Karnataka Politics: ಯಾರಾದರು ಪೊಲೀಸ್ ವಾಹನದ ಮೇಲೆ ನಿಂತುಕೊಳ್ಳೋಕೆ ಆಗುತ್ತಾ? : ಡಿ.ಕೆ.ಶಿವಕುಮಾರ್

ಕಂದಾಯ ಸಚಿವ ಅಶೋಕ್ ಗೆ, ಯಡಿಯೂರಪ್ಪನವರಿಗೆ ಕಾಮಾಲೆ ಬಂದಿದೆ. ಹಾಗಾಗಿ, ಕಂಡಿದ್ದೆಲ್ಲ ಹಳದೀ ಅನ್ನುತ್ತಿದ್ದಾರೆ. ರಾಜ್ಯದಲ್ಲೇ ಏನೇ ಆದರೂ ಏನೇ ಘಟಿಸಿದರೂ ಅದನ್ನು ಕಾಂಗ್ರೆಸ್ ಮೇಲೆ ಹಾಕಬೇಕು ಅಂತ ತೀರ್ಮಾನ ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಿನ್ನೆಯಷ್ಟೇ ಹುಬ್ಬಳ್ಳಿ ಕೋಮುಗಲಭೆಗೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಪ್ರಚೋದನೆಯಿಂದಲೇ ಗಲಭೆ ನಡೆದ್ದು. ರಾಜ್ಯದ ಕಾಂಗ್ರೆಸ್ ಅಶಾಂತಿ ಸೃಷ್ಟಿ ಮಾಡುತ್ತದೆ ಎಂದು ಅಶೋಕ್, ಯಡಿಯೂರಪ್ಪ (BS Yediyurappa) ಆರೋಪ ಮಾಡಿದ್ದರು. ಅದಕ್ಕೆ ಡಿಕೆಶಿ ಪ್ರತ್ಯುತ್ತರ (Karnataka Politics) ನೀಡಿದ್ದಾರೆ.

ಜಿಲ್ಲಾ ಅಧ್ಯಕ್ಷರು ಅಲ್ತಾಫ್ ಅವರು ಪೊಲೀಸರ ಮನವಿ ಮೇಲೆ,ಪ್ರತಿಭಟನೆ ಸ್ಥಳಕ್ಕೆ ಹೋಗಿ ಶಾಂತಿಯುತವಾಗಿ ಹೋರಾಟಮಾಡಿ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರ ಮೇಲೂ ಕಲ್ಲುತೂರಾಟ ನಡೆಸಿದ್ದಾರೆ. ಅವರ ಬೆನ್ನಿಗೆ,ಕೈಗೆಲ್ಲಾ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಶುಶ್ರೂಷೆ ಮಾಡಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಅಲ್ತಾಫ್ ಕಲ್ಲುತೂರಾಟಕ್ಕೆ ಪ್ರಚೋದನೆ ಕೊಟ್ಟಿದ್ದರೆ ಏಟುಗಳನ್ನು ಏಕೆ ತಿನ್ನುತ್ತಿದ್ದರು ಎಂದು ಅಶೋಕ್ ಅವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಯಾರಾದರು ಪೊಲೀಸ್ ವಾಹನದ ಮೇಲೆ ನಿಂತುಕೊಳ್ಳೋಕೆ ಆಗುತ್ತಾ?
ಅಲ್ಲ ರೀ, ಯಾರಾದರು ಪೊಲೀಸ್ ವಾಹನದ ಮೇಲೆ ನಿಂತುಕೊಳ್ಳೋಕೆ ಆಗುತ್ತಾ, ನಿಂತ್ಕೊಂಡು ಮೈಕು ಹಿಡಿದು ಪ್ರಚೋದನೆ ಕೊಡೋಕೆ ಆಗುತ್ತಾ. ಸ್ವಲ್ಪ ಯೋಚನೆ ಮಾಡಿ. ಆರೋಪ ಮಾಡಬೇಕಾದವರು ಹಿಂದು,ಮುಂದು ನೋಡಿ ಮಾಡಬೇಕಲ್ಲ ಎಂದು ಡಿಕೆಶಿ ಕುಟುಕಿದರು.

ನಾನು, ಹುಬ್ಬಳ್ಳಿ ಪೊಲೀಸ್ ಕಮೀಷನರ್ ಜೊತೆ ಮಾತನಾಡಿ ವಾಸ್ತವಾಂಶದ ವಿವರ ಪಡೆದಿದ್ದೇನೆ. ನಮ್ಮವರೇ ಆಗಲೀ, ನಿಮ್ಮವರೇ ಆಗಲಿ. ಯಾರೇ ಆಗಲಿ, ತಪ್ಪು ಮಾಡಿದ್ದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಅಂಥವರ ರಕ್ಷಣೆಗೆ ನಾವಂತು ನಿಲ್ಲೋದಿಲ್ಲ. ಅಪರಾಧಿಗಳನ್ನು ಸರ್ಕಾರವೇ ಒದ್ದು ಒಳಗೆ ಹಾಕ್ತೀವಿ ಅಂತ ಹೇಳ್ತಿದೆಯಲ್ಲ. ಅಲ್ತಾಫ್ ತಪ್ಪು ಮಾಡಿದ್ದರೆ ಒಳಗೆ ಹಾಕ್ಲಿ ಬಿಡಿ ಎಂದು ಶಿವಕುಮಾರ್ ಸವಾಲು ಹಾಕಿದರು.

ರಾಜ್ಯದಲ್ಲಿ ಕಾನೂನು ಅಂತ ಇದೆ
ಸರ್ಕಾರ ಇಂಥ ಮುಂಜಾಗರೂಕತೆ ವಹಿಸಿದ್ದರೆ ನಾಡಿನ ಮಾನ ಮರ್ಯಾದೆ ಹರಾಜಾಗುತ್ತಿರಲಿಲ್ಲ. ನಾನಂತು ಅಶೋಕ್ ಹೀಗಂದರು, ಯಡಿಯೂರಪ್ಪ ಹಾಗಂದರು ಅಂತೆಲ್ಲ ತಲೆ ಕೆಡಿಸಿಕೊಳ್ಳೋಲ್ಲ. ರಾಜ್ಯದಲ್ಲಿ ಕಾನೂನು ಅಂತ ಇದೆ. ಅದರ ಪ್ರಕಾರ ಎಲ್ಲವೂ ನಡೆಯುತ್ತದೆ ಎಂದು ಡಿಕೆಶಿ ಹೇಳಿದರು.

(Karnataka Politics DK Shivakumar reacts on Bs Yediyurappa and R Ashok on hubbali issue)

Comments are closed.