Karnataka MLC ELECTION 2022 : ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆತ ಬಿಜೆಪಿ : ಪರಿಷತ್ ಗೆ ಬಿ.ವೈ.ವಿಜಯೇಂದ್ರ ಗಿಲ್ಲ ಟಿಕೆಟ್

ಬೆಂಗಳೂರು : ಕೊನೆಯ ಕ್ಷಣದಲ್ಲಿ ಬಿಜೆಪಿ ವಿಧಾನಪರಿಷತ್ ಗೆ (Karnataka MLC ELECTION 2022) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ನೀರಿಕ್ಷೆಯಂತೆ ಹೈಕಮಾಂಡ್ ಕೈ ಮೇಲಾಗಿದೆ. ರಾಜ್ಯ ಬಿಜೆಪಿಯ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ ಬಿಜೆಪಿ ಹೈಕಮಾಂಡ್ ಎಂದಿನಂತೆ ಅನೀರಿಕ್ಷಿತವಾಗಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಿ ಕುಟುಂಬ ರಾಜಕಾರಣಕ್ಕೆ ರೆಡ್ ಸಿಗ್ನಲ್ ತೋರಿದೆ. ಮಾತ್ರವಲ್ಲ ವಿಧಾನಪರಿಷತ್ ಗೆ (Karnataka MLC ELECTION 2022) ಬಿಜೆಪಿ ಪ್ರಕಟಿಸಿರುವ ಬಿಜೆಪಿ ಅಭ್ಯರ್ಥಿ ಪಟ್ಟಿ ಕಮಲ ಪಡೆಯ ಕುಟುಂಬ ರಾಜಕಾರಣದ ಆಕಾಂಕ್ಷಿಗಳಿಗೆ ಎಚ್ಚರಿಕೆ ಕರೆಗಂಟೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ವಿಧಾನ ಪರಿಷತ್ ಚುನಾವಣೆ (Karnataka MLC ELECTION 2022 ) ಘೋಷಣೆ ಆದ ದಿನದಿಂದಲೂ ಬಿಜೆಪಿಯಲ್ಲಿ ಚಾಲ್ತಿಯಲ್ಲಿದ್ದ ಒಂದೇ ಹೆಸರು ಬಿ.ವೈ.ವಿಜಯೇಂದ್ರ. ಬಿ.ವೈ.ವಿಜಯೇಂದ್ರ ವಿಧಾನ ಪರಿಷತ್ ಸದಸ್ಯರಾಗೋದು, ಸಚಿವರಾಗೋದು ಬಹುತೇಕ‌ ಖಚಿತ ಎಂಬಷ್ಟರ ಮಟ್ಟಿಗೆ ಚರ್ಚೆಗಳು ತೀವ್ರಗೊಂಡಿದ್ದವು. ಆದರೆ ಈಗ ಈ ಎಲ್ಲ ಊಹಾಪೋಹಗಳಿಗೆ ಬಿಜೆಪಿ ತೆರೆ ಎಳೆದಿದೆ.

ಅಧಿಕೃತವಾಗಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಬಿಜೆಪಿ ವಕ್ತಾರರಾಗಿದ್ದ ಛಲವಾದಿ ನಾರಾಯಣಸ್ವಾಮಿ, ಹಿಂದುಳಿದ ವರ್ಗದ ಕೇಶವ್ ಪ್ರಸಾದ್ ಹಾಗೂ ಮಹಿಳಾ ಖೋಟಾದಲ್ಲಿ ಹೇಮಲತಾ ನಾಯಕ್ ಗೆ ಟಿಕೇಟ್‌ನೀಡಿದೆ. ಆ ಮೂಲಕ ಮೋದಿಯವರು ಈಗಾಗಲೇ ಘೋಷಿಸಿದಂತೆ ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ಪರ್ವ ಅಂತ್ಯಗೊಂಡಿದೆ ಎಂದು ಪರೋಕ್ಷವಾಗಿ ಹೈಕಮಾಂಡ್ ಸೂಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯಿತ ಸಮುದಾಯದ ಮತಗಳು, ಬಿಜೆಪಿ ಸಂಘಟನೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪಾತ್ರ, ಪಕ್ಷಕ್ಕಾಗಿ ಬಿಎಸ್ವೈ ದುಡಿದ ರೀತಿ ಹಾಗೂ ಸಿಎಂ ಸ್ಥಾನ ತ್ಯಾಗ ಮಾಡಿದ್ದು ಎಲ್ಲವನ್ನು ಪರಿಗಣಿಸಿ ಮುಖ್ಯವಾಗಿ 2023 ರ ವಿಧಾನಸಭಾ ಚುನಾವಣೆಯನ್ನು ಬಿಎಸ್ವೈ ನಾಯಕತ್ವದಲ್ಲಿ ಎದುರಿಸಬೇಕೆಂಬ ಕಾರಣಕ್ಕೆ ರಾಜ್ಯ ಬಿಜೆಪಿ ಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಹೆಸರನ್ನು ಶಿಫಾರಸ್ಸು ಮಾಡಿತ್ತು.

ಆದರೆ ಬಿ.ವೈ.ವಿಜಯೇಂದ್ರ ಗೆ ಪರಿಷತ್ ಸ್ಥಾನ‌ ನೀಡಿದರೇ ಬಿಜೆಪಿ ಒಂದೇ ಕುಟುಂಬಕ್ಕೇ ಮೂರು ಸ್ಥಾನ ನೀಡಿದಂತಾಗುತ್ತದೆ. ಹಾಲಿ ಶಾಸಕರು, ಮಾಜಿಸಿಎಂ ಆಗಿರುವ ಬಿಎಸ್ವೈ ಹಾಗೂ ಅವರ ಪುತ್ರ ಸಂಸದ ಬಿವೈ ರಾಘವೇಂದ್ರ ಗೆ ಈಗಾಗಲೇ ಪಕ್ಷದಿಂದ ಟಿಕೇಟ್ ನೀಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ ಈ ಸ್ಥಾನವನ್ನು ಬಿ.ವೈ.ವಿಜಯೇಂದ್ರಗೆ ನೀಡಿದರೇ ಬಿಜೆಪಿ ಕುಟುಂಬ ರಾಜಕಾರಣದ ಉದಾಹರಣೆ ಎಂಬ ಹಣೆಪಟ್ಟಿ ಪಡೆಯಬೇಕಾಗುತ್ತದೆ ಎಂದು ಸ್ವತಃ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗ್ತಿದೆ.

ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಎದುರು ಮುಜುಗರಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಬಿಜೆಪಿ ಈ ದಿಟ್ಟ ನಿರ್ಧಾರ ಕೈಗೊಂಡಿದ್ದು ಇದರಿಂದ ಬಿಜೆಪಿ ಮುಂದಿನ ದಿನದಲ್ಲಿ ಮತ್ತೊಮ್ಮೆ ಬಿ.ಎಸ್.ಯಡಿಯೂರಪ್ಪ ಅಸಹಕಾರ ಹಾಗೂ ಅಸಮಧಾನಕ್ಕೆ ಗುರಿಯಾದರೂ ಅಚ್ಚರಿಯೇನಿಲ್ಲ.

ಇದನ್ನೂ ಓದಿ : Bus Lorry Accident : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ : ಬಸ್‌ -ಲಾರಿ ಢಿಕ್ಕಿ, 9 ಸಾವು, 24 ಮಂದಿಗೆ ಗಾಯ

ಇದನ್ನೂ ಓದಿ : BY Vijayendra : ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಗೆ ನೊರೆಂಟು ವಿಘ್ನ : ಬೇರೆಯದೇ ಲೆಕ್ಕಾಚಾರದಲ್ಲಿದೆ ಹೈಕಮಾಂಡ್

Karnataka MLC ELECTION 2022 BJP Ticket Final

Comments are closed.