Karnataka New CM : ರಾಜ್ಯಕ್ಕೆ ಮತ್ತೆ ಹೊಸ ಸಿಎಂ : ಬೊಮ್ಮಾಯಿ ಹುದ್ದೆಗೆ ಕಂಟಕವಾಯ್ತು ಮಂಡಿನೋವು

ಬೆಂಗಳೂರು : ರಾಜ್ಯದಲ್ಲಿ ಎಲ್ಲವೂ ಸರಿಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ರಾಜ್ಯ ಬಿಜೆಪಿ ಪ್ರಹಸನದ ಮುನ್ಸೂಚನೆ ಸಿಕ್ಕಿದ್ದು, ಮತ್ತೆ ಸಿಎಂ ಬದಲಾವಣೆಯ (Karnataka New CM) ಸಂಗತಿ ಮುನ್ನಲೆಗೆ ಬರುತ್ತಿದೆ. ಕೆಲವೇ ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ (Chief Minister Basavaraj Bommai ) ಜನವರಿ ವೇಳೆಗೆ ರಾಜೀನಾಮೆ ನೀಡಲಿದ್ದು ಬೊಮ್ಮಾಯಿ ರಾಜೀನಾಮೆಗೆ ಕಾರಣ ಕುತೂಹಲ ಮೂಡಿಸಿದೆ.

ಆಂತರಿಕ ಕಲಹ, ಶಾಸಕರ ಭಿನ್ನಮತದ ಕಾರಣ ಮುಂದಿಟ್ಟು ಕೊಂಡು ಬಿಎಎಸ್ವೈರನ್ನು ಅಧಿಕಾರದಿಂದ ಕೆಳಕ್ಕಿಳಿಸಿದ ಬಿಜೆಪಿ ಬೊಮ್ಮಾಯಿಗೆ ಪಟ್ಟ ಕಟ್ಟಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿ ಇನ್ನೇನು ಎಲ್ಲವನ್ನೂ ಸರಿ ತೂಗಿಸಿಕೊಂಡು ಹೋಗುತ್ತಿದ್ದಾರೆ ಎಂದುಕೊಳ್ಳುವಾಗಲೇ ಮತ್ತೆ ಬೊಮ್ಮಾಯಿ ಪದತ್ಯಾಗದ ಮಾತು ಕೇಳಿಬಂದಿದೆ.

ಆದರೆ ಈ ಭಾರಿ ರಾಜಕೀಯ ಕಾರಣವಿಲ್ಲದೇ ವೈಯಕ್ತಿಕ ಕಾರಣಕ್ಕೆ ಸಿಎಂ ರಾಜೀನಾಮೆ‌ನೀಡುತ್ತಾರೆ ಎಂಬುದು ಸದ್ಯ ತಿಳಿದು ಬರ್ತಿರೋ ಸಂಗತಿ. ಮೂಲಗಳ ಮಾಹಿತಿ ಪ್ರಕಾರ ಸಿಎಂ ಬಸವರಾಜ್ ಬೊಮ್ಮಾಯಿ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ತುರ್ತಾಗಿ ಮಂಡಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜನವರಿಯಲ್ಲಿ ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಿಎಂ ಬೊಮ್ಮಾಯಿ ಅಮೇರಿಕಾಗೆ ತೆರಳಲಿದ್ದಾರೆ. ಈಗಾಗಲೇ ವೀಸಾಗೆ ಅರ್ಜಿ ಸಲ್ಲಿಸಿರುವ ಸಿಎಂ ಬೊಮ್ಮಾಯಿ ಅಧಿವೇಶನ ಮುಗಿಯುತ್ತಿದ್ದಂತೆ ಅಮೇರಿಕಾಕ್ಕೆ ತೆರಳಲಿದ್ದಾರಂತೆ.

ಮಂಡಿ ನೋವಿನ ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಟ ಮೂರು ತಿಂಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯೋದು ಅನಿವಾರ್ಯ. ಹೀಗಾಗಿ ಸಿಎಂ ಯಾವುದೇ ಕಾರ್ಯ ಕಲಾಪ, ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳುವುದು ಕಷ್ಟ. ಮೂರು ತಿಂಗಳು ಸಿಎಂ ಇಲ್ಲದೇ ಅಧಿಕಾರ ನಡೆಸುವುದು ಕೂಡ ಕಷ್ಟ. ಈ ಕಾರಣಕ್ಕಾಗಿ ಸಿಎಂ ಬೊಮ್ಮಾಯಿ ಜನವರಿ ಮೊದಲ ವಾರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಈಗಾಗಲೇ ವೈದ್ಯರು ಮಂಡಿ ಶಸ್ತ್ರಚಿಕಿತ್ಸೆ ಬಳಿಕ ಒಂದಿಷ್ಟು ಕಾಲ ದೂರ ದೂರದ ಪ್ರಯಾಣ. ಹಲವು ಗಂಟೆಗಳ ಕಾಲ ನಿಂತುಕೆಲಸ ಮಾಡುವುದು ಸೇರಿದಂತೆ ಶ್ರಮದಾಯಕ ಕೆಲಸ ಮಾಡದಂತೆ ಸೂಚಿಸಿದ್ದಾರಂತೆ‌

ಇದರಿಂದ ಮುಂದಿನ ಚುನಾವಣೆಯನ್ನು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಸುವ ಬಿಜೆಪಿ ಲೆಕ್ಕಾಚಾರವೂ ಈಡೇರುವುದು ಸಾಧ್ಯವಿಲ್ಲ. ಹೀಗಾಗಿ ಬೊಮ್ಮಾಯಿ ರಾಜೀನಾಮೆ ನೀಡಿ ಶಸ್ತ್ರಚಿಕಿತ್ಸೆ ಹಾಗೈ ವಿಶ್ರಾಂತಿಗೆ ತೆರಳಲಿದ್ದು, ಬಿಜೆಪಿ ಉಳಿದ ಒಂದೂವರೆ ವರ್ಷದ ಅವಧಿ ಹಾಗೂ ಮುಂದಿನ ಚುನಾವಣೆಗೆ ಸೂಕ್ತವಾಗುವ ನಾಯಕತ್ವಕ್ಕಾಗಿ ಹುಡುಕಾಟ ಆರಂಭಿಸಿದೆಯಂತೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಪ್ರಹಸನ ಜೋರಾಗುವ ಮುನ್ಸೂಚನೆ ಸಿಕ್ಕಿದ್ದು ಐದು ವರ್ಷದ ಅವಧಿಯ ಸರ್ಕಾರಕ್ಕೆ ಮೂರನೇ ಮುಖ್ಯಮಂತ್ರಿ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬೊಮ್ಮಾಯಿಗೆ ಮೊಟ್ಟೆ ಸಂಕಟ: ಲಿಂಗಾಯತರಿಂದಲೇ ಸರ್ಕಾರ ಪತನ ಎಂದ ಸ್ವಾಮೀಜಿ

ಇದನ್ನೂ ಓದಿ : Atmanirbhar DMK MP Kanimozhi : ಈ ಕಾರಣಕ್ಕೆ ಸಂಸತ್ತಿನಲ್ಲಿ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ ಡಿಎಂಕೆ ಸಂಸದೆ..!

(Karnataka New CM : Knee pain Reason Chief Minister Basavaraj Bommai Change)

Comments are closed.