hair care routine : ಕೂದಲಿನ ಅನೇಕ ಸಮಸ್ಯೆಗಳಿಗೆ ರಾಮಬಾಣ ನೆಲ್ಲಿಕಾಯಿ

ಈಗಿನ ಕಾಲದಲ್ಲಿ ಬಹುತೇಕರಿಗೆ ಕೂದಲು ಉದುರುವಿಕೆಯ(hair care routine) ಸಮಸ್ಯೆಯು ಸಾಮಾನ್ಯವಾಗಿಬಿಟ್ಟಿದೆ. ಇದರಿಂದಾಗಿ ಮುಖದ ಅಂದವೇ ಹಾಳಾಗಿ ಬಿಡುತ್ತದೆ. ಆದರೆ ನೀವು ಕೂದಲಿನ ವಿವಿಧ ಸಮಸ್ಯೆಗಳಿಂದ ಪಾರಾಗಲು ನೆಲ್ಲಿಕಾಯಿಯನ್ನು ಬಳಕೆ ಮಾಡಬಹುದು.

ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು: ನೆಲ್ಲಿಕಾಯಿಯಲ್ಲಿನ ಔಷಧೀಯ ಗುಣಗಳು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡಂಟ್​​​ಗಳು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಯಾಗುವ ಕೂದಲನ್ನು ಮತ್ತೆ ಕಪ್ಪು ಮಾಡಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಕೂದಲಿನ ಡ್ರೈನೆಸ್​ : ಅನೇಕ ಜನರಿಗೆ ಕೂದಲು ಶುಷ್ಕವಾಗುತ್ತದೆ. ಇದರಿಂದಾಗಿ ಕೂದಲು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ನಿಮಗೂ ಇದೇ ರೀತಿಯ ಸಮಸ್ಯೆಯಿದ್ದ ನೀವು ತಲೆಬುರುಡೆಗೆ ನೆಲ್ಲಿಕಾಯಿ ರಸವನ್ನು ಹಚ್ಚುವುದು ಉತ್ತಮ. ನೆಲ್ಲಿಕಾಯಿಯ ರಸವು ಕೂದಲಿನ ಬೇರುಗಳಿಗೆ ಅಗತ್ಯ ಪೋಷಣೆಯನ್ನು ನೀಡುತ್ತದೆ.

ಕೂದಲು ಉದುರುವಿಕೆ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಕೂದಲು ಉದುರುವುದು ಸಾಮಾನ್ಯವಾಗಿದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಆ್ಯಂಟಿ ಆಕ್ಸಿಡಂಟ್​ನ್ನು ಹೆಚ್ಚಿಸುತ್ತದೆ. ತೆಂಗಿನೆಣ್ಣೆಯನ್ನು ನೆಲ್ಲಿಕಾಯಿ ಪುಡಿಯೊಂದಿಗೆ ಬೆರೆಸಿ ಹಚ್ಚುವುದರಿಂದ ಉತ್ತಮ ಪೋಷಣೆ ದೊರೆಯುತ್ತದೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.

ತಲೆಹೊಟ್ಟು: ಚಳಿಗಾಲದಲ್ಲಿ ನೆತ್ತಿಯಲ್ಲಿ ತೇವಾಂಶ ಕಡಿಮೆಯಾಗುವುದರಿಂದ ಶುಷ್ಕತೆ ಹೆಚ್ಚುತ್ತದೆ ಮತ್ತು ಕ್ರಮೇಣ ತಲೆಹೊಟ್ಟು ರೂಪುಗೊಳ್ಳಲು ಪ್ರಾರಂಭಿಸುತ್ತದೆ. ನೆತ್ತಿಯಲ್ಲಿ ತಲೆಹೊಟ್ಟಿನಿಂದಾಗಿ ತುರಿಕೆ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೆಲ್ಲಿಕಾಯಿ ಬಳಸಿ ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ನೆಲ್ಲಿಕಾಯಿಯನ್ನು ತುರಿದು ಅದಕ್ಕೆ ಆಲಿವ್ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಪರಿಹಾರ ಸಿಗುತ್ತದೆ.

ಎಣ್ಣೆಯುಕ್ತ ಕೂದಲು: ಅನೇಕ ಜನರು ಚಳಿಗಾಲದಲ್ಲಿ ತಮ್ಮ ತಲೆ ಮತ್ತು ಕೂದಲಿಗೆ ಹೆಚ್ಚುವರಿ ಎಣ್ಣೆಯ ಸಮಸ್ಯೆಯನ್ನು ಎದುರಿಸುತ್ತಾರೆ. ನೆಲ್ಲಿಕಾಯಿಯಿಂದ ಕೂದಲಿನಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಎಣ್ಣೆಯನ್ನು ನಿಯಂತ್ರಿಸಬಹುದು. ನೆಲ್ಲಿಕಾಯಿಯ ತುಂಡುಗಳನ್ನು ಒಣಗಿಸಿ ನಂತರ ನೀರಿನಲ್ಲಿ ಕುದಿಸಿ ಪೇಸ್ಟ್ ತಯಾರಿಸಿ. ಈಗ ಇದನ್ನು ನೆತ್ತಿಯ ಮೇಲೆ ಹಚ್ಚುವುದರಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನು ಓದಿ : Vastu Tips For Marriage : ಮದುವೆಯ ವಯಸ್ಸು ಮೀರಿದರೂ ಸಂಗಾತಿಯು ಸಿಗುತ್ತಿಲ್ಲವೇ..? ಹಾಗಾದರೆ ಅನುಸರಿಸಿ ಈ ವಾಸ್ತುಟಿಪ್ಸ್​

ಇದನ್ನೂ ಓದಿ : Vastu Ideas : ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿಗೆ ಇರುವ ಪಾಸಿಟಿವ್​ ಹಾಗೂ ನೆಗೆಟಿವ್​ ಎಫೆಕ್ಟ್​ಗಳ ಬಗ್ಗೆ ಇಲ್ಲಿದೆ ಮಾಹಿತಿ

hair care routine amla is helpful in removing these hair problems

Comments are closed.