legislative council election list : ಬಿಜೆಪಿಯಿಂದ ಎಂಎಲ್​ಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ವಿಜಯೇಂದ್ರಗೆ ಭಾರಿ ನಿರಾಸೆ

ಬೆಂಗಳೂರು : legislative council election list : ವಿಧಾನ ಪರಿಷತ್​ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯದಿನವಾಗಿರುವ ಹಿನ್ನೆಲೆಯಲ್ಲಿ ಕೊನೆಗೂ ಬಿಜೆಪಿ ಎಂಎಲ್​ಸಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಆಗಿದೆ. ಜಾತಿವಾರು ಆಧಾರದಲ್ಲಿ ಬಿಜೆಪಿಯು ಎಂಎಲ್​ಸಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಮಾಡಿದೆ. ಈ ಬಾರಿಯ ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿಯಿಂದ ಛಲವಾದಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್​, ಹೇಮಲತಾ ನಾಯಕ್​, ಬಸರವಾಜ ಹೊರಟ್ಟಿ ಹಾಗೂ ಲಕ್ಷ್ಮಣ ಸವದಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಪಶ್ಚಿಮ ಕ್ಷೇತ್ರದಿಂದ ಬಸವರಾಜ ಹೊರಟ್ಟಿ ಕಣಕ್ಕಿಳಿಯಲಿದ್ದಾರೆ.


ಹಿಂದುಳಿದ ವರ್ಗಗಳ ಕೋಟಾದ ಅಡಿಯಲ್ಲಿ ಕೇಶವ ಪ್ರಸಾದ್​ಗೆ ಈ ಬಾರಿ ಬಿಜೆಪಿಯು ಎಂಎಲ್​ಸಿ ಟಿಕೆಟ್​ ನೀಡಿದೆ. ವಿಧಾನ ಪರಿಷತ್​ ಚುನಾವಣೆಗೆ ಈ ಬಾರಿಗೆ ಕೇಶವ ಪ್ರಸಾದ್​ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ಅನೇಕ ದಿನಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇತ್ತು. ರಾಜ್ಯ ಬಿಜೆಪಿಯ ಕಾರ್ಯಲಯ ಕಾರ್ಯದರ್ಶಿಯಾಗಿರುವ ಕೇಶವ ಪ್ರಸಾದ್​ ಇದೇ ಮೊದಲ ಬಾರಿಗೆ ವಿಧಾನ ಪರಿಷತ್​ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.


ಕೆಲವು ವಾರಗಳ ಹಿಂದೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭೇಟಿ ನೀಡಿದ ವೇಳೆಯಲ್ಲಿ ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಹೊರಹಾಕಿದ್ದ ಬಸವರಾಜ ಹೊರಟ್ಟಿ ಬಳಿಕ ಈ ಬಾರಿಯ ವಿಧಾನ ಪರಿಷತ್​ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್​ ಹಾಗೂ ಪರಿಷತ್​ ಸಭಾಪತಿ ಸ್ಥಾನಕ್ಕೆ ಕೆಲವು ದಿನಗಳ ಹಿಂದಷ್ಟೇ ರಾಜೀನಾಮೆ ನೀಡಿದ್ದರು. ಇದೀಗ ಬಿಜೆಪಿಯಿಂದ ಇವರಿಗೆ ಟಿಕೆಟ್​ ಫೈನಲ್​ ಆಗಿದ್ದು ಇಂದು ಪಕ್ಷದಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸಲಿದ್ದಾರೆ.


ಮಹಿಳಾ ಕೋಟಾದ ಅಡಿಯಲ್ಲಿ ಈ ಬಾರಿ ಬಿಜೆಪಿಯಿಂದ ಮಂಜುಳಾರಿಗೆ ಟಿಕೆಟ್​ ನೀಡಲಾಗುತ್ತದೆ ಎಂದೇ ಹೇಳಲಾಗಿತ್ತು. ಬಿಜೆಪಿ ರೈತ ಮೋರ್ಛಾ ಉಪಾಧ್ಯಕ್ಷೆಯಾಗಿರುವ ಸಿ. ಮಂಜುಳಾ ಎಂಎಲ್​ಸಿ ಟಿಕೆಟ್​ ಸಿಗುತ್ತದೆಂದು ಬಿಜೆಪಿ ಕಚೇರಿಗೆ ಕೂಡ ಇಂದು ಆಗಮಿಸಿದ್ದರು. ಆದರೆ ಈ ಲೆಕ್ಕಾಚಾರ ಬುಡಮೇಲು ಮಾಡಿರುವ ಬಿಜೆಪಿ ಹೈಕಮಾಂಡ್​ ಮಹಿಳಾ ಹಾಗೂ ನಾಯಕ ಕೋಟಾದಡಿಯಲ್ಲಿ ಹೇಮಲತಾ ನಾಯಕ್​ರಿಗೆ ಟಿಕೆಟ್​ ನೀಡಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಹೇಮಲತಾ ಇದೇ ಮೊದಲಬಾರಿಗೆ ಎಂಎಲ್​ಸಿ ಚುನಾವಣೆ ಎದುರಿಸಲಿದ್ದಾರೆ.


ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೆಸರು ಕಳೆದ ಅನೇಕ ದಿನಗಳಿಂದ ಎಂಎಲ್​ಸಿ ಟಿಕೆಟ್​ ರೇಸ್​ನಲ್ಲಿ ಕೇಳಿ ಬಂದಿತ್ತು. ಅದರಂತೆಯೇ ಲಕ್ಷ್ಮಣ ಸವದಿಗೆ ಲಿಂಗಾಯತ ಕೋಟಾದಡಿಯಲ್ಲಿ ವಿಧಾನ ಪರಿಷತ್​ ಚುನಾವಣಾ ಟಿಕೆಟ್ ಘೋಷಣೆಯಾಗಿದೆ.


ಜಾತಿ ಸಮೀಕರಣದಲ್ಲಿ ದಲಿತ ಕೋಟಾದಡಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಬಿಜೆಪಿಯಿಂದ ಎಂಎಲ್​ಸಿ ಟಿಕೆಟ್​ ಪಡೆದುಕೊಂಡಿದ್ದಾರೆ. ಈ ಮೊದಲು ಕಾಂಗ್ರೆಸ್​ನಲ್ಲಿದ್ದ ಛಲವಾದಿ ಬಳಿಕ ಬಿಜೆಪಿ ಸೇರ್ಪಡೆಯಾಗಿ ಎಸ್ಸಿ ಮೋರ್ಚಾದ ಅಧ್ಯಕ್ಷರು ಕೂಡ ಆಗಿದ್ದಾರೆ. ಇವರು ಕೂಡ ಇದೇ ಮೊದಲ ಬಾರಿಗೆ ಪರಿಷತ್​ ಚುನಾವಣೆ ಎದುರಿಸಲಿದ್ದಾರೆ.


ಈ ಬಾರಿ ವಿಧಾನಪರಿಷತ್​ ಚುನಾವಣೆಗೆ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ವಿಜಯೇಂದ್ರರಿಗೆ ತೀವ್ರ ನಿರಾಶೆಯುಂಟು ಮಾಡಿರುವ ಬಿಜೆಪಿ ಹೈಕಮಾಂಡ್​ ಇವರ ಹೆಸರನ್ನು ಕೈಬಿಟ್ಟಿದೆ. ಆದರೆ ಉನ್ನತ ಮೂಲಗಳ ಪ್ರಕಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ವಿಜಯೇಂದ್ರರನ್ನು ಪರಿಗಣಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Harshal Patel injured : ಆರ್‌ಸಿಬಿ ತಂಡಕ್ಕೆ ಬಿಗ್‌ ಶಾಕ್‌ : ಖ್ಯಾತ ಬೌಲರ್‌ ಹರ್ಷಲ್‌ ಪಟೇಲ್‌ಗೆ ಗಾಯ

ಇದನ್ನೂ ಓದಿ : Heavy Rain Yellow Alert : ತಮಿಳುನಾಡಲ್ಲಿ ಮೇಲ್ಮೈ ಸುಳಿಗಾಳಿ ಕರ್ನಾಟಕದಲ್ಲಿ ಬಾರೀ ಮಳೆ : ಉಡುಪಿ, ದ.ಕ. ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್‌

legislative council election list of bjp candidates officially announced

Comments are closed.