ಪೋಷಕರಿಗೆ ಕಾದಿದೆ RTE ಸಂಕಷ್ಟ: ಸರಕಾರ ಬಾಕಿ ಕೊಡದಿದ್ರೆ ನೋ ಅಡ್ಮಿಷನ್‌ ಎಂದ ಖಾಸಗಿ ಶಿಕ್ಷಣ ಸಂಸ್ಥೆಗಳು

ಬೆಂಗಳೂರು : ಕಳೆದ ಎರಡು ವರ್ಷದಿಂದ ಕೊರೋನಾ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳು ಈಗ ನಿಧಾನಕ್ಕೆ ಬಾಗಿಲು ತೆರೆಯುತ್ತಿವೆ. ಜೊತೆಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗುತ್ತಿವೆ. ಆದರೆ ಈ ಹೊತ್ತಿನಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಪೋಷಕರಿಗೆ ಹಾಗೂ ಸರ್ಕಾರಕ್ಕೆ ಶಾಕ್ ನೀಡಲು ಸಿದ್ಧವಾಗಿವೆ. ಆರ್ ಟಿ ಇ (RTE) ಅನುದಾನದ ಕಾರಣ ಮುಂದಿಟ್ಟುಕೊಂಡು ಈ ವರ್ಷ ಆರ್‌ಟಿಇ ದಾಖಲಾತಿ ‌ನೀಡದಿರಲು ಖಾಸಗಿ ಶಾಲೆಗಳು ನಿರ್ಧರಿಸಿವೆ.

ಹೌದು ಕೊರೋನಾದಿಂದ ಎಲ್ಲ ಸಂಸ್ಥೆಗಳಂತೆ , ಉದ್ಯಮಗಳಂತೆ ಖಾಸಗಿ‌ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿವೆ. ಈ ಮಧ್ಯೆ ಕಳೆದ ಎರಡು ಮೂರು ವರ್ಷದಿಂದ ರಾಜ್ಯದ ಖಾಸಗಿ ಶಾಲೆಗಳಿಗೆ ಆರ್.ಟಿ.ಇ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಸರ್ಕಾರಕ್ಕೆ ಸೆಡ್ಡು ಹೊಡೆದಿರುವ ಖಾಸಗಿ ಶಾಲೆಗಳ ಖಾಸಗಿ ಶಾಲೆಗಳು ಅನುದಾನ ಬಿಡುಗಡೆಯಾಗದೇ ಹೋದಲ್ಲಿ ಆರ್ ಟಿ ಇ ದಾಖಲಾತಿ ಮಾಡದೇ ಇರಲು ನಿರ್ಧರಿಸಿವೆ. ಶೇ.60 ರಷ್ಟು ಖಾಸಗಿ ಶಾಲೆಗಳಿಗೆ ಕಳೆದ ವರ್ಷದ ಆರ್.ಟಿ.ಇ ಅನುದಾನ ಬಿಡುಗಡೆಯಾಗಿಲ್ಲ ಅಲ್ಲದೇ,ಕಳೆದ ಮೂರು ವರುಷಗಳಿಂದ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಭಾರಿ ಆರ್.ಟಿ.ಇ ಅಡಿಯಲ್ಲಿ ದಾಖಲಾತಿ ನೀಡದಿರಲು ನಿರ್ಧರಿಸಿದೆ.

ರಾಜ್ಯದಲ್ಲಿ ಇದುವರೆಗೂ ಒಟ್ಟು 7 ಲಕ್ಷ‌ ಬಡ ವಿದ್ಯಾರ್ಥಿಗಳು ಆರ್.ಟಿ.ಇ ಫಲಾನುಭವಿಗಳಿದ್ದು, ಈ ವರುಷ 6.5 ಲಕ್ಷ‌ ವಿದ್ಯಾರ್ಥಿಗಳು ಅರ್ ಟಿ ಇ ಅಡಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮುಂಬರುವ ವರ್ಷ ಅಂದಾಜು ಏಳು ಸಾವಿರ ವಿದ್ಯಾರ್ಥಿಗಳು ಆರ್ ಟಿ ಇ ಸೇರ್ಪಡೆಯಾಗೋ ಸಾಧ್ಯತೆ ಇದೆ. ಈ ಲೆಕ್ಕಾಚಾರದಲ್ಲಿ ಒಟ್ಟು 370 ಕೋಟಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಈಗಾಗಲೇ ಖಾಸಗಿ ಶಾಲಾ ಸಂಸ್ಥೆಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, ಸರಕಾರಕ್ಕೆ 15 ದಿನ ಕಾಲವಕಾಶ ಕೊಟ್ಟಿದೆ. ಒಂದೊಮ್ಮೆ ಸರ್ಕಾರ ಈ ಹಿಂದಿನ ಆರ್.ಟಿ.ಇ. ಹಣ ಬಿಡುಗಡೆ ಮಾಡದೆ ಹೋದ್ರೆ 2022-23 ನೇ ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ ದಾಖಲಾತಿ ಮಾಡಿಸಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದೇವೆ.

ಅಲ್ಲದೇ ಉಗ್ರ ಹೋರಾಟ ನಮಗೆ ಅನಿವಾರ್ಯವಾಗಲಿದೆ ಎಂದು ರುಪ್ಸಾ ಅದ್ಯಕ್ಷ ಲೋಕೇಶ್ ತಾಳಿಕಟ್ಟಿ ಹೇಳಿದ್ದಾರೆ. ಒಂದೊಮ್ಮೆ ಆರ್.ಟಿ.ಇ ಸ್ಥಗಿತಗೊಂಡರೇ ಈಗಾಗಲೇ ಸಂಕಷ್ಟದಲ್ಲಿರೋ ಪೋಷಕರಿಗೆ ಮತ್ತಷ್ಟು ಆರ್ಥಿಕ ಹೊರೆ ಎದುರಾಗಲಿದೆ.

ಇದನ್ನೂ ಓದಿ : APJEE 2022 : ಎಪಿಜೆಇಇ ಪರೀಕ್ಷೆಗಳಿಗೆ ಆನ್​ಲೈನ್​ ಅರ್ಜಿ ಸಲ್ಲಿಕೆ ಆರಂಭ

ಇದನ್ನೂ ಓದಿ : ISC Semester 2 Exam 2022 : ಐಎಸ್‌ಸಿ ಸೆಮಿಸ್ಟರ್‌ 2 ಪರೀಕ್ಷೆ 2022 : ಪ್ರವೇಶ ಪತ್ರ ಮತ್ತು ಅಗತ್ಯ ಮಾಹಿತಿ ಇಲ್ಲಿದೆ ನೋಡಿ

Private Schools Shock for Parents pending RTE Payments

Comments are closed.