Halappa Beluru : ಧರ್ಮಸ್ಥಳದಲ್ಲಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಆಣೆ ಪ್ರಮಾಣ

ಧರ್ಮಸ್ಥಳ : ರಾಜ್ಯ ರಾಜಕಾರಣದಲ್ಲಿ ಈಗಾಗಲೇ ಹಲವು ಭಾರಿ ಸದ್ದು ಮಾಡಿದ ಆಣೆ ಪ್ರಮಾಣದ ರಾಜಕಾರಣ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಸಾಗರದ ಹೊಸನಗರ ತಾಲೂಕಿನ ಅಕ್ರಮ‌ ಮರಳು ಸಾಗಾಣಿಕೆದಾರರಿಂದ ಶಾಸಕ ಹರತಾಳು ಹಾಲಪ್ಪ ಲಂಚ‌ ಪಡೆದಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ (Halappa Beluru) ಆರೋಪಿಸಿದ್ದರು. ಅಲ್ಲದೇ ಈ ವಿಚಾರ ಸುಳ್ಳು ಎಂದಾದರೇ ಹಾಲಪ್ಪ ಧರ್ಮಸ್ಥಳ ಮಂಜುನಾಥ್ ಸ್ವಾಮೀ ಎದುರು ಪ್ರಮಾಣ ‌ಮಾಡಲಿ ಎಂದು ಸವಾಲು ಹಾಕಿದ್ದರು. ಈ ಸವಾಲಿಗೆ ಒಂದು ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳದ ಮಂಜುನಾಥ ಸ್ವಾಮಿ ಎದುರು ಪ್ರಮಾಣ ಮಾಡಿದ್ದು, ನಾನು ಯಾವುದೇ ಮರಳುಸಾಗಾಟದಾರರಿಂದ ಲಂಚ ಪಡೆದಿಲ್ಲ ಎಂದು ದೇವರ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದಾರೆ. ಇದಕ್ಕೆ ಶಾಸಕ ಹರತಾಳು ಹಾಲಪ್ಪ ಬೆಂಬಲಿಗರು ಸಾಥ್ ನೀಡಿದರು.

ಇನ್ನು ಹರತಾಳು ಹಾಲಪ್ಪ ಪ್ರಮಾಣ ಮಾಡಿದ ತೆರಳಿದ ಬಳಿಕ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಬಂದಿದ್ದು, ಹರತಾಳು ಹಾಲಪ್ಪ ಮರಳು ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಹೊಸನಗರದ ಹಲವು‌ ಮರಳು ಸಾಗಾಟದಾರರಿಂದ ಲಂಚ ಪಡೆದಿದ್ದಾರೆ. ಇದು ಸತ್ಯ ಎಂದು ಧರ್ಮಸ್ಥಳದ ಮಂಜುನಾಥ ಸ್ವಾಮೀ ಎದುರು ಬೇಳೂರು ಗೋಪಾಲಕೃಷ್ಣ ಆಣೆ ಪ್ರಮಾಣ ಮಾಡಿದ್ದಾರೆ .

ಹಾಲಿ ಮತ್ತು ಮಾಜಿ ಶಾಸಕರ ಈ ಆಣೆ ಪ್ರಮಾಣದ ವಿಚಾರ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಆಣೆ ಪ್ರಮಾಣದ ಬಳಿಕ ಮಾತನಾಡಿದ ಹಾಲಪ್ಪ, ನಾನು ಮಾಜಿ ಶಾಸಕರಿಗೆ ಕೆಲವು ದಿನಗಳ ಹಿಂದೆಯೇ ಇಂದು ಆಣೆ ಪ್ರಮಾಣ ನಡೆಸುವುದಾಗಿ ಸೂಚಿಸಿದ್ದೆ. ಆದರೂ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಬರದೇ ತಪ್ಪಿಸಿಕೊಂಡಿದ್ದಾರೆ‌ ಇದೇ ಅವರ ಪ್ರಾಮಾಣಿಕತೆ ಗೆ ಸಾಕ್ಷಿ.

ನನ್ನ 40 ವರ್ಷಗಳ ಸ್ನೇಹಿತರಾದ ವಿನಾಯಕ್ ರಾವ್ ಹಾಗೂ ಅಣ್ಣನ ಮಗ ರವೀಂದ್ರ ಬಗ್ಗೆಯೂ ಆರೋಪ ಮಾಡಿದ್ದಾರೆ. ಹೀಗಾಗಿ ಅವರಿಬ್ಬರನ್ನು ಕರೆದುಕೊಂಡು ಬಂದು ಸಮ್ಮುಖದಲ್ಲಿ ಆಣೆ ಪ್ರಮಾಣ ಮಾಡಿದ್ದೇನೆ ಎಂದಿದ್ದಾರೆ. ಇನ್ನು ನನಗೆ 12 ಗಂಟೆಗೆ ಬರಲು ಹೇಳಿದ ಅವರೂ ನಾನು ಬರುವ ತನಕ ಇರಬೇಕಿತ್ತು. ನನಗೆ ಬರಲು ಹೇಳಿದ ಮೇಲೆ ಅವರು ಇಲ್ಲಿಂದ ಮೊದಲೇ ಹೋಗಿದ್ದು ಯಾಕೆ? ಎಂದು ಬೇಳೂರು ಪ್ರಶ್ನೆ ಮಾಡಿದರು.

ಅಲ್ಲದೇ ಸತ್ಯ,ನಂಬಿಕೆ ಹಾಗೂ ಶೃದ್ಧೆಯ ತಾಣವಾಗಿರುವ ಧರ್ಮಸ್ಥಳದಲ್ಲಿ ನಾನು ಹರತಾಳು ಹಾಲಪ್ಪ ಮಾಡಿರುವ ಆರೋಪ ನಿಜವೆಂದು ಒಪ್ಪಿಕೊಂಡು ಪ್ರಮಾಣ ಮಾಡುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ‌. ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಇಬ್ಬರೂ ಪ್ರಭಾವಿ ರಾಜಕಾರಣಿಗಳ ಆಣೆ ಪ್ರಮಾಣದ ಸಂಗತಿ ಕೊನೆವರೆಗೂ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನವನ್ನು ತಲುಪಿದ್ದು ಇದರ ಫಲ ಏನಾಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ಇದನ್ನೂ ಓದಿ : ಹರತಾಳು VS ಬೇಳೂರು : ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಮುಂದಾದ ಹಾಲಿ, ಮಾಜಿ ಶಾಸಕರು

(Sagara MLA Hartalu Halappa And Beluru Gopalakrishna Visited Dharmasthala)

Comments are closed.