Bitcoin ಕೇಸಲ್ಲಿ ಬಿಜೆಪಿ ನಾಯಕರ ವಿರುದ್ದ ಮುನಿಸು : ಮೋದಿ, ಅಮಿತ್‌ ಶಾಗೆ ದೂರು ಕೊಟ್ಟ ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಬಿಟ್‌ ಕಾಯಿನ್‌ (Bitcoin) ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ ನಾಯಕರು ಸಿಎಂ ಬದಲಾವಣೆ ಖಚಿತ ಅನ್ನೋ ಮಾತನಾಡುತ್ತಿದ್ದಾರೆ. ಈ ನಡುವಲ್ಲೇ ಬಿಜೆಪಿಯ ಕೆಲ ನಾಯಕರ ವರ್ತನೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರಿಗೆ ಬೇಸರ ತರಿಸಿದೆ. ಇದೇ ಕಾರಣಕ್ಕೆ ಸ್ವಪಕ್ಷೀಯ ನಾಯಕರ ವಿರುದ್ದವೇ ಬೊಮ್ಮಾಯಿ ಇದೀಗ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ದೂರು ಕೊಟ್ಟಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ರಾಜ್ಯದ ರಾಜಕೀಯ ಬೆಳವಳಿಗೆಯ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬೊಮ್ಮಾಯಿ ಅವರು ಬಿಟ್‌ ಕಾಯಿನ್‌ (Bitcoin) ವಿಚಾರದಲ್ಲಿ ಸ್ವಪಕ್ಷೀಯ ನಾಯಕರೇ ಮಾಧ್ಯಮದಲ್ಲಿ ಸಿಎಂ ಬದಲಾವಣೆಯ ಕುರಿತು ಮಾಹಿತಿಯನ್ನು ನೀಡುವ ಮೂಲಕ ಸರಕಾರ ಹಾಗೂ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬಿಟ್‌ ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ತಂಡಕ್ಕೆ ಕೂಡ ಯಾವುದೇ ಸಾಕ್ಷ್ಯವೂ ದೊರೆತಿಲ್ಲ. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಈ ನಡುವಲ್ಲೇ ಬಿಜೆಪಿ ನಾಯಕರ ಹೇಳಿಕೆಯಿಂದಾಗಿ ಪಕ್ಷ ಹಾಗೂ ಸರಕಾರಕ್ಕೆ ಡ್ಯಾಮೇಜ್‌ ಆಗ್ತಿದೆ. ಕಾಂಗ್ರೆಸ್‌ ನಾಯಕರಿಗಿಂತಲೂ ಕೆಲ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಬೇಸರ ತರಿಸಿದೆ. ಹೀಗಾಗಿ ಇಂತಹ ನಾಯಕರನ್ನು ಕರೆಯಿಸಿ ಬುದ್ದಿ ಮಾತನ್ನು ಹೇಳಿ ಎಂದು ಬೊಮ್ಮಾಯಿ ಅವರು ಹೈಕಮಾಂಡ್‌ ಬಳಿಯಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ ಅವರ ದೂರನ್ನು ಆಲಿಸಿರುವ ಮೋದಿ, ಅಮಿತ್‌ ಶಾ ಹಾಗೂ ನಡ್ಡಾ ಅವರು ನೀವು ಯಾವುದಕ್ಕೂ ತಲೆ ಕಡೆಸಿಕೊಳ್ಳಬೇಡಿ. ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಸಾಕ್ಷ್ಯವೇ ಇಲ್ಲ ಎಂದ ಮೇಲೆ ಚಿಂತೆ ಮಾಡಬೇಡಿ, ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ದ ಕ್ರಮಕೈಗೊಳ್ಳುತ್ತೇವೆ. ನೀವು ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಮುಂದಾಗಿ. ಮುಂದಿನ ಭಾರೀಯೂ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದಿದ್ದಾರೆ.

ಬಿಟ್‌ ಕಾಯಿನ್‌ ಪ್ರಕರಣ ಇದೀಗ ಸಿಎಂ ಕುರ್ಚಿ ಅಲುಗಾಡುವಂತೆ ಮಾಡಿದೆ. ಇನ್ನೊಂದೆಡೆಯಲ್ಲಿ ಬಿಜೆಪಿ ನಾಯಕರಿಗೆ ಸಿಎಂ ಬಗೆಗೆ ತೃಪ್ತಿಯಿಲ್ಲ ಅನ್ನೋದು ಖಚಿತವಾಗಿದೆ. ಬಸವರಾಜ್‌ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಎಲ್ಲವೂ ಸರಿ ಹೋಯ್ತು ಅನ್ನೋ ಹೊತ್ತಲ್ಲೇ ಇದೀಗ ಬಿಟ್‌ ಕಾಯಿನ್‌ ಭೂತ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿದೆ. ಅದ್ರಲ್ಲೂ ಪಕ್ಷ ವಿರೋಧ ಚಟುವಟಿಕೆ ಮಾಡುವ ನಾಯಕರ ವಿರುದ್ದ ಬೊಮ್ಮಾಯಿ ದೂರು ನೀಡಿರುವುದು ಆಂತಕರಿಕ ಕಚ್ಚಾಟಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ : ಪ್ರಿಯಾಂಕ್ ಖರ್ಗೆ

ಇದನ್ನೂ ಓದಿ :  ಬಿಟ್‌ ಕಾಯಿನ್‌ ಹಗರಣ : ಪ್ರಿಯಾಂಕ ಖರ್ಗೆ ಹೇಳಿಗೆಕೆ ಪ್ರತಿಕ್ರಿಯಿಸಲಾರೆ ಎಂದ ಸಿಎಂ ಬೊಮ್ಮಾಯಿ

(Bitcoin Case CM Basavaraj Bommai complains to Modi, Amit Shah against BJP leaders in Karnataka)

Comments are closed.