ಭಾನುವಾರ, ಏಪ್ರಿಲ್ 27, 2025
HomekarnatakaKarnataka Assembly Election : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಖಾವಿ ಕಮಾಲ್ : ಯೋಗಿ ಭೇಟಿ...

Karnataka Assembly Election : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಖಾವಿ ಕಮಾಲ್ : ಯೋಗಿ ಭೇಟಿ ಮಾಡಿದ ಸ್ವಾಮೀಜಿಗಳ ನಿಯೋಗ

- Advertisement -

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Karnataka Assembly Election) ಸಿದ್ಧತೆ ನಡೆದಿರುವಂತೆಯೇ ಖಾದಿ ತೊಟ್ಟ ನಾಯಕರಿಗೆ ಸವಾಲು ಒಡ್ಡಲು ಖಾವಿ ತೊಟ್ಟ ಸ್ವಾಮೀಜಿಗಳು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೇ ನಾಮಧಾರಿ ಸಮುದಾಯದ ಸ್ವಾಮೀಜಿಯೊಬ್ಬರು ಖಾವಿ ತೊಟ್ಟ ನಾವು ಎಲೆಕ್ಷನ್ ಗೆ ನಿಲ್ತಿವಿ ಎಂದಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಖಾವಿ ಪಾಲಿಟಿಕ್ಸ್ ಆರಂಭವಾಗೋ ಮುನ್ಸೂಚನೆ ಸಿಕ್ಕಿದ್ದು ರಾಜಕೀಯಕ್ಕೆ ಎಂಟ್ರಿ‌ ನೀಡೋಕೆ ರಾಜ್ಯದ ಪ್ರಮುಖ ಮಠಾಧೀಶರು ನಿರ್ಧರಿಸಿದಂತಿದ್ದು ಪೂರ್ವಭಾವಿಯಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adhithyanath) ಭೇಟಿ ಮಾಡಿದ್ದಾರೆ.

ಹೌದು, ರಾಜ್ಯದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಖಾವಿ ಪಾಲಿಟಿಕ್ಸ್ ಆರಂಭವಾಗೋ ಮುನ್ಸೂಚನೆ ಸಿಕ್ಕಿದೆ. ಇತ್ತೀಚಿಗಷ್ಟೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡಿದ ನಾಮಧಾರಿ ಸಮುದಾಯದ ಸ್ವಾಮೀಜಿಯೊಬ್ಬರು ರಾಜ್ಯದಾದ್ಯಂತ ನಾವು ಖಾವಿಧಾರಿಗಳೇ ಕಣಕ್ಕಿಳಿಯೋದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಈಗ ರಾಜ್ಯದ ಹಲವು ಮಠದ ಸ್ವಾಮಿಜೀಗಳ ದಂಡು ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಅಲ್ಲದೇ ರಾಜಕೀಯದಲ್ಲಿ ಖಾವಿಧಾರಿಗಳ ಎಂಟ್ರಿ ಬಗ್ಗೆಯೂ ಸುಧೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.

Karnataka Assembly Election Swamijis Who meet Yogi Adhithyanath

ರಾಜ್ಯದಲ್ಲಿ ಖಾವಿ ಅಡಳಿತ ಜಾರಿಗೆ ಬಂದರೆ ಧರ್ಮರಕ್ಷಣೆ ಅಗುತ್ತೆ. ಸಾಮಾಜಿಕ‌ ಕಳಕಳಿ ಯಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಮುಂದಿನ ದಿನದಲ್ಲಿ ಯುಪಿ‌ ಮಾದರಿ ರಾಜ್ಯದಲ್ಲೂ ಅಗಲಿ. ಈಗಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಅದಿತ್ಯನಾಥರವರು ಸಕ್ಸಸ್ ಅಗಿದ್ದಾರೆ. ಖಾವಿ ಧರಿಸಿ‌ ಆಧಿಕಾರ ಹಿಡಿದು ವಿಶ್ವದಾದ್ಯಂತ ಸದ್ದು ಮಾಡಿದ್ದಾರೆ. ಇದಕ್ಕೆ ಕಾರಣ ಯೋಗಿ ಅದಿತ್ಯನಾಥರವರ ಅಡಳಿತ ವೈಖರಿ ಮಾದರಿ ಎಂದು ಬಣ್ಣಿಸಲಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಖಾವಿ ಆಡಳಿತ ಬರಲಿ, ಅದಕ್ಕೆ ನಿಮ್ಮ ಸಹಕಾರ ಅತ್ಮಗತ್ಯ ಎಂದು ಯೋಗಿ ಬೇಟಿ ಮಾಡಿರೋ ರಾಜ್ಯದ ನಾನಾ ಮಠಾದೀಶರು ಮನವಿ‌ಮಾಡಿದ್ದಾರಂತೆ.

Karnataka Assembly Election Swamijis Who meet Yogi Adhithyanath 2

ಇತ್ತ ಮಠಾದೀಶರ ಭೇಟಿಯ ವೇಳೆ ಈ ಬಗ್ಗೆ ವರಿಷ್ಠರ ಗಮನಕ್ಕೆ ತರೋದಾಗಿ ಯೋಗಿ ವಿಶ್ವಾಸ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ಅದ್ರೆ ಮುಂದಿನ‌ ಚುನಾವಣೆಗೆ ವೇಳೆ ಖಾವಿದಾರಿಗಳು ಕಣಕ್ಕಿಳಿಯೋದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಕರ್ನಾಟಕದ ಷಡಕ್ಷರಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೊನ್ನಾಳಿಯ ಚನ್ನಮಲ್ಲಿಕಾರ್ಜುನ್ ಸ್ವಾಮೀಜಿ, ತಿಪಟೂರಿನ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ಚಕ್ರಭಾವಿ ಮಠದ ಸ್ವಾಮೀಜಿ, ಬೆಳ್ಳಾವಿ ಖಾರವ ವೀರ ಬಸವ ಸ್ವಾಮೀಜಿಗಳು ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿದ್ದಾರೆ. ಈ ಸ್ವಾಮೀಜಿಗಳ ಭೇಟಿ ಹಾಗೂ ರಾಜಕೀಯ ಚರ್ಚೆ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ : ಏಪ್ರಿಲ್ 30 ಕ್ಕೆ ಬೊಮ್ಮಾಯಿ ದೆಹಲಿ ಭೇಟಿ : ಮತ್ತೆ ಶುರುವಾಯ್ತು ಸಂಪುಟ ವಿಸ್ತರಣೆ ಸರ್ಕಸ್‌

ಇದನ್ನೂ ಓದಿ : ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕಿಂಗ್‌ಪಿನ್‌ ದಿವ್ಯ ಹಾಗರಗಿ ಅರೆಸ್ಟ್‌

Karnataka Assembly Election Swamijis Who meet Yogi Adhithyanath

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular