MLC Shantaram Siddi : ಕೆಎಸ್‌ಆರ್‌ಟಿಸಿ ಬಸ್ಸಿಗಾಗಿ ಒಬ್ಬಂಟಿಯಾಗಿ ಕಾಯುತ್ತಿರುವ ಶಾಂತಾರಾಮ ಸಿದ್ದಿ : ಜನನಾಯಕನ ಸರಳತೆ ಭಾರೀ ಮೆಚ್ಚುಗೆ

ಬೆಂಗಳೂರು : ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಮೆಂಬರ್‌ ಆದ್ರೆ ಸಾಕು ಬೆಲೆಬಾಳುವ ಕಾರಿನಲ್ಲಿ ಓಡಾಡುವ ಹೊತ್ತಿನಲ್ಲಿ ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ(MLC Shantaram Siddi) ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸರಳತೆಗೆ ಸಾಕ್ಷಿ ಒದಗಿಸಿದ್ದಾರೆ. ರಾಣೆಬೆನ್ನೂರಿನ ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಶಾಂತಾರಾಮ್ ಸಿದ್ಧಿಯವರು ಸಾಮಾನ್ಯ ಪ್ರಯಾಣಿಕರಂತೆ ಕುಳಿತು ಬಸ್ ಗಾಗಿ ಕಾಯುತ್ತಿದ್ದರು. ಅವರನ್ನು‌ನೋಡಿದವರು ಯಾರೂ ಕೂಡ ಇವರು ರಾಷ್ಟ್ರೀಯ ಪಕ್ಷವೊಂದರ ವಿಧಾನ ಪರಿಷತ್ ಸದಸ್ಯರು ಎಂಬುದನ್ನು‌ಗುರುತಿಸುವಂತಿರಲಿಲ್ಲ. ಅಷ್ಟು ಸರಳವಾಗಿ ಬದುಕುತ್ತಿರುವ ಶಾಂತಾರಾಮ್ ಸಿದ್ಧಿ ವಿಧಾನ ಪರಿಷತ್ ಸದಸ್ಯರಾದ ಬಳಿಕವೂ ತಮ್ಮ ಓಡಾಡಕ್ಕೆ ಸಾರ್ವಜನಿಕ ಸಂಪರ್ಕವಾದ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಮಾತ್ರವಲ್ಲ ಶಾಂತಾರಾಮ್ ಸಿದ್ಧಿಯವರ ಬಳಿಕ ದುಬಾರಿ ವಾಚ್, ಶೂ, ಪೋನ್, ಬೆಲೆಬಾಳುವ ಉಡುಪು, ಸಹಾಯಕರು ಕೂಡ ಇಲ್ಲ.

ಶಾಂತಾರಾಮ್ ಸಿದ್ದಿ ರಾಣೆಬೆನ್ನೂರಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕುಳಿತಿರುವ ಪೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಆಗ್ತಿದ್ದು ಇಷ್ಟು ಸರಳ ವ್ಯಕ್ತಿತ್ವ ಹಾಗೂ ಇಷ್ಟು ಸರಳ ಯಾವುದೇ ಶ್ರೀಮಂತ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ವಿಧಾನಪರಿಷತ್ ಸ್ಥಾನಕ್ಕೆ ಆರಿಸುವಂತಹದ್ದು ಕೂಡಾ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾದ್ಯ ಎಂದು ಬಿಜೆಪಿ ಬೆಂಬಲಿಗರು ಟ್ವೀಟ್ ,ಪೋಸ್ಟ್ ಮಾಡ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರಾದ ಶಾಂತಾರಾಮ್ ಸಿದ್ದಿ ಯಲ್ಲಾಪುರದ ಹಿತ್ಲಳ್ಳಿಯ ಸಣ್ಣ ನಿವಾಸದಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾರೆ. ಮೂರು ದಶಕಗಳಿಂದ ಸಮಾಜ ಸೇವೆ ಹಾಗೂ ಪರಿಸರ ರಕ್ಷಣೆಯಲ್ಲಿ ದುಡಿಯುತ್ತಿರುವ ಶಾಂತಾರಾಮ್ ಸಿದ್ಧಿ, ಮಲೆನಾಡು ಕರಾವಳಿಯಲ್ಲಿರುವ ಸಿದ್ದಿ, ಗೌಳಿ, ಕುಣಬಿ, ಗೊಂಡ, ಹಾಲಕ್ಕಿ ಮುಂತಾದ ಬುಡಕಟ್ಟು ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ,ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತ ಬಂದಿದ್ದಾರೆ.

ವಿಶೇಷವಾಗಿ ವನವಾಸಿಗಳ ವಸತಿ ಶಾಲೆ, ಸಮುದಾಯ ಶಿಕ್ಷಣ,ಆರೋಗ್ಯ ಶಿಬಿರ,ಕೌಶಲ್ಯ ತರಬೇತಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು,ಹಳ್ಳಿಗರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆರಂಭದಿಂದಲೂ ಬಿಜೆಪಿ ಹಾಗೂ ಆರ್.ಎಸ್.ಎಸ್ ನಲ್ಲಿ ಗುರುತಿಸಿಕೊಂಡ ಶಾಂತಾರಾಮ್ ಸಿದ್ಧಿಯವರನ್ನು ಬಿಜೆಪಿ ಗುರುತಿಸಿ ಪರಿಷತ್ ಗೆ ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿತ್ತು. ಇದು ಅಚ್ಚರಿಗೂ ಕಾರಣವಾಗಿತ್ತು. ವಿಧಾನ ಪರಿಷತ್ ಗೆ ನೇಮಕವಾದ ಮೇಲೂ ಶಾಂತಾರಾಮ್ ಸಿದ್ಧಿ ಹಿಂದಿನಂತೆ ಸರಳ ಜೀವನವನ್ನು ಮುಂದುವರೆಸಿಕೊಂಡು ಬಂದಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ .

ಇದನ್ನೂ ಓದಿ : CM Basavaraj Bommai Change : ಸಂಕ್ರಾಂತಿಗೂ ಮುನ್ನ ಸಿಎಂ ಬದಲಾವಣೆ : ಮುಖ್ಯಮಂತ್ರಿ ಆಯ್ಕೆಗೆ ಬರ್ತವ್ರೇ ಅಮಿತ್ ಶಾ

ಇದನ್ನೂ ಓದಿ : Tejaswisooriya’s Controversial Statement : ಮುಸ್ಲಿಂ, ಕ್ರೈಸ್ತ್ ರನ್ನು ಮರು ಮತಾಂತರ ಮಾಡಿ: ಸಂಸದ ತೇಜಸ್ವಿಸೂರ್ಯ ವಿವಾದಾತ್ಮಕ ಹೇಳಿಕೆ

(The simplicity of MLC Shantaram Siddi waiting alone for KSRTC bus)

Comments are closed.