Night Curfew Preparation : ಸಿಲಿಕಾನ್ ಸಿಟಿಯ ನ್ಯೂ ಇಯರ್ ಸೆಲಿಬ್ರೇಶನ್ ಗೆ ಬ್ರೇಕ್ : ಹೇಗಿದೆ ಗೊತ್ತಾ ನೈಟ್ ಕರ್ಪ್ಯೂ ಜಾರಿಗೆ ಪೊಲೀಸರ ತಯಾರಿ

ಬೆಂಗಳೂರು : ಹೊಸ ವರ್ಷಾಚರಣೆಯ ಹಾಟ್ ಸ್ಪಾಟ್ ಗಳ ಸಂಭ್ರಮಕ್ಕೆ ಕೊರೋನಾ ನಿಯಮ ಕತ್ತರಿ ಹಾಕಿದೆ. ಹೀಗಾಗಿ ಹಿಂದಿನ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಅದ್ದೂರಿ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದ್ದು ಸರ್ಕಾರ ಈಗಾಗಲೇ ರೂಪಿಸಿರುವ ನೈಟ್ ಕರ್ಪ್ಯೂ ನಿಯಮ (Night Curfew Preparation) ಜಾರಿಗೆ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಅಗತ್ಯ ಸಿದ್ಧತೆ ಕೂಡಾ ಆರಂಭಿಸಿದೆ.

ಹೆಚ್ಚುತ್ತಿರುವ ಕೊರೋನಾ ಹಾಗೂ ಒಮೈಕ್ರಾನ್ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ರೂಪಿಸಿದ್ದು ನೈಟ್ ಕರ್ಪ್ಯೂ, ಹೊಟೆಲ್, ಬಾರ್, ಪಬ್ ಗಳ‌ ಮೇಲೆ ನಿಯಂತ್ರಣ ಹೇರಿದೆ. ಅಲ್ಲದೇ ಮದುವೆ ಸೇರಿದಂತೆ ಸಮಾರಂಭಗಳಿಗೂ ಜನರ ಮಿತಿ ಹೇರಿದೆ. ಈ ಮಧ್ಯೆ ವರ್ಷಕ್ಕೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸೆಲೆಬ್ರೇಷನ್ ಗೆ ಬ್ರೇಕ್ ಬಿದ್ದಿರೋ ಹಿನ್ನೆಲೆಯಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ ಸಿದ್ಧತೆಯನ್ನು ನಗರ ಪೊಲೀಸ್ ಇಲಾಖೆ ಆರಂಭಿಸಿದೆ.

ಹೊಸವರ್ಷಾಚರಣೆಯ ಹಾಟ್ ಸ್ಪಾಟ್ ಗಳಾಗಿದ್ದ ಬೆಂಗಳೂರಿನ ಎಂಜಿ ರೋಡ್,‌ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ನಾಳೆಯಿಂದ ರಾತ್ರಿ ೧೦ ಕ್ಕೆ ಸ್ತಬ್ಧವಾಗಲಿದೆ. ಹೀಗಾಗಿ ಇದಕ್ಕೆ ಅಗತ್ಯ ತಯಾರಿ ಆರಂಭಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡಿದೆ. ಈಗಾಗಲೇಎಂಜಿ ರೋಡ್ ಸುತ್ತಮುತ್ತ 100ಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಸಲಾಗಿದ್ದು ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಅಲ್ಲದೇ ಬ್ಯಾರಿಕೇಡ್ ಗಳನ್ನು ಹಾಕಲಾಗುತ್ತಿದ್ದು ನೈಟ್ ಕರ್ಪ್ಯೂ ವನ್ನು ಪರಿಣಾಮಕಾರಿಯಾಗಿ‌ಜಾರಿ‌ಮಾಡಲು ಇಲಾಖೆ ಸಿದ್ದತೆಯಲ್ಲಿದೆ.

ಸರ್ಕಾರದ ನಿಯಮದಂತೆ ನೈಟ್ ಕರ್ಪ್ಯೂ ನಿಯಮಗಳ ಅನ್ವಯ ಪಬ್, ಬಾರ್ ರೆಸ್ಟೋರೆಂಟ್ ಓಪನ್ ಇದ್ದರೂ ರಾತ್ರಿ 10 ಕ್ಕೆ ಕ್ಲೋಸ್ ಆಗಲಿದೆ. ಅಲ್ಲದೇ ಡಿಸೆಂಬರ್ 30 ರಿಂದ 2 ರ ತನಕ ನಾಲ್ಕು ದಿನಗಳ ಕಾಲ ಪಬ್,ಬಾರ್,ರೆಸ್ಟೋರೆಂಟ್ ಗೆ ಶೇಕಡಾ 50 ಮಿತಿ ಅನ್ವಯವಾಗಲಿದೆ. ನಗರ ಸೇರಿದಂತೆ ರಾಜ್ಯದಲ್ಲಿ ರಾತ್ರಿ 10 ಗಂಟೆ ಬಳಿಕ ಓಡಾಟವನ್ನು ನಿರ್ಬಂಧಿಸ ಲಾಗಿದ್ದು ತುರ್ತು ಅಗತ್ಯ ಬಿಟ್ಟು ವಿನಾಕಾರಣ ರಸ್ತೆಗಿಳಿಯುವವರನ್ನು ನಿಯಂತ್ರಿಸಲು ಪೊಲೀಸರಿಗೆ ಖಡಕ್ ಸೂಚನೆ ರವಾನಿಸಲಾಗಿದೆ.

ರಾತ್ರಿ 10 ರ ಬಳಿಕ ರಸ್ತೆಗಿಳಿದವರನ್ನುಯಾಕೆ ಓಡಾಡ್ತಿದ್ದಿರಾ, ಎಲ್ಲಿ ಹೋಗಿದ್ರಿ ಎಂದು ಸಂಪೂರ್ಣ ಮಾಹಿತಿ ಪಡೆಯಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದ್ದು ಅನಗತ್ಯವಾಗಿ ರಸ್ತೆಗೆ ಬಂದ್ರೇ ನಿಮಗೆ ಕಷ್ಟ ತಪ್ಪಿದಲ್ಲ. ಸರ್ಕಾರದ ನಿಯಮ ಪಾಲಿಸಿ ಮನೆಯಲ್ಲಿರಿ ಎಂಬುದು ನಮ್ಮ ಮನವಿ.

ಇದನ್ನೂ ಓದಿ : Karnataka Night Curfew : ರಾಜ್ಯದಲ್ಲಿ ಹತ್ತು ದಿನ ನೈಟ್‌ ಕರ್ಪ್ಯೂ ಜಾರಿ : ಮಕ್ಕಳಿಗೆ ಜ.3 ರಿಂದ ಲಸಿಕೆ : ಸಚಿವ ಡಾ.ಸುಧಾಕರ್‌

ಇದನ್ನೂ ಓದಿ : MLC Shantaram Siddi : ಕೆಎಸ್‌ಆರ್‌ಟಿಸಿ ಬಸ್ಸಿಗಾಗಿ ಒಬ್ಬಂಟಿಯಾಗಿ ಕಾಯುತ್ತಿರುವ ಶಾಂತರಾಮ ಸಿದ್ದ : ಜನನಾಯಕನ ಸರಳತೆ ಭಾರೀ ಮೆಚ್ಚುಗೆ

( Night Curfew Preparation for police in Bangalore, new Year celebrations Break)

Comments are closed.