Karnataka cabinet expansion: ಸದ್ಯಕ್ಕೆ ವಿಸ್ತರಣೆಯಾಗಲ್ಲ ಸಂಪುಟ : ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್

ಬೆಂಗಳೂರು : ಸಂಕ್ರಾಂತಿ ಆಯ್ತು ಇನ್ನೇನು ಶಿವರಾತ್ರಿ, ಯುಗಾದಿಯೂ ಬಂತು ಇನ್ನೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ( Karnataka cabinet expansion ) ಮುಹೂರ್ತ ಕೂಡಿ ಬಂದಿಲ್ಲ. ಆದರೆ ಈಗ ಈ ಕನಸು ಸದ್ಯ ನನಸಾಗೋದು ಕಷ್ಟವಿದೆ ಎಂಬ ಶಾಕಿಂಗ್ ಸತ್ಯವೊಂದನ್ನು ರಾಜ್ಯದ ಸಚಿವ ಸ್ಥಾನಾಕಾಂಕ್ಷಿಗಳಿಗೆ ಹೈಕಮಾಂಡ್ ರವಾನಿಸಿದೆ. ರಾಜ್ಯದಲ್ಲಿ ಕೆಲ ದಿನಗಳಿಂದ ಏರುತ್ತಿರುವ ಕೊರೋನಾ ಕೇಸ್ ಗಳ ನಡುವೆಯೂ ಬಿಜೆಪಿ ಸಚಿವ ಸ್ಥಾನಾಕಾಂಕ್ಷಿಗಳ ಚಟುವಟಿಕೆ ಜೋರಾಗಿತ್ತು.‌ ಬೆಳಗಾವಿಯಲ್ಲಿ ಹಿರಿಯ ಸಚಿವ ಕತ್ತಿ ಸೇರಿದಂತೆ ಹಲವು ಸಚಿವರು ಶಾಸಕರು ರಹಸ್ಯ ಸಭೆಗಳನ್ನು ನಡೆಸಿ ಯಾರಿಗೆ ಸಚಿವ ಸ್ಥಾನ ಸಿಗಬೇಕು ? ಯಾರಿಂದ ಲಾಭಿ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದರು.

ಇದೆಲ್ಲವನ್ನು ಗಮನಿಸಿದ ಬಿಜೆಪಿ ಹೈಕಮಾಂಡ್ ಈ ಎಲ್ಲ ಚಟುವಟಿಕೆಗಳಿಗೂ ಒಂದೇ ಸ್ಪಷ್ಟ ಸಂದೇಶದ ಮೂಲಕ ಬ್ರೇಕ್ ಹಾಕಿದೆ. ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಸಚಿವ ಸ್ಥಾನಾಕಾಂಕ್ಷಿಗಳಿಗೆ ಯಾವ ಕಾರಣಕ್ಕೂ ಮಾರ್ಚ್ ಎರಡನೇ ವಾರದವರೆಗೂ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ರಾಜ್ಯದಲ್ಲಿ ಬಜೆಟ್ ಅಧಿವೇಶನ ಹಾಗೂ ಬಜೆಟ್ ಮಂಡನೆ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ನಡೆಯಬಹುದು. ಅದು ಕೂಡ ಸಿಎಂ ವಿವೇಚನೆ ಹಾಗೂ ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ ಮಾರ್ಚ್ ಎರಡನೇ ವಾರದವರೆಗೂ ಯಾವ ಕಾರಣಕ್ಕೂ ಸಂಪುಟ ವಿಸ್ತರಣೆ ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದೆ.

ಸದ್ಯ ದೇಶದಲ್ಲಿ ಪಂಚ ರಾಜ್ಯ ಚುನಾವಣೆ ಸಿದ್ಧತೆ ನಡೆದಿದೆ. ಫೆಬ್ರವರಿಯಲ್ಲಿ ಮತದಾನ ನಡೆಯಲಿದ್ದು ಮಾರ್ಚ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ಚುನಾವಣೆಯ ಮೇಲೆ ಗಮನ ಕೇಂದ್ರಿಕರಿಸಿದೆ. ಹೀಗಾಗಿ ಈ ಹೊತ್ತಿನಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಅದರ ಬಳಿಕ ಉಂಟಾಗುವ ರಾಜಕೀಯ ಸ್ಥಿತ್ಯಂತರ ಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯೆಂಬ ಜೇನುಗೂಡಿಗೆ ಕಲ್ಲೆಸೆಯುವ ಪ್ರಯತ್ನವೇ ಬೇಡ ಎಂದು ಸಿಎಂಗೂ ಸೂಚಿಸಿದೆ ಎನ್ನಲಾಗಿದೆ.

ಕೇವಲ ಸಿಎಂ ಗೆ ಮಾತ್ರವಲ್ಲ ಸಂಪುಟ ಸೇರಬೇಕೆಂಬ ಕಾರಣಕ್ಕೆ ಅಲ್ಲಲ್ಲಿ ಸಭೆ ನಡೆಸುತ್ತಿರುವ ಶಾಸಕರು ಹಾಗೂ ನಾಯಕ ರಿಗೂ ಸಭೆ ನಡೆಸದಂತೆ‌ ಮತ್ತು ಬೇಕಾಬಿಟ್ಟಿ ಹೇಳಿಕೆ ನೀಡದಂತೆ ವಾರ್ನಿಂಗ್ ನೀಡಿದೆಯಂತೆ. ವಿಶೇಷವಾಗಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ರೇಣುಕಾಚಾರ್ಯ ಮೇಲೆ ಅಸಮಧಾನಗೊಂಡಿರುವ ಬಿಜೆಪಿ ಹೈಕಮಾಂಡ್ ಮಾತಿನ ಮೇಲೆ ನಿಗಾವಹಿಸುವಂತೆ ಸೂಚನೆ ರವಾನಿಸಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಸಚಿವ ಸಂಪುಟ ಸೇರೋ ಶಾಸಕರ ಕನಸಿಗೆ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ ಎಳ್ಳು ನೀರು ಬಿಟ್ಟಿದೆ.

ಇದನ್ನೂ ಓದಿ : ಕೇಂದ್ರ ಬಜೆಟ್‌ನಲ್ಲಿ ಔಷಧ ತಯಾರಿಕಾ ವಲಯದ ನಿರೀಕ್ಷೆಗಳೇನು?

ಇದನ್ನೂ ಓದಿ : ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್​ 1

( Karnataka cabinet expansion, BJP High Command given by Big Shock‌)

Comments are closed.