No vaccine No Treatment : ವಾಕ್ಸಿನ್ ಗುರಿ ತಲುಪಲು ಸರ್ಕಾರದ ಹೊಸ ಅಸ್ತ್ರ: ನೋವಾಕ್ಸಿನ್ ನೋ ಟ್ರೀಟ್ಮೆಂಟ್

ಬೆಂಗಳೂರು : ಕೊರೋನಾ ಮೂರನೇ ಅಲೆಯ ಆತಂಕ ತಗ್ಗಿದ್ದರೂ ಕರೋನಾ ಸಂಪೂರ್ಣವಾಗಿ ತೊಲಗಿಲ್ಲ.ಆದರೆ ಜನರು ಎರಡನೇ ಡೋಸ್ ವಾಕ್ಸಿನ್ ಗೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಲಸಿಕೆಗೆ ಸಿಂಗಾಪೂರ್ ಮಾದರಿ ( No vaccine No Treatment ) ಅನುಸರಿಸಲು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ರಾಜ್ಯದಲ್ಲಿ ಕೊರೋನಾ ಮೂರನೆ ಅಲೆಯ ಆತಂಕ ತಪ್ಪಿದ್ದರೂ ಅಲ್ಲಲ್ಲಿ ಕೊರೋನಾ ಪ್ರಕರಣಗಳು ಹಾಗೂ ಪಾಸಿಟಿವಿಟಿ ರೇಟ್ ತಗ್ಗಿಲ್ಲ. ಹೀಗಾಗಿ ಜನರು ಎರಡನೇ ಡೋಸ್ ಲಸಿಕೆ ಪಡೆಯಬೇಕೆಂಬ ಆಗ್ರಹ ಸರ್ಕಾರ ಮತ್ತು ಆರೋಗ್ಯ ಇಲಾಖೆಯಿಂದ ವ್ಯಕ್ತವಾಗುತ್ತಲೇ ಇದೆ.

ಅದರೆ ಜನರು ಕೊರೋನಾ ಮರೆತೇ ಬಿಟ್ಟಿದ್ದು ಲಸಿಕೆ ಬಗ್ಗೆ ಯಾವುದೇ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಎರಡನೇ ಡೋಸ್ ಲಸಿಕೆ ನೀಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ರಾಜ್ಯದ ಜನರಿಗೆ ಕೊರೋನಾ ಲಸಿಕೆಯ ಎರಡನೇ ಡೋಸ್ ಲಸಿಕೆ ಹಾಕಿಸಲು ಸಿಂಗಾಪೂರ ಮಾದರಿ ಅನುಸರಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡುತ್ತಿದೆ.

ಕೊರೋನಾ ಲಸಿಕೆಯ ಎರಡು ಡೋಸ್ ಪಡೆಯದಿದ್ದರೇ, ಅಂತಹವರು ಅನಾರೋಗ್ಯಕ್ಕೆ ತುತ್ತಾದರೇ ಚಿಕಿತ್ಸೆ ಹಾಗೂ ಉಚಿತ ಚಿಕಿತ್ಸೆ ನೀಡದಿರಲು ಸರ್ಕಾರ ನಿರ್ಧರಿಸಬೇಕು. ಆಗ ಜನರಿಗೆ ಲಸಿಕೆಯ ಮಹತ್ವ ಅರ್ಥವಾಗುತ್ತದೆ ಹಾಗೂ ಜನರು ಲಸಿಕೆ ಹಾಕಿಸಿಕೊಳ್ಳಲು ಸಿದ್ಧವಾಗುತ್ತಾರೆ ಎಂಬುದು ತಾಂತ್ರಿಕ ಸಮಿತಿ ಸಲಹೆ.

vidhana savdha

ಸಿಂಗಾಪೂರದಲ್ಲಿ ಈ ರೀತಿಯ ನಿಯಮ ಮಾಡಿದೆ ಅಲ್ಲಿನ ಸರ್ಕಾರ. ವಾಕ್ಸಿನ್ ಕೋರ್ಸ್ ಕಂಪ್ಲೀಟ್ ಮಾಡದವರಿಗೆ ಅಲ್ಲಿನ ಸರ್ಕಾರ ಉಚಿತ ಟ್ರಿಟ್ಮೆಂಟ್ ನಿರಾಕರಿಸಿದೆ. ಉಚಿತವಾಗಿ ಚಿಕಿತ್ಸೆ ನೀಡದಿರಲು ಸರ್ಕಾರ ನಿರ್ಧರಿಸಿದೆ. ಇದೇ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಿದರೇ ವಾಕ್ಸಿನ್ ಹಾಕಿಸಿಕೊಳ್ಳುವತ್ತ ಜನರನ್ನು ಪ್ರೇರೇಪಿಸಬಹುದು ಎಂಬುದು ಸಲಹಾ ಸಮಿತಿ ಅಭಿಮತ. ಆದರೆ ಸರ್ಕಾರ ಇದನ್ನು ಜಾರಿಗೆ ತರಲು ತೀರ್ಮಾನಿಸುತ್ತಾ ಅನ್ನೋದು ಕುತೂಹಲ.

Sputnik Light

ವಾಕ್ಸಿನ್ ಬಗ್ಗೆ ಅಪ್ರಚಾರ ಹಾಗೂ ಅಪನಂಬಿಕೆ ಯಿಂದ ಗ್ರಾಮೀಣ ಪ್ರದೇಶ ಸೇರಿದಂತೆ ರಾಜ್ಯದ ಹಲವೆಡೆ ಜನರು ಕೊರೋನಾ ವಾಕ್ಸಿನ್ ನಿಂದ ದೂರ ಉಳಿಯುತ್ತಿದ್ದಾರೆ. ಮನ ವೊಲಿಸಿದರು ವಾಕ್ಸಿನ್ ಪಡೆಯಲು ಒಪ್ಪುತ್ತಿಲ್ಲ. ಹೀಗಾಗಿ ವಾಕ್ಸಿನ್ ಟಾರ್ಗೆಟ್ ರೀಚ್ ಆಗೋದು ಸರ್ಕಾರದ ಪಾಲಿಗೆ ತಲೆನೋವಾಗಿದೆ. ಹೀಗಾಗಿ ಗುರಿಸಾಧನೆಗೆ ಸರ್ಕಾರಕ್ಕೆ ಸಿಂಗಾಪೂರ ಮಾದರಿ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ : ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಇದನ್ನೂ ಓದಿ : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್‌ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

(Government’s new plan to reach the Corona vaccine target : No vaccine no Treatment )

Comments are closed.