ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಟ ರಿಯಲ್ಸ್ಟಾರ್ ಉಪೇಂದ್ರ ಕನ್ನಡ ಸಿನಿರಂಗದಲ್ಲಿ ವಿಭಿನ್ನ ರೀತಿಯ ಸಿನಿಮಾಗಳನ್ನು ಸಿನಿಪ್ರೇಕ್ಷಕರಿಗೆ ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಹೊಸ ಪಕ್ಷ ಪ್ರಜಾಕೀಯದ (Prajaakeeya Party) ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಂಬರುವ ಮುಂಬರುವ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಅಗತ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಟ ಉಪೇಂದ್ರ ತಮ್ಮ ಟ್ವೀಟರ್ನಲ್ಲಿ, “ಮುಂಬರುವ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ prajaakeeya.org ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ 24ನೇ ಮಾರ್ಚ್ 2023 ರ ಮಧ್ಯರಾತ್ರಿ 12.00 ಗಂಟೆಗೆ ನಿಗದಿಪಡಿಸಲಾಗಿದೆ. 24 ರ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಅರ್ಜಿಗಳನ್ನು ಸಮಯದೊಳಗೆ ಸಲ್ಲಿಸಿ” ಎನ್ನುವ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
2023 ನೇ ಸಾಲಿನ ವಿಧಾನಸಭಾ ಚುನಾವಣೆಗೆ https://t.co/Hvoq8pCzZV ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ ರಾತ್ರಿ 12 ಗಂಟೆಯ ವರೆಗೆ ಸಮಯವನ್ನು ನಿಗದಿ ಪಡಿಸಲಾಗಿದೆ..
— Upendra (@nimmaupendra) March 19, 2023
24 ಮಾರ್ಚ್ ನಂತರ ಸಲ್ಲಿಕೆಯಾಗುವ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ..
ತಮ್ಮ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಿರಿ#upp
2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ಮುಂಬರುವ 2023ನೇ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಈ ಹಿಂದೆ ಫೆಬ್ರವರಿ 28 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಆದರೆ ಹಲವಾರು ಆಕಾಂಕ್ಷಿಗಳು ಪ್ರತಿದಿನ ಅರ್ಜಿಗಳನ್ನು ಸಲ್ಲಿಸುತ್ತಿದ್ದು, ಮಾರ್ಚ್ 25 ರ ವರೆಗೆ ಹೆಚ್ಚಿನ ಕಾಲಾವಕಾಶವನ್ನು ನೀಡಲಾಗಿದೆ. ಮಾರ್ಚ್ 25, 2023 ರ ವರೆಗೆ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ಎರಡನೇ ವಾರದಲ್ಲಿ ಆಯ್ಕೆಯಾದ ಆಕಾಂಕ್ಷಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ
ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ ಎಂದು ಹೇಳಿದ್ದಾರೆ. ತಮ್ಮದೇ ಆದ ವಿಶೇಷ ನಿಲುವುವನ್ನು ಹೊಂದಿರುವ ಇವರು ರಾಜಕೀಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಾರೆ ಎನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಯಾವುದೇ ಹೆಚ್ಚಿನ ಪ್ರಚಾರವಿಲ್ಲದೇ, ಯಾವುದೇ ಖರ್ಚು ಇಲ್ಲದೇ ಒಬ್ಬ ಪೂರ್ಣ ಪ್ರಮಾಣದ ನಾಯಕ ದೇಶದ ಜನತೆಗಾಗಿ ಕೆಲಸ ಮಾಡಬೇಕು ಎನ್ನುವುದು ಎಲ್ಲರಿಗೂ ಇಷ್ಟವಾಗುವಂತಹ ವಿಚಾರವಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಲಿದೆ ಎನ್ನುವುದು ಎಲ್ಲರ ಕುತೂಹಲವಾಗಿದೆ.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ 2023 : ಇಲ್ಲಿದೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ
ಇನ್ನು ನಟ ಉಪೇಂದ್ರ ಅಭಿನಯದ “ಕಬ್ಜ” ಸಿನಿಮಾ ದೇಶದಾದ್ಯಂತ ಅದ್ಭುತ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಮುನ್ನುಗುತ್ತಿದೆ. ಈ ಸಿನಿಮಾ ಬಿಡುಗಡೆಯಾದ ದಿನವೇ ವಿಶ್ವದಾದ್ಯಂತ 54 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು ಕಬ್ಜ ಸಿನಿಮಾ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ್ದು, ಭರ್ಜರಿ ಯಶಸ್ಸನ್ನು ಗಳಿಸಿದೆ. ಈ ಸಿನಿಮಾವನ್ನು ಆರ್ ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಉಪೇಂದ್ರ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ. ಸುದೀಪ್ ಭಾರ್ಗವ್ ಬಕ್ಷಿಯಾಗಿ ವಿಶೇಷ ಅತಿಥಿ ಪಾತ್ರವನ್ನು ಹೊಂದಿದ್ದು ಅದು ಪ್ರಭಾವ ಬೀರಲು ನಿರ್ವಹಿಸುತ್ತದೆ. ಮಧುಮತಿಯಾಗಿ ಶ್ರಿಯಾ ಸರನ್ ಭಾವನಾತ್ಮಕವಾಗಿ ಅಭಿನಯಿಸಿದ್ದಾರೆ. ಮುರಳಿ ಶರ್ಮಾ, ಸುನಿಲ್ ಪುರಾಣಿಕ್ ಮತ್ತು ಅನೂಪ್ ರೇವಣ್ಣ ತಮ್ಮ ಅತ್ಯುತ್ತಮವಾದುದನ್ನು ನೀಡಿದ್ದಾರೆ.
Karnataka MLA Election 2023 : March 24 is the last day for Prajaakeeya Party nominations.