NCP chief Sharad Pawar : ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ಗೆ ಕೊರೊನಾ ಸೋಂಕು ಧೃಡ

NCP chief Sharad Pawarಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ರಿಗೆ ಕೊರೊನಾ ವೈರಸ್​ ಸೋಂಕು ಧೃಡಪಟ್ಟಿದೆ. ಈ ಸಂಬಂಧ ಟ್ವಿಟರ್​ನಲ್ಲಿ ಮಾಹಿತಿ ನೀಡಿರುವ ಶರದ್​ ಪವಾರ್​ ತಮಗೆ ಕೊರೊನಾ ಸೋಂಕು ಧೃಡವಾಗಿದೆ. ಆದರೆ ಆತಂಕಪಡುವಂತದ್ದು ಏನೀ ಆಗಿಲ್ಲ. ವೈದ್ಯರ ಸೂಚನೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಶರದ್​ ಪವಾರ್​ ಮಾಹಿತಿ ನೀಡಿದ್ದಾರೆ.


ನನ್ನ ಕೋವಿಡ್​ ಪರೀಕ್ಷಾ ವರದಿಯು ಪಾಸಿಟಿವ್​ ಬಂದಿದೆ. ಆದರೆ ಆತಂಕಪಡುವ ವಿಚಾರ ಏನೂ ಇಲ್ಲ. ವೈದ್ಯರು ನೀಡಿದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಾ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರು ಯಾರೇ ಇದ್ದರೂ ಕೂಡಲೇ ಕೋವಿಡ್​ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಶರದ್​ ಪವಾರ್​ ಟ್ವೀಟಾಯಿಸಿದ್ದಾರೆ .

ದೇಶದಲ್ಲಿಂದು 3.06 ಲಕ್ಷ ಹೊಸ ಕೋವಿಡ್​ ಪ್ರಕರಣಗಳು ಧೃಡ

ದೇಶದಲ್ಲಿ ಕೊರೊನಾ ವೈರಸ್​ ರಣಕೇಕೆ ಇಂದು ಕೊಂಚ ತಹಬದಿಗೆ ಬಂದಂತೆ ಕಾಣುತ್ತಿದೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,06,064 ಕೋವಿಡ್​ ಪ್ರಕರಣಗಳು ಧೃಡಪಟ್ಟಿವೆ. ನಿನ್ನೆ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದ್ದವು. ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,95,43,328 ಆಗಿದೆ. ಕಳೆದ 24 ಗಂಟೆಗಳಲ್ಲಿ 439 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 4,89,848ಕ್ಕೆ ತಲುಪಿದೆ. ದೇಶದಲ್ಲಿ ಮೊದಲ ಕೊರೊನಾ ಸಾವು 2020ರ ಮಾರ್ಚ್​ ತಿಂಗಳಲ್ಲಿ ಸಂಭವಿಸಿತ್ತು .


ದೇಶದಲ್ಲಿ ಪ್ರಸ್ತುತ 22,49,335 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಕೋವಿಡ್​ 19 ರಿಕವರಿ ಪ್ರಮಾಣವು 93.07 ಪ್ರತಿಶತಕ್ಕೆ ಕುಸಿತ ಕಂಡಿದೆ. ಕಳೆದ 24 ಗಂಟೆಗಳಲ್ಲಿ 2,43,495 ರೋಗಿಗಳು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಒಟ್ಟು ಸಂಖ್ಯೆ 3,68,04,145 ಆಗಿದೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.


ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 14, 74,753 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 71. 69 ಕೋಟಿ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 9197 ಹೊಸ ಕೊರೊನಾ ಪ್ರಕರಣಗಳು ಹಾಗೂ 35 ಕೋವಿಡ್​ ಸಾವುಗಳು ವರದಿಯಾಗಿದೆ. ಮುಂಬೈನಲ್ಲಿ 2550 ಹೊಸ ಕೋವಿಡ್​ ಪ್ರಕರಣಗಳು ಹಾಗೂ 13 ಕೋವಿಡ್​ ಸಾವು ವರದಿಯಾಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚ ಅಂದರೆ 26, 299 ಕೊರೊನಾ ಪ್ರಕರಣಗಳು ವರದಿಯಾಗಿದೆ .

ಇದನ್ನು ಓದಿ : Bank fraud : ಬ್ರಹ್ಮಾವರದಲ್ಲಿ ಸಾಲ ಪಡೆದು ಬ್ಯಾಂಕಿಗೆ ಕೋಟ್ಯಾಂತರ ರೂಪಾಯಿ ವಂಚನೆ

ಇದನ್ನೂ ಓದಿ : UP Crime: 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

NCP chief Sharad Pawar tests positive for Covid

Comments are closed.