾದಂತಾಗಿದೆ ಎಂದು ಹೇಳಲಾಗ್ತಿದೆ.

Kagodu’s daughter joins BJP: Kagodu’s daughter holds a lotus with abandon: Rebellion that brought suffering to Belur

Comments are closed.