ಲೋಕಸಭಾ ಚುನಾವಣೆ 2024: ತುಮಕೂರಿಗೆ ದೇವೇಗೌಡ್ರು, ಹಾಸನಕ್ಕೆ ಪ್ರಜ್ವಲ್‌, ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ !

ಜೆಡಿಎಸ್ ಹಾಗೂ ಬಿಜೆಪಿ ಲೋಕಸಭಾ ಚುನಾವಣೆ 2024 ಗಾಗಿ (Loka Sabha Election 2024) ಒಂದಾಗಿವೆ. ಜೆಡಿಎಸ್ ಮೈತ್ರಿ ಗಾಗಿ ( BJP - JDS Alliance )  ಇದೀಗ ಜೆಡಿಎಸ್‌ ಮೂರು ಸ್ಥಾನಗಳಿಗೂ ದೇವೇಗೌಡರ ಕುಟುಂಬಸ್ಥರನ್ನೇ ಕಣಕ್ಕೆ ಇಳಿಸಲು ಫ್ಲ್ಯಾನ್‌ ಮಾಡಿಕೊಂಡಿದೆ.

ಬೆಂಗಳೂರು : ರಾಜ್ಯದಲ್ಲಿ ಮೈತ್ರಿಯದ್ದೇ ಸುದ್ದಿ. ಸದ್ಯದಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಲೋಕಸಭಾ ಚುನಾವಣೆ 2024ಗಾಗಿ (Loka Sabha Election) ಒಂದಾಗಿವೆ. ದೊಡ್ಡಗೌಡರು (HD Deve Gowda) ಕೇಳಿದ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿಕೊಟ್ಟಿದೆ.. ಈ ಮಧ್ಯೆ ಜೆಡಿಎಸ್ ಮೈತ್ರಿ ಗಾಗಿ ( BJP – JDS Alliance )  ಕೇಳಿದ ಲೋಕಸಭಾ ಕ್ಷೇತ್ರಗಳೆಲ್ಲವೂ ಕುಟುಂಬ ಸದಸ್ಯರ ಸ್ಪರ್ಧೆಗಾಗಿ ಮಾತು ಕೇಳಿಬಂದಿದ್ದು ತೀವ್ರ ಚರ್ಚೆಗೆ ಗುರಿಯಾಗಿದೆ.

HD Kumaraswamy for Tumkur Prajwal Revanna for Hassan, Nikhil Kumaraswamy from Mandya Family politics behind the BJP JDS alliance 
Image Credit To Original Source

ಜೆಡಿಎಸ್ ಬಿಜೆಪಿ ಮೈತ್ರಿಯ ಅಂತಿಮ ಸುತ್ತಿನ ಮಾತುಕತೆ ದೆಹಲಿಯಲ್ಲಿ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡರು (HD Deve Gowda)  ಹಾಗೂ ಮಾಜಿಸಿಎಂ ಕುಮಾರಸ್ವಾಮಿ (HD Kumaraswamy) ಷರತ್ತಿನಂತೆ ಮೂರು ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಗಾಗಿ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿದೆ. ಆದರೆ ಈ ಕ್ಷೇತ್ರಗಳನ್ನು ಜೆಡಿಎಸ್ ರಾಜಕೀಯ ಲೆಕ್ಕಾಚಾರದೊಂದಿಗೆ ಕೇಳಿದ್ದು, ಲೋಕಸಭೆ ಚುನಾವಣೆಯಲ್ಲೂ ಕುಟುಂಬ ರಾಜಕಾರಣ ಮುಂದುವರೆಯಲಿದೆ ಎಂಬ ಟೀಕೆ ಕೇಳಿ ಬಂದಿದೆ.

ರಾಜಕೀಯ ವಲಯದಲ್ಲಿ ನಡೀತಿರೋ ಚರ್ಚೆ ಪ್ರಕಾರ ಜೆಡಿಎಸ್ ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬಿಜೆಪಿಗೆ ಷರತ್ತೊಡ್ಡಿದೆ. ಈ ಷರತ್ತಿಗೆ ಬಹುತೇಕ ಬಿಜೆಪಿ ಒಪ್ಪಿಕೊಂಡಿದೆ . ಹಾಗಿದ್ದರೇ ಇರೋ ಎಲ್ಲಾ ಕ್ಷೇತ್ರಗಳ ಪೈಕಿ ಈ ಮೂರು ಕ್ಷೇತ್ರಗಳನ್ನೇ ಜೆಡಿಎಸ್ ಕೇಳ್ತಾ ಇರೋದು ಯಾಕೆ ಅನ್ನೋದರ ಹಿಂದಿರೋದು ಮತ್ತೆ ಜೆಡಿಎಸ್ ನ ಕುಟುಂಬ ರಾಜಕಾರಣದ ನೆರಳು.

HD Kumaraswamy for Tumkur Prajwal Revanna for Hassan, Nikhil Kumaraswamy from Mandya Family politics behind the BJP JDS alliance 
Image Credit to Original Source

ಇದನ್ನೂ ಓದಿ : ಕೃಷಿಪಂಪ್‌ ಸಕ್ರಮ, ಒಬಿಸಿಗೆ ಕುಂಚಿಟಿಗರ ಸಮುದಾಯ : ಇಲ್ಲಿದೆ ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು

ಸದ್ಯ ವಿಧಾನಸಭಾ ಚುನಾವಣೆಯ ಸೋಲು ಜೆಡಿಎಸ್ ನ್ನು ಕಂಗೆಡಿಸಿದೆ. ಹೀಗೆ ಮುಂದುವರಿದರೇ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಗೆ ಹಿಡಿತ ತಪ್ಪೋ ಭೀತಿ ಎದುರಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಮೂರು ಸ್ಥಾನಗಳನ್ನಾದರೂ ಗೆಲ್ಲಲೇ ಬೇಕೆಂಬುದು ಜೆಡಿಎಸ್ ನ ಹಠ. ಇದಕ್ಕಾಗಿ ಸುಲಭ ಹಾಗೂ ಜೆಡಿಎಸ್ ಪ್ರಭಾವ ಇರೋ ಕ್ಷೇತ್ರಗಳನ್ನೇ ಹುಡುಕಿ ಜೆಡಿಎಸ್ ಬಿಜೆಪಿ ಮುಂದೇ ಬೇಡಿಕೆ ಇಟ್ಟಿದೆ.

ಹಾಸನದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ (Hassan MP Prajwal Revanna) ಸಂಸದರಾಗಿದ್ದಾರೆ. ಒಂದೊಮ್ಮೆ ನ್ಯಾಯಲಯ ಪ್ರಜ್ವಲ್  ರೇವಣ್ಣ ಆಯ್ಕೆ ಅಸಿಂಧುಗೊಳಿಸಿದರೂ ಅಲ್ಲಿ ಜೆಡಿಎಸ್ ಗೆ ಅಭ್ಯರ್ಥಿ ಕೊರತೆಯಾಗೋದಿಲ್ಲ. ಒಂದೊಮ್ಮೆ ಪ್ರಜ್ವಲ್ ಅನರ್ಹಗೊಂಡರೇ ಭವಾನಿ ರೇವಣ್ಣ ನಿಲ್ಲಿಸಿ ಜೆಡಿಎಸ್ ಶಾಸಕರ ಬಲದಿಂದ ಗೆಲ್ಲಿಸಿಕೊಳ್ಳಬಹುದು ಎಂಬುದು ಕುಮಾರಣ್ಣನ ತೀರ್ಮಾನ.

ಇದನ್ನೂ ಓದಿ : ಜೆಡಿಎಸ್- ಬಿಜೆಪಿ ಮೈತ್ರಿಗೆ ಇಂದೇ ಕ್ಲೈಮ್ಯಾಕ್ಸ್‌ : ಯಾವ ಯಾವ ಕ್ಷೇತ್ರ ಯಾರಿಗೆ ಗೊತ್ತಾ ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಇನ್ನು ಮಂಡ್ಯ ಲೋಕಸಭಾ ಕ್ಷೇತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಜಂಟಿಯಾಗಿ ಈ ನೆಲದಿಂದ ನಿಖಿಲ್ (Nikhil Kumaraswamy) ಗೆಲ್ಲಿಸಲು ಪ್ರಯತ್ನಿಸಿದ್ದರೂ ಗೆಲುವು ದಕ್ಕಿರಲಿಲ್ಲ. ಹಾಲಿ ಸಂಸದೆ ಸುಮಲತಾ (Sumalatha)  ಬಿಜೆಪಿ ಬೆಂಬಲಿತ ಸಂಸದೆ. ಒಂದೊಮ್ಮೆ ಮೈತ್ರಿಯಾದರೇ ಸುಮಲತಾರನ್ನು ಬಿಜೆಪಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಇನ್ನು ಸ್ವತಂತ್ರವಾಗಿ ನಿಂತು ಈ ಭಾರಿ ಸುಮಲತಾ ಗೆಲುವು ಸುಲಭವಿಲ್ಲ.

HD Kumaraswamy for Tumkur Prajwal Revanna for Hassan, Nikhil Kumaraswamy from Mandya Family politics behind the BJP JDS alliance 
Image Credit To Original Source

ಇಂಥ ಹೊತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಿಂದ ಕಣಕ್ಕಿಳಿಸಿ ಬಿಜೆಪಿ ಬೆಂಬಲದಿಂದ ಗೆಲ್ಲಿಸಿಕೊಂಡು ಲೋಕಸಭೆ ಮೆಟ್ಟಿಲು ಹತ್ತಿಸಬೇಕು ಅನ್ನೋದು ಕುಮಾರಣ್ಣನ ಕನಸು. ಇನ್ನು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ದೇವೇಗೌಡರು (HD Deve Gowda) ಸೋಲುಂಡರು. ಅದೇ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆದ್ದು ನಿಲ್ಲಬೇಕು ಅನ್ನೋದು ಎಚ್ಡಿಕೆ ಹಾಗೂ ಎಚ್ಡಿಡಿ ಕನಸು.

ಇದನ್ನೂ ಓದಿ : ಹೈಕಮಾಂಡ್ ಗೆ ಸಿದ್ದರಾಮಯ್ಯ ಬಿಟ್ರಾ ಬ್ರಹ್ಮಾಸ್ತ್ರ: ಹರಿಪ್ರಸಾದ್ ಗೆ ನೋಟಿಸ್ ಜಾರಿಯಾಗಿದ್ಹೇಗೆ ?

ಇದಕ್ಕಾಗಿಯೇ ತುಮಕೂರು ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಲಾಗ್ತಿದೆ ಎನ್ನಲಾಗ್ತಿದೆ. ಗೌರಿಶಂಕರ್ ಅಥವಾ ದೇವೇಗೌಡರನ್ನು ಈ ಕ್ಷೇತ್ರದಿಂದ ಗೆಲ್ಲಿಸಬೇಕು ಎಂಬ ಲೆಕ್ಕಾಚಾರದಲ್ಲಿದೆ. ಕಳೆದ ಎಲೆಕ್ಷನ್ ನಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ತುಮಕೂರಿನಲ್ಲಿ ಕಾಂಗ್ರೆಸ್ ಲೋಕಸಭೆ ಮೇಲೆ ಅಂತಹ ಹಿಡಿತವಿಲ್ಲ. ಹಿಂದಿನ ಭಾರಿ ಬಿಜೆಪಿ ಮೊದಲ ಸ್ಥಾನದಲ್ಲಿತ್ತು.‌ ಈ ಭಾರಿ ಬಿಜೆಪಿ ಜೊತೆ ಸೇರಿದರೇ ಅನಾಯಾಸವಾಗಿ ಗೆಲುವು ಸಾಧಿಸಬಹುದು.

ಆ ಮೂಲಕ ರಾಜಕೀಯದ ವೃದ್ದಾಪ್ಯದಲ್ಲಿರೋ ದೇವೆಗೌಡರಿಗೆ ಸೋತಲ್ಲೇ ಗೆಲುವಿನ ಗೌರವ ಕೊಡಿಸೋದು ಕೂಡ ಎಚ್‌.ಡಿ.ಕುಮಾರಸ್ವಾಮಿ ಪ್ಲ್ಯಾನ್ ಎನ್ನಲಾಗ್ತಿದೆ. ಒಟ್ಟಿನಲ್ಲಿ ಜೆಡಿಎಸ್ ಮೈತ್ರಿ ಕೇವಲ ಕುಟುಂಬದ ಲೋಕಸಭಾ ಚುನಾವಣೆ ಗೆಲುವಿಗಾಗಿ ಎಂಬ ಚರ್ಚೆಗೆ ಆಯ್ಕೆಮಾಡಿಕೊಂಡ ಕ್ಷೇತ್ರಗಳು ಪುಷ್ಠಿ ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಚರ್ಚೆಗೆ ಸ್ಪಷ್ಟತೆ ಸಿಗಲಿದೆ.

HD Kumaraswamy for Tumkur Prajwal Revanna for Hassan, Nikhil Kumaraswamy from Mandya Family politics behind the BJP JDS alliance 

Comments are closed.