ಸೋಮವಾರ, ಏಪ್ರಿಲ್ 28, 2025
HomepoliticsN.Mahesh: ಕೊಳ್ಳೆಗಾಲ ಶಾಸಕ ಎನ್ .ಮಹೇಶ್ ಗೆ ಪತ್ನಿ ವಿಯೋಗ

N.Mahesh: ಕೊಳ್ಳೆಗಾಲ ಶಾಸಕ ಎನ್ .ಮಹೇಶ್ ಗೆ ಪತ್ನಿ ವಿಯೋಗ

- Advertisement -

ಕೊಳ್ಳೆಗಾಳ: ಕೊಳ್ಳೆಗಾಲದ ಶಾಸಕ ಎನ್. ಮಹೇಶ್ ಪತ್ನಿ ವಿಜಯಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ 11.30 ರ ವೇಳೆಗೆ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಎನ್.ಮಹೇಶ್ ಪತ್ನಿ ವಿಜಯಾ ಅವರು ನಿಧನರಾಗಿದ್ದಾರೆ.

ಮೃತರು ಪತಿ ಹಾಗೂ ಶಾಸಕ ಎನ್. ಮಹೇಶ್ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಮಂಡ್ಯ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ವಿಜಯಾ ಅವರು ಕಳೆದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಕನಕಪುರದಲ್ಲಿರುವ ಕಾನ್ಸಿ ಫೌಂಡೇಶನ್ ನಲ್ಲಿ ಸಂಜೆ ವಿಜಯಾ ಅವರ ಅಂತ್ಯಕ್ರಿಯೆ ನಡೆಯಲಿದೆ.

kollegal mla n mahesh wife vijaya dies due to illness.

RELATED ARTICLES

Most Popular