ವಿಧಾನಸೌಧದಲ್ಲಿ ನಡೆದಿತ್ತಾ ಎಣ್ಣೆಪಾರ್ಟಿ ? ಪತ್ತೆಯಾಯ್ತು ಬಿಯರ್‌ ಬಾಟಲ್‌

ಬೆಂಗಳೂರು : ರಾಜ್ಯದ ಶಕ್ತಿ ಕೇಂದ್ರವೆನಿಸಿಕೊಂಡಿರುವ ವಿಧಾನಸೌಧದೊಳಗೆ ಎಣ್ಣೆ ಪಾರ್ಟಿ ನಡೆಯುತ್ತಿತ್ತಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಎರಡು ಬಿಯರ್‌ ಬಾಟಲಿಗಳು ಪತ್ತೆಯಾಗಿದೆ.

ವಿಧಾನಸೌಧದಲ್ಲಿನ ಖರ್ಚು ವೆಚ್ಚಗಳ ಕಾರ್ಯದರ್ಶಿಗಳ ರೂಂ ನಂಬರ್‌ 208ರ ಪಕ್ಕದ ನೀರಿನ ಟ್ಯಾಂಕ್‍ನ ಸಿಂಕ್ ಬಳಿ ಬಾಟಲ್ ಪತ್ತೆಯಾಗಿದೆ. ರಾತ್ರಿಯ ವೇಳೆಯಲ್ಲಿ ಪಾರ್ಟಿ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ವಿಧಾನಸೌಧದಲ್ಲಿ ಬಿಯರ್‌ ಬಾಟಲಿ ಪತ್ತೆಯಾಗಿರುವ ಕುರಿತು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೇ ಮಾಧ್ಯಮಗಳಲ್ಲಿ ಈ ಕುರಿತು ವರದಿ ಪ್ರಸಾರವಾಗುತ್ತಿದ್ದಂತೆಯೇ ಅಧಿಕಾರಿಗಳು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಸ್ವಚ್ಚತಾ ಸಿಬ್ಬಂದಿಗಳು ಬಿಯರ್‌ ಬಾಟಲ್‌ಗಳನ್ನು ತೆರವುಗೊಳಿಸಿದ್ದಾರೆ.

(Beer Bottles Found Outside room number 208 in Vidhana Soudha )

Comments are closed.