Lata Mangeshkar Passes Away : ಗಾಯನ ನಿಲ್ಲಿಸಿದ್ದ ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್‌

ಮುಂಬೈ : ಭಾರತದ ಖ್ಯಾತ ಜನಪ್ರಿಯ ಹಿನ್ನೆಲೆ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್‌ (Lata Mangeshkar Passes Away) ಅವರು ಇಹಲೋಕ ತ್ಯೆಜಿಸಿದ್ದಾರೆ. ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್‌ ಸೋಂಕು ಹಾಗೂ ನ್ಯುಮೋನಿಯಾದಿಂದ ಚೇತರಿಸಿಕೊಂಡಿದ್ದರೂ ಕೂಡ ಶನಿವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಆದ್ರೀಂದು ಬಹು ಅಂಗಾಗ ವೈಫಲ್ಯದಿಂದ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

1929ರ ಸೆಪ್ಟೆಂಬರ್ 28ರಂದು ಜನಿಸಿದ ಲತಾ ಮಂಗೇಶ್ಕರ್‌ ದೇಶದ ಜನಪ್ರಿಯ ಗಾಯಕಿಯಾಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. 36 ಕ್ಕೂ ಅಧಿಕ ಭಾಷೆಗಳಲ್ಲಿ ಹಾಡಿದ ಕೀರ್ತಿ ಲತಾ ಅವರದ್ದು. ಸಾವಿರಕ್ಕೂ ಅಧಿಕ ಹಿಂದಿ ಚಿತ್ರಗಳಿಗೆ ಅವರು ಹಿನ್ನೆಲೆ ಗಾಯನ ಮಾಡಿದ್ದರು. ಸಂಗೀತ ನಿರ್ದೇಶಕರಾಗಿಯೂ ಲತಾ ಮಂಗೇಶ್ಕರ್‌ ದುಡಿದಿದ್ದಾರೆ. ಹೇಮಾ ಮಂಗೇಶ್ಕರ್‌ ಆಗಿದ್ದ ಲತಾ ನಂತರದಲ್ಲಿ ತಮ್ಮ ಹೆಸರನ್ನು ಲತಾ ಮಂಗೇಶ್ಕರ್‌ ಎಂದು ಬದಲಾಯಿಸಿಕೊಂಡಿದ್ದರು.

‘ಭಾರತ ರತ್ನ’, ‘ದಾದಾ ಸಾಹೇಬ್ ಫಾಲ್ಕೆ’ ಅಲ್ಲದೇ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಲತಾ ಮಂಗೇಶ್ಕರ್‌ ಅವರ ನಿಧನ ದಿಂದಾಗಿ ಗಾಯನ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಜನವರಿ 27ರಂದು ಲತಾ ಮಂಗೇಶ್ಕರ್​​ರನ್ನು ವೆಂಟಿಲೇಟರ್​ನಲ್ಲಿ ಇರಿಸಿರುವ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಲತಾ ದೀದಿ ಅವರಿಗೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಸ್ತುತ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಡಾ. ಪ್ರತೀತ್​​ ಸಮ್ದಾನಿ ನೇತೃತ್ವದ ತಂಡವು ಲತಾ ಮಂಗೇಶ್ಕರ್​ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ನಿಮ್ಮ ಪ್ರಾರ್ಥನೆ ಹಾಗೂ ಹಾರೈಕೆಗಳಿಗಾಗಿ ಧನ್ಯವಾದಗಳು ಎಂದು ಲತಾ ಮಂಗೇಶ್ಕರ್​ರ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿತ್ತು.

ಬರೋಬ್ಬರಿ 7 ದಶಕಗಳ ವೃತ್ತಿ ಜೀವನದಲ್ಲಿ ಇಂದೋರ್​​ ಮೂಲದ ಲತಾ ಮಂಗೇಶ್ಕರ್​​ 1000ಕ್ಕೂ ಅಧಿಕ ಬಾಲಿವುಡ್ ಸಿನಿಮಾಗಳಲ್ಲಿ ಹಾಡಿದ್ದಾರೆ. 2004ರ ಯಶ್​ ಚೋಪ್ರಾ ನಿರ್ದೇಶನದ ವೀರ್​ ಝಾರಾ ಸಿನಿಮಾದಲ್ಲಿ ಲತಾ ಮಂಗೇಶ್ಕರ್​ ಕೊನೆಯ ಬಾರಿಗೆ ಹಾಡಿದ್ದಾರೆ. ಸೌಗಂಧ ಮುಝೆ ಇಸ್​ ಮಿಟ್ಟಿ ಕಿ ಎಂಬ ಹಾಡು ಲತಾ ಮಂಗೇಶ್ಕರ್​ ತಮ್ಮ ವೃತ್ತಿ ಜೀವನದಲ್ಲಿ ಹಾಡಿದ ಕೊನೆಯ ಹಾಡಾಗಿದೆ. ಇದು 2021ರ ಮಾರ್ಚ್​ 30ರಂದು ರಿಲೀಸ್​ ಆಗಿದೆ. ಇದು ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಹಾಡಾಗಿದೆ.

ಇದನ್ನೂ ಓದಿ : ಹಾಡು ನಿಲ್ಲಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಸಂಗೀತ ಜೀವನದ ಮೆಲುಕು

ಇದನ್ನೂ ಓದಿ : U19 ಕ್ರಿಕೆಟ್ ವಿಶ್ವಕಪ್ 2022 : 5 ನೇ ಬಾರಿಗೆ ವಿಶ್ವಕಪ್‌ ಗೆದ್ದ ಭಾರತ : ಇಂಗ್ಲೆಂಡ್‌ಗೆ ಮತ್ತೆ ನಿರಾಸೆ

(veteran singer lata mangeshkar passes away)

Comments are closed.