ದ‌ನಕ್ಕೆ ಬಡಿದಂತೆ ಬಡಿಯುವುದು ಲಾಕ್ ಡೌನ್ ಅಲ್ಲ, ಕನಿಷ್ಟ ಸೌಲಭ್ಯ ನೀಡಿ : ಮಾಜಿ ಸಿಎಂ ಕುಮಾರಸ್ವಾಮಿ‌ ಗರಂ

ಬೆಂಗಳೂರು : ಜನಹಿತದ ಲಾಕ್ ಡೌನ್ ಬದಲು ಹೊರಗೆ ಬಂದ ಜನರಿಗೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಜಾರಿ ಮಾಡುವುದು ಎಷ್ಟು ಸರಿ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರದ ಪರ ಆಕ್ರೋಶ ವ್ಯಕ್ತಪಡಿಸಿರುವ ಕುಮಾರಸ್ವಾಮಿ ಅವರು, ಜನಸಂಚಾರ ತಡೆಯು ವುದು ಲಾಕ್ ಡೌನ್ ಸರಕಾರ ಭಾವಿಸಿದೆ. ಆದರೆ ರಾಜ್ಯ ಸರ್ಕಾರ ಜನರ ಜೀವನದ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದಿರು ವುದು ದುರಂತ ಎಂದಿದ್ದಾರೆ.

ಜನರು ಮನೆಯಿಂದ ಹೊರ ಬಂದರೆ ಅವರ ಮೇಲೆ  ದರ್ಪ ಪ್ರದರ್ಶನ ಮಾಡುವುದನ್ನು ಬಿಟ್ಟು, ಜನ ಹೊರಗೆ ಬಾರದಂತೆ ಅವರ ಅಗತ್ಯ ಗಳನ್ನು ಪೂರೈಸುವ ಹಾಗೂ ಪರಿಹಾರ ಒದಗಿಸುವತ್ತ ಸರ್ಕಾರ ಗಮನಹರಿಸಬೇಕು. ಮಹಾರಾಷ್ಟ್ರ, ಕೇರಳ, ತಮಿಳು ನಾಡು, ಪಶ್ಚಿಮ ಬಂಗಾಲ ರಾಜ್ಯಗಳು ಪೂರ್ವ ಸಿದ್ಧತೆ ಮಾಡಿಕೊಂಡು ಜನರಿಗೆ ಆಹಾರ ಸೇರಿದಂತೆ ಇತರ ಕೆಲವು ಮೂಲಭೂತ ಪರಿಹಾರಗಳನ್ನು ಘೋಷಿಸಿ ಲಾಕ್ ಡೌನ್ ತಂದಿವೆ. ಆಂಧ್ರ ಪ್ರದೇಶದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದು ಸರ್ಕಾರದ ಜವಾಬ್ದಾರಿಯುತ ನಡೆ. ಅದು ಬಿಟ್ಟು ಕೇಂದ್ರದ ಆಣತಿಯಂತೆ ಬಡಜನರಿಗೆ ಕನಿಷ್ಠ ಸೌಲಭ್ಯ ನೀಡದೆ ಲಾಕ್ ಡೌನ್ ಜಾರಿ ಮಾಡಿದರೆ ಜನರು ಹೇಗೆ ಬದುಕಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

Comments are closed.