NCB : ದೇವರ ಪ್ರಸಾದದ ಹೆಸರಲ್ಲಿ ವಿದೇಶಕ್ಕೆ ಡ್ರಗ್ಸ್‌ ಸಾಗಾಟ : ಮೂವರ ಬಂಧನ

ಬೆಂಗಳೂರು : ಎನ್‌ಸಿಬಿ ಅಧಿಕಾರಿಗಳು ಮುಂಬೈನಲ್ಲಿ ಹಡಗಿನ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಬೆಂಗಳೂರಲ್ಲಿ ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ದೇವರ ಪ್ರಸಾದದ ಹೆಸರಲ್ಲಿ ಮಾದಕ ವಸ್ತುಗಳನ್ನು ಆಸ್ಟ್ರೇಲಿಯಾ ಹಾಗೂ ಬಹ್ರೇನ್‌ಗೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಎನ್‌ಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದು, ಬೆಂಗಳೂರಲ್ಲಿ ಮೂವರನ್ನು ಬಂಧಿಸಿದ್ದಾರೆ.

ಎನ್‌ಸಿಬಿ ಅಧಿಕಾರಿಗಳು ಬಂಧಿತ ಆರೋಪಿಗಳಿಂದ ಕೋಟ್ಯಾಂತರ ಮೌಲ್ಯದ 3.5 kg ಆ್ಯಶಿಶ್ ಆಯಿಲ್, 19 ಕೆಜಿ ಸೆಡೋಫೆರೋಡ್ರೈನ್ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸಪ್ಟೆಂಬರ್‌ 12 ರಂದು ಖಚಿತ ಮಾಹಿತಿಯ ಮೇರೆಗೆ ಆಸ್ಟ್ರೇಲಿಯಾ ಹಾಗೂ ಬಹ್ರೈನ್‌ಗೆ ಕೋರಿಯಲ್‌ ಮೂಲಕ ಮಾದಕ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿದೆ ಅನ್ನೋ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಎರ್ನಾಕುಲಂ ಏರ್ಪೋರ್ಟ್‌ನಲ್ಲಿ ಓರ್ವನನ್ನು ಬಂಧಿಸಿದ್ದರು.

ನಂತರದಲ್ಲ ಚೆನ್ನೈ ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸಾಗಾಟ ಮಾಡಲಾಗುತ್ತಿದ್ದ 16 ಕೆ.ಜಿ ಸ್ಯೂಡೋಪೆಡ್ರೈನ್ ಜಪ್ತಿ ಮಾಡಿದ್ದರು. ಈತ ನೀಡಿದ ಮಾಹಿತಿಯ ಮೇರೆಗೆ ಇದೀಗ ಎನ್‌ಸಿಬಿ ಅಧಿಕಾರಿಗಳು ಕಾಸರಗೋಡು ಮೂಲದ ವ್ಯಕ್ತಿಯೋರ್ವನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಮಾದಕ ವಸ್ತುಗಳನ್ನು ಬ್ರಹ್ಮರಸಾಯನ, ನರಸಿಂಹ ರಸಾಯನ, ಅಶ್ವಗಂಧಿ ಲೇಹ, ಚಾಯಾವಧನ ಲೇಹ ಹೆಸರಿನ ಡಬ್ಬದಲ್ಲಿ ತುಂಬಿಸುತ್ತಿದ್ದರು. ನಂತರದಲ್ಲಿ ಕರೈಕಾಲ್‌ ಎಂಬ ಹೆಸರಿನ ಕೋರಿಯರ್‌ ಮೂಲಕ ಆಸ್ಟ್ರೇಲಿಯಾ ಹಾಗೂ ಬಹ್ರೈನ್‌ಗೆ ಮಾದಕ ವಸ್ತುಗಳನ್ನು ಸುಲಭವಾಗಿ ಸಾಗಾಟ ಮಾಡುತ್ತಿದ್ದರು.

ಇದನ್ನೂ ಓದಿ : ಬೆಂಗಳೂರು : ರಸ್ತೆಯಲ್ಲಿ ಬಿದ್ದಿದ್ದ ಮರಕ್ಕೆ ಬೈಕ್‌ ಢಿಕ್ಕಿ : ಸವಾರ ಸಾವು

ಆಯುರ್ವೇದ ಔಷಧ ಹಾಗೂ ದೇವರ ಪ್ರಸಾದ ರೂಪದಲ್ಲಿ ಮಾದಕ ವಸ್ತು ಸಾಗಾಟ ಮಾಡುವುದನ್ನೇ ಆರೋಪಿಗಳು ದಂಧೆಯನ್ನಾಗಿಸಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸ್ವಿಗ್ಗಿ ಮೂಲಕ ಮನೆ ಮನೆಗೆ ಗಾಂಜಾ ಸಪ್ಲೈ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎನ್‌ಸಿಬಿ ಅಧಿಕಾರಿಗಳು ಇದೀಗ ಭರ್ಜರಿ ಭೇಟೆಯಾಡಿದ್ದಾರೆ. ಬಂಧನಕ್ಕೆ ಒಳಗಾಗಿರುವ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ : ವಾಹನ ಚಾಲಕರಿಗೆ ಎಚ್ಚರ ! ಡ್ರೈವಿಂಗ್‌ ವೇಳೆ ಬ್ಲೂಟೂತ್‌, ಇಯರ್‌ ಪೋನ್‌ ಅಷ್ಟೇ ಅಲ್ಲಾ, Google Map ಬಳಸಿದ್ರೂ ಬೀಳುತ್ತೆ ದಂಡ

( Three arrested in Bangalore for drug trafficking in Australia and Bahrain )

Comments are closed.