ಕೊರೋನಾ ಸಂಕಷ್ಟದ ನಡುವೆ ಹೇಗಿತ್ತು ಮೊದಲ ಮದರ್ಸ್ ಡೇ…! ಮೇಘನಾ ರಾಜ್ ಹಂಚಿಕೊಂಡ್ರು ತಮ್ಮ ಅನುಭವ…!!

ನಿನ್ನೆಯಷ್ಟೇ ವಿಶ್ವ ಅಮ್ಮಂದಿರ ದಿನಾಚರಣೆ ಮುಗಿದಿದೆ. ಮೊದಲ ಬಾರಿಗೆ ತಾಯ್ತನದ ಸಂಭ್ರಮ ಅನುಭವಿಸುತ್ತಿರುವ ನಟಿ ಮೇಘನಾ ರಾಜ್ ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದು, ಈ ವೇಳೆ ತಾಯ್ತನದ ಸಂಭ್ರಮಕ್ಕಿಂತ ಕೊರೋನಾ ಸಂಕಷ್ಟದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆಯೇ ಹೆಚ್ಚಿನ ವಿವರ ನೀಡಿದ್ದಾರೆ.

https://kannada.newsnext.live/infosys-foundation-100-crore-donate-covid-crisis/

ತಾಯ್ತನ ಅಥವಾ ಮದರ್ ವುಡ್ ಅನ್ನೋದು  ನೀವು ಪ್ಲ್ಯಾನ್ ಮಾಡಿದ್ದಷ್ಟು, ಪ್ರಿಪೇರ್ ಆಗಿರುವಷ್ಟು ಸರಳವಲ್ಲ ಎಂದಿರುವ ಮೇಘನಾ, ನೀವು ಯಾವುದಕ್ಕೆ ಸಿದ್ಧವಾಗಿರುತ್ತಿರೋ ಅದಕ್ಕಿಂತ ವಿಭಿನ್ನವಾದ ಸವಾಲುಗಳು ನಿಮ್ಮ ಮುಂದಿರುತ್ತವೆ ಎಂದಿದ್ದಾರೆ.

ಅಮ್ಮಂದಿನ ದಿನವೊಂದೇ ಅಲ್ಲ ಮಗುವಿನೊಂದಿಗೆ ಕಳೆಯುವ ಪ್ರತಿ ಕ್ಷಣವೂ ಮದರ್ಸ್ ಡೇ ಯಾಗಿರುತ್ತದೆ ಎಂದ ಮೇಘನಾ, ನಾನು ದಿನದ 24 ಗಂಟೆಯೂ ಮಗನೊಂದಿಗೆ ಸಮಯ ಕಳೆಯುತ್ತ ಅವನ ತುಂಟಾಟ ನೋಡುತ್ತ ಸಂಭ್ರಮಿಸುತ್ತಿದ್ದೇನೆ ಎಂದಿದ್ದಾರೆ.

ಕೊರೋನಾ ಮೊದಲ ಅಲೆಯಲ್ಲಿ ನಾನು, ನನ್ನ ಪೋಷಕರು ಹಾಗೂ ಮಗ ಎಲ್ಲರೂ ಸೋಂಕಿಗೆ ಒಳಗಾಗಿದ್ದು, ನನಗೆ ತುಂಬ ಆತಂಕ ತಂದಿತ್ತು. ನನಗೆ ಅತ್ಯಂತ ಕಡಿಮೆ ಲಕ್ಷಣ ಹಾಗೂ ಆರೋಗ್ಯ ಸಮಸ್ಯೆ ಕಾಡಿತ್ತು. ಆದರೆ ನನ್ನ ತಾಯಿ ನಟಿ ಪ್ರಮೀಳಾ ಜೋಷಾಯ್ ತೀವ್ರ ಸಮಸ್ಯೆಗೆ ತುತ್ತಾದರು. ಮಗನಿಗೂ ಎರಡು ದಿನ ಜ್ವರವಿತ್ತು ಎಂದು ಕೊರೋನಾದ ಸಂಕಷ್ಟ ಬಿಚ್ಚಿಟ್ಟಿದ್ದಾರೆ.4

ಕೊರೋನಾದ ತೀವ್ರತೆಯನ್ನು ನೀವು ಊಹಿಸಲು ಸಾಧ್ಯವಿಲ್ಲ. ಅದು ನಿಮ್ಮ ಬಳಿಗೆ ಬಂದಾಗಲೇ ಗೊತ್ತಾಗುವುದು. ನನ್ನ ತಂದೆ-ತಾಯಿ ಆಸ್ಪತ್ರೆಯಲ್ಲಿದ್ದರೇ, ನಾನೊಬ್ಬಳೇ ಜ್ವರ ಬಂದ ಮಗುವನ್ನು ಎತ್ತಿಕೊಂಡು ಮನೆಯಲ್ಲಿದ್ದೇ, ಆಗ ನನಗೆ ಈ ಸೋಂಕಿನ ಗಂಭೀರತೆ ಅನುಭವಕ್ಕೆ ಬಂತು. ಮಾನಸಿಕವಾಗಿ ದೈಹಿಕವಾಗಿ ನಾನು ಕುಸಿದು ಹೋಗಿದ್ದೇ ಎಂದು ವಿವರಿಸಿದ ಮೇಘನಾ, ನೀವು ಕೊರೋನಾ ಸೋಂಕನ್ನು ಇತರರಿಗೆ ಹರಡುವ ಮಾಧ್ಯಮವಾಗಬೇಡಿ ಎಂದು ಮನವಿ ಮಾಡಿದ್ದಾರೆ.

https://kannada.newsnext.live/shockingnews-after-corona-covid-19-blackvirus-attack-doctors-experts/

ಮದರ್ಸ್ ಡೇ ಪ್ರಯುಕ್ತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಮೇಘನಾ ರಾಜ್, ಕೊರೋನಾದಿಂದಾಗಿ ಜ್ಯೂನಿಯರ್ ಚಿರು ನಾಮಕರಣಕ್ಕೆ ದಿನಾಂಕ ನಿಗದಿಯಾಗಿಲ್ಲ.  ಈ ಸಂಕಷ್ಟದ ಪರಿಸ್ಥಿತಿ ತಿಳಿಗೊಂಡ ಬಳಿಕ ಅದ್ದೂರಿಯಾಗಿ ನಾಮಕರಣ ನಡೆಯಲಿದೆ ಎಂದಿದ್ದಾರೆ.

https://www.facebook.com/BangaloreTimesOfficial/videos/1200795600370264/

ತಮ್ಮ ಮಗ ಕೇವಲ 6 ತಿಂಗಳಿನಲ್ಲೇ ತಂದೆಯನ್ನು ಪೋಟೋದಲ್ಲಿ ಗುರುತಿಸಿದ್ದು, ತನಗೆ ಒಂದು ಪ್ರೌಡ್ ಮೂಮೆಂಟ್ ಎಂದಿರುವ ಮೇಘನಾ ಜ್ಯೂನಿಯರ್ ಚಿರು ಸದಾ ಹಸನ್ಮುಖಿಯಾಗಿ ಆಟವಾಡುತ್ತಾನೆ. ಅಷ್ಟೊಂದು ಅಳುವ ಮಗುವಲ್ಲ ಎಂದು ಖುಷಿಯ ವಿಚಾರ ಹಂಚಿಕೊಂಡಿದ್ದಾರೆ.

https://kannada.newsnext.live/sandalwood-shreemuruli-helping-hand-doctors-foodsuplly/

ಬಹುಕಾಲದ ಬಳಿಕ ಮದರ್ಸ್ ಡೇ ಹೆಸರಿನಲ್ಲಿ ನನಗೊಂದಿಷ್ಟು ಸಮಯ ಫ್ರಿಯಾಗಿ ಸಿಕ್ಕಿದೆ ಎಂದಿರುವ ಮೇಘನಾ ತಮ್ಮ ಕೆರಿಯರ್, ಚಿರು, ಕುಟುಂಬ ಧ್ರುವ್ ನ ಜ್ಯೂನಿಯರ್ ಬಾಂಡಿಂಗ್ ಸೇರಿದಂತೆ ಹಲವು ವಿಚಾರದ ಬಗ್ಗೆ ಮಾತನಾಡಿದ್ದಾರೆ.

Comments are closed.