ಸೋಮವಾರ, ಏಪ್ರಿಲ್ 28, 2025
Homekarnatakaಸಿಎಂ ಇಬ್ರಾಹಿಂ ಪಾಲಿಗೆ ಬಿಸಿತುಪ್ಪವಾದ ಮೈತ್ರಿ: ಜೆಡಿಎಸ್ ಬಿಡೋಕಾಗಲ್ಲ,ಕಾಂಗ್ರೆಸ್ ಸೇರೋಕಾಗಲ್ಲ !

ಸಿಎಂ ಇಬ್ರಾಹಿಂ ಪಾಲಿಗೆ ಬಿಸಿತುಪ್ಪವಾದ ಮೈತ್ರಿ: ಜೆಡಿಎಸ್ ಬಿಡೋಕಾಗಲ್ಲ,ಕಾಂಗ್ರೆಸ್ ಸೇರೋಕಾಗಲ್ಲ !

- Advertisement -

ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆಯನ್ನು (Loka Sabha Election 2024) ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸೀಟುಗಳನ್ನು ಗೆಲ್ಲೋ ನಿಟ್ಟಿನಲ್ಲಿ ಜೆಡಿಎಸ್ (JDS) ಹಾಗೂ ಬಿಜೆಪಿ (BJP)ಮೈತ್ರಿ (JDS – BJP Alliance) ಮಾಡಿಕೊಂಡಿದೆ. ಲೋಕಸಭಾ ಕ್ಷೇತ್ರಗಳ ಹಂಚಿಕೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಇದ್ದರೂ ಮೈತ್ರಿಯಾಗಿದೆ. ಇನ್ನು ಮೈತ್ರಿ ನಿರ್ಣಯ ಹೊರಬಿದ್ದ ಬೆನ್ನಲ್ಲೇ ಜೆಡಿಎಸ್ ನಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿದೆ.

ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (CM Ibrahim) ಪಾಲಿಗೆ ಮಾತ್ರ ಈ ಮೈತ್ರಿ ನುಂಗಲಾರದ ತುಪ್ಪವಾಗಿದ್ದು, ಜೆಡಿಎಸ್ ನಲ್ಲೇ ಇರಲೂ ಆಗದೇ, ತೊರೆಯಲೂ ಆಗದೇ ಇಬ್ರಾಹಿಂ ತೊಳಲಾಡುತ್ತಿದ್ದಾರೆ. ಬಿಜೆಪಿ ಎಂದರೇ ಕೋಮುವಾದಿ ಪಕ್ಷ ಎಂಬ ಹಣೆ ಪಟ್ಟಿ ಇದೆ. ಹೀಗಾಗಿ ಸಹಜವಾಗಿಯೇ ಅಲ್ಪಸಂಖ್ಯಾತ ಸಮುದಾಯದ ಜನರು ಬಿಜೆಪಿಯನ್ನು ಬೆಂಬಲಿಸೋದು ಕಡಿಮೆ. ಬಿಜೆಪಿಯೊಂದಿಗೆ ಮುಸ್ಲಿಂಮರು ಗುರುತಿಸಿಕೊಂಡಿದ್ದು ಕಡಿಮೆ.

Karnataka JDS State President CM Brahim Troble in Jds Bjp Alliance
Image Credit To Original Source

ಬಿಜೆಪಿ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಕಾನೂನುಗಳನ್ನು ರೂಪಿಸುತ್ತದೆ ಎಂಬ ಆರೋಪವೂ ಇದೆ. ಇದೆಲ್ಲ ಕಾರಣಕ್ಕೆ ಬಿಜೆಪಿ ಹಾಗೂ ಮುಸ್ಲಿಂಮರ ನಡುವೆ ಒಂದು ಅಂತರವಿದೆ. ಈ ಅಂತರ ಶತಮಾನಗಳಿಂದ ಕಾಯ್ದುಕೊಂಡು ಬರಲಾಗಿದೆ. ಹೀಗಿರುವಾಗಲೇ ಜೆಡಿಎಸ್ ಮೈತ್ರಿ ನೆಪದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿದೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ತುಮಕೂರಿಗೆ ದೇವೇಗೌಡ್ರು, ಹಾಸನಕ್ಕೆ ಪ್ರಜ್ವಲ್‌, ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ !

ಆದರೆ ಈ ಮೈತ್ರಿ ಮಾತುಕತೆ ವೇಳೆಯಾಗಲೇ ಅಥವಾ ಮೈತ್ರಿ ಕುರಿತು ತೀರ್ಮಾನ ಕೈಗೊಳ್ಳುವ ವೇಳೆಯಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಲ್ಲಿರೋ ಸಿ.ಎಂ ಇಬ್ರಾಹಿಂರನ್ನು ಪರಿಗಣಿಸುವ ಮನಸ್ಸು ಮಾಡಿಲ್ಲ ದಳಪತಿಗಳು ಹೀಗಾಗಿ ನಾಮಕಾವಸ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದಾರೆ ಸಿ.ಎಂ.ಇಬ್ರಾಹಿಂ ಎಂಬ ಟೀಕೆಯನ್ನು ಇಬ್ರಾಹಿಂ ಎದುರಿಸುತ್ತಲೇ ಇದ್ದಾರೆ.

ಇದರ ಮಧ್ಯೆ ಸ್ವತಃ ಸಿ.ಎಂ. ಇಬ್ರಾಹಿಂ ಕೂಡ ಮೈತ್ರಿಯಿಂದ ಬೇಸರಗೊಂಡಿದ್ದು, ಮುಂದೇನು ಎಂಬ ಚಿಂತೆಯಲ್ಲಿದ್ದಾರಂತೆ. ಒಂದೊಮ್ಮೆ ಬಿಜೆಪಿ ಜೆಡಿಎಸ್ ಮೈತ್ರಿಯನ್ನು ಒಪ್ಪಿಕೊಂಡು ಜೆಡಿಎಸ್ ನಲ್ಲೇ ಉಳಿದುಕೊಂಡರೇ ಸಮುದಾಯದ ಹಾಗೂ ಮತದಾರರ ವಿರೋಧವನ್ನು ಹಾಗೂ ಮುನಿಸನ್ನು ಎದುರಿಸಬೇಕಾಗುತ್ತದೆ. ಹಾಗಂತ ಜೆಡಿಎಸ್ ತೊರೆದರೇ ರಾಜಕೀಯ ಭವಿಷ್ಯವೇ ಮುಗಿದಂತಾಗುತ್ತದೆ ಎಂಬ ಆತಂಕವೂ ಇಬ್ರಾಹಿಂರನ್ನು ಕಾಡುತ್ತಿದೆ.

ಇದನ್ನೂ ಓದಿ : ಸಿಎಂ ಆಯ್ತು, ಕಾಂಗ್ರೆಸ್ ನಲ್ಲಿ ಇನ್ಮುಂದೇ ಡಿಸಿಎಂ ಫೈಟ್‌ : ಸಿದ್ದರಾಮಯ್ಯ Vs ಡಿಕೆ ಶಿವಕುಮಾರ್‌

ಸಿ.ಎಂ.ಇಬ್ರಾಹಿಂ ಮಗನ ರಾಜಕೀಯ ಭವಿಷ್ಯವನ್ನು ರೂಪಿಸುವ ಕನಸಿನಲ್ಲಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಮಗನನ್ನು ಬೀದರ್ ದಿಂದ ಕಣಕ್ಕಿಳಿಸಿದ್ದರು. ಆದರೆ ಈಗ ಜೆಡಿಎಸ್ ಬಿಜೆಪಿಯ ಜೊತೆ ಹೊರಟಿದೆ. ಹೀಗಾಗಿ ಇಬ್ರಾಹಿಂ ಸಂದಿಗ್ಧದಲ್ಲಿದ್ದು, ಜೆಡಿಎಸ್ ತೊರೆಯುವ ಮನಸ್ಸು ಮಾಡುತ್ತಿದ್ದಾರಂತೆ

Karnataka JDS State President CM Brahim Troble in Jds Bjp Alliance
Image Credit to Original Source

ಆದರೆ ಮರಳಿ ಕಾಂಗ್ರೆಸ್ ಗೆ ಹೋಗಲು ಇಬ್ರಾಹಿಂಗೆ ಅವಮಾನ ಹಾಗೂ ಮುಜುಗರದ ಆತಂಕವೂ ಕಾಡುತ್ತಿದೆ. ಹೀಗಾಗಿ ಇಬ್ರಾಹಿಂ ಕಳೆದ ನಾಲ್ಕು ದಿನಗಳಿಂದ ಇಬ್ರಾಹಿಂ ಮೌನಕ್ಕೆ ಜಾರಿದ್ದಾರೆ. ಒಂದೆಡೆ ಇಬ್ರಾಹಿಂ ನಿರ್ಣಯಕೈಗೊಳ್ಳಲಾಗದೇ ಪರದಾಡುತ್ತಿದ್ದರೇ, ಜೆಡಿಎಸ್ ನ ಅಲ್ಪಸಂಖ್ಯಾತ ಘಟಕ ಸೇರಿದಂತೆ ವಿವಿಧ ಜವಾಬ್ದಾರಿಯಲ್ಲಿದ್ದ ಮುಸ್ಲಿಂ ಮುಖಂಡರು ಈಗಾಗಲೇ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.

ಮಾತ್ರವಲ್ಲ ಈ ಮೈತ್ರಿ ವಿರೋಧಿಸಿ ಜೆಡಿಎಸ್ ನ ಮುಸ್ಲಿಂ ಮುಖಂಡರು ರಾಜ್ಯದಾದ್ಯಂತ ಪ್ರವಾಸ ಮಾಡಿ ಇತರರನ್ನು ಜೆಡಿಎಸ್ ತೊರೆಯುವಂತೆ ಮನವೊಲಿಸಲಿದ್ದಾರಂತೆ. ಒಟ್ಟಿನಲ್ಲಿ ಬಿಜೆಪಿ ಜೊತೆ ಮೈತ್ರಿಯಾಗುತ್ತಿದ್ದಂತೆ ಜೆಡಿಎಸ್ ಗೆ ಮುಸ್ಲಿಂ ಶಾಕ್ ಎದುರಾಗಿದೆ.

 

Karnataka JDS State President CM Brahim Troble in Jds Bjp Alliance

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular