Anushka Virat Wedding Anniversary : ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ: ವಿರುಷ್ಕಾ ಖರೀದಿಸಿದ ದುಬಾರಿ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ

ವಿರಾಟ್​​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ( Anushka Virat Wedding Anniversary) ಇಂದು ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ 2017ರ ಡಿಸೆಂಬರ್​ 11ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಬೆಳಗ್ಗೆಯಿಂದಲೇ ಅಭಿಮಾನಿಗಳಿಂದ ವಿರುಷ್ಕಾ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರ್ತಿದೆ. ವಿರುಷ್ಕಾ ದಂಪತಿ ಖರೀದಿ ಮಾಡಿದ 7 ಅತ್ಯಂತ ದುಬಾರಿ ವಸ್ತುಗಳ ಪಟ್ಟಿ ಇಲ್ಲಿದೆ ನೋಡಿ :

Anushka -Virat Wedding Anniversary : Here are 7 expensive things the couple own 1

ಮುಂಬೈನ 34 ಕೋಟಿ ರೂಪಾಯಿ ನಿವಾಸ:ವಿವಾಹದ ಬಳಿಕ ಈ ದಂಪತಿ ಮುಂಬೈನ ಐಷಾರಾಮಿ ನಿವಾಸದಲ್ಲಿ ವಾಸವಿದ್ದಾರೆ.7171 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ನಿವಾಸದ ಮೌಲ್ಯ ಬರೋಬ್ಬರಿ 34 ಕೋಟಿ ರೂಪಾಯಿ..! ಈ ಮನೆಯಲ್ಲಿ ವೈಯಕ್ತಿಕ ಟೆರ್ರಾಸ್​, ಜಿಮ್, ಗಾರ್ಡನ್​ ಸೇರಿದಂತೆ ವಿವಿಧ ಸೌಲಭ್ಯಗಳು ಇವೆ. ಅನುಷ್ಕಾ ಶರ್ಮಾ ಅಂಧೇರಿಯ ಯಾರಿ ರಸ್ತೆಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ 3 ಬಿಹೆಚ್​​ಕೆ ಫ್ಲ್ಯಾಟ್​ ಹೊಂದಿದ್ದಾರೆ.

Anushka -Virat Wedding Anniversary : Here are 7 expensive things the couple own 2

ವಿರಾಟ್​ ಕೊಹ್ಲಿ ವಾಚ್​: ವಿರಾಟ್​ ಕೊಹ್ಲಿಯ ಕೊಸ್ಮೋಗ್ರಾಫ್​ ಡಯ್ಟೋನಾ ರೇನ್​ಬೌ ಎವರ್​ರೋಸ್​​ ಗೋಲ್ಡ್​ ಇವರ ಬಳಿ ಇರುವ ಅತ್ಯಂತ ದುಬಾರಿ ವಾಚ್​ ಆಗಿದೆ. ಇದು ರೆಲೋಕ್ಸ್​ನ ಅತ್ಯಂತ ದುಬಾರಿ ವಾಚ್​ ಸಹ ಹೌದು. ಇದರ ಬೆಲೆ ಸರಿ ಸುಮಾರು 87 ಲಕ್ಷ ರೂಪಾಯಿ ಇದೆ.

Anushka -Virat Wedding Anniversary : Here are 7 expensive things the couple own 3

ಅನುಷ್ಕಾ ಶರ್ಮಾ ಕಾರು : ಅನುಷ್ಕಾ ಶರ್ಮಾರ ಲ್ಯಾಂಡ್​ ರೇಂಜ್​ ರೋವರ್​ ಆಟೋಬಯೋಗ್ರಫಿ ವಿಶ್ವದ ಅತ್ಯಂತ ದುಬಾರಿ ಎಸ್​ಯುವಿಗಳಲ್ಲಿ ಒಂದಾಗಿದೆ. ಅನುಷ್ಕಾ ಇದನ್ನು 2018ರಲ್ಲಿ 4 ಕೋಟಿ ರೂಪಾಯಿ ನೀಡಿ ಖರೀದಿಸಿದ್ದರು.

Anushka -Virat Wedding Anniversary : Here are 7 expensive things the couple own 3


ವಿರಾಟ್​ ಕೊಹ್ಲಿ ಕಾರು : ವಿರಾಟ್​ ಕೊಹ್ಲಿಯ ಬೆಂಟ್ಲಿ ಕಾಂಟಿನೆಂಟಲ್​ ಫ್ಲೈಯಿಂಗ್​ ಸ್ಪರ್​ ಕಾರು ಸರಿ ಸುಮಾರು 3.40 ಕೋಟಿ ರೂಪಾಯಿಯಿಂದ 4.6 ಕೋಟಿ ರೂಪಾಯಿ ಮೌಲ್ಯ ವನ್ನು ಹೊಂದಿದೆ. ಇದೇ ಕಾರಿನಲ್ಲಿ ಒಮ್ಮೆ ವಿರಾಟ್​ ಕೊಹ್ಲಿ ತಮ್ಮ ಪತ್ನಿ ಹಾಗೂ ಮಗುವಿನ ಜೊತೆ ಆಸ್ಪತ್ರೆಯೊಂದರ ಎದುರು ಕಾಣಿಸಿಕೊಂಡಿದ್ದರು.

ಆಡಿ ಆರ್​ಎಸ್​ 5: ವಿರಾಟ್​ ಕೊಹ್ಲಿಯ ಆಡಿ ಆರ್​​ಎಸ್​ 5 ಕಾರು 1.10 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದರಲ್ಲಿ 2.9 ಲೀಟರ್​ ಟಿಎಸ್​​ಎಸ್​ಐ ವಿ 6 ಟ್ವಿನ್​ ಟರ್ಬೊ ಎಂಜಿನ್​ ಇದೆ.
ವರದಿಗಳ ಪ್ರಕಾರ ಅನುಷ್ಕಾ ಶರ್ಮಾ ಕ್ಲೀನ್​ ಸ್ಲೇಟ್​ ಫಿಲಂ ಆಫೀಸ್​ನ್ನು ಲೋಖಂಡೆವಾಲಾದಲ್ಲಿ ನಡೆಸುತ್ತಿದ್ದಾರೆ. ತಮ್ಮ ಸಹೋದರ ಕರ್ಣೇಶ್​ ಶರ್ಮಾ ಜೊತೆಯಲ್ಲಿ ನಡೆಸುತ್ತಿರುವ ಈ ಕಚೇರಿಗೆ 4.5 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ.

Anushka -Virat Wedding Anniversary : Here are 7 expensive things the couple own 4


ವಿರಾಟ್​ ಕೊಹ್ಲಿ ದೆಹಲಿ ನಿವಾಸ : ಗುರುಗಾಂವ್​​ನಲ್ಲಿರುವ ವಿರಾಟ್​ ಕೊಹ್ಲಿ ನಿವಾಸದ ಬೆಲೆ ಬರೋಬ್ಬರಿ 80 ಕೋಟಿ ರೂಪಾಯಿ ಆಗಿದೆ. ವಿರಾಟ್​ ಕೊಹ್ಲಿ ದಂಪತಿ ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದ ವೇಳೆಯಲ್ಲಿ ಇದೇ ಐಷಾರಾಮಿ ಬಂಗಲೆಯಲ್ಲಿ ನೆಲೆಸಿದ್ದರು.

ಇದನ್ನು ಓದಿ: IPL 2022 Ahmedabad Team : ಅಹಮದಾಬಾದ್‌ಗೆ ಶ್ರೇಯಸ್ ಅಯ್ಯರ್ ನಾಯಕ, ಸಾಥ್‌ ಕೊಡ್ತಾರೆ ಫಾಫ್ ಡು ಪ್ಲೆಸಿಸ್, ಶಿಖರ್‌ ಧವನ್‌

ಇದನ್ನೂ ಓದಿ: Durex : ಕತ್ರಿನಾ – ವಿಕ್ಕಿ ವಿವಾಹಕ್ಕೆ ಡ್ಯುರೆಕ್ಸ್​ ಕಾಂಡೋಮ್​ ಶುಭಕೋರಿದ ಪರಿ ಕಂಡು ಹೊಟ್ಟೆ ಹುಣ್ಣಾಗುವಷ್ಟು ನಕ್ಕ ನೆಟ್ಟಿಗರು..!

Anushka -Virat Wedding Anniversary : Here are 7 expensive things the couple own

Comments are closed.