new Covid-19 cases : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.49 ಲಕ್ಷ ಕೋವಿಡ್​ ಪ್ರಕರಣ ವರದಿ

new Covid-19 cases : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,49,394 ಹೊಸ ದೈನಂದಿನ ಕೋವಿಡ್​ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.ಗುರುವಾರಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ದೈನಂದಿನ ಕೋವಿಡ್ ಸಂಖ್ಯೆಯಲ್ಲಿ 13 ಪ್ರತಿಶತ ಇಳಿಕೆ ಕಂಡಿದೆ ಕಂಡಿದೆ. ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣಗಳ ದರವು 9.27 ಪ್ರತಿಶತವಾಗಿದೆ. ವಾರದ ಕೋವಿಡ್​ ಪಾಸಿಟಿವಿಟಿ ದರವು 12.03 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,072 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,98,983ಕ್ಕೆ ತಲುಪಿದೆ. 2020ರ ಮಾರ್ಚ್​ ತಿಂಗಳಲ್ಲಿ ದೇಶದಲ್ಲಿ ಮೊಟ್ಟ ಮೊದಲ ಕೋವಿಡ್​ ಸಾವು ಸಂಭವಿಸಿತ್ತು.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,46,674 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 4,00,17,088 ಮಂದಿ ಕೋವಿಡ್​ನಿಂದ ಗುಣಮುಖರಾಗಿದ್ದು ರಿಕವರಿ ದರ 95.39 ಪ್ರತಿಶತವಾಗಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 98,352ಕ್ಕೆ ಇಳಿಕೆ ಕಂಡಿದ್ದು ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯು 14,35,569 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅತೀ ಹೆಚ್ಚು ಕೋವಿಡ್​ ಪ್ರಕರಣಗಳನ್ನು ವರದಿ ಮಾಡಿದ ಐದು ರಾಜ್ಯಗಳ ಪೈಕಿ ಕೇರಳ 42,677 ಕೇಸುಗಳನ್ನು ವರದಿ ಮಾಡುವ ಮೂಲಕ ಮೊದಲ ಸ್ಥಾನವನ್ನು ಪಡೆದಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 16,436 ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಮೂರನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 15,252 ಕೋವಿಡ್​ ಪ್ರಕರಣಗಳು ದಾಖಲಾಗಿವೆ, ತಮಿಳುನಾಡಿನಲ್ಲಿ 11,993 ಹಾಗೂ ರಾಜಸ್ಥಾನದಲ್ಲಿ 8,073 ಕೋವಿಡ್​ ಪ್ರಕರಣಗೂ ವರದಿಯಾಗಿವೆ.

60 ಪ್ರತಿಶತ ಹೊಸ ಕೋವಿಡ್​ ಪ್ರಕರಣಗಳು ಈ ಐದು ರಾಜ್ಯಗಳಿಂದಲೇ ವರದಿಯಾಗಿವೆ. ಕೇರಳ ರಾಜ್ಯವೊಂದರಿಂದಲೇ 28.57 ಪ್ರತಿಶತ ದೈನಂದಿನ ಪ್ರಕರಣವು ವರದಿಯಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಈವರೆಗೆ ಒಟ್ಟು 1,68,47,16,068 ಡೋಸ್​ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ. ಇದರಲ್ಲಿ ಕಳೆದೊಂದು ದಿನದಲ್ಲಿ ದೇಶದಲ್ಲಿ 55,58,760 ಡೋಸ್​ ಕೋವಿಡ್​ ಲಸಿಕೆಗಳನ್ನು ನೀಡಲಾಗಿದೆ.

India logs 1.49 lakh new Covid-19 cases in 24 hours, positivity rate at 9.27%

ಇದನ್ನು ಓದಿ : Army Uniform : ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಕೋರ್ಟ್​ನಿಂದ ನೋಟಿಸ್​​

ಇದನ್ನೂ ಓದಿ : ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

Comments are closed.