KPCC president DK Shivakumar : ‘ಬಾಯಿ ಮುಚ್ಕೊಂಡು ಕೆಲಸ ಮಾಡಿ’ : ಜಮೀರ್​ ಅಹಮದ್​ಗೆ ಡಿ.ಕೆ ಶಿವಕುಮಾರ್ ವಾರ್ನಿಂಗ್​

ಬೆಂಗಳೂರು : KPCC president DK Shivakumar : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎಂಟು ತಿಂಗಳು ಬಾಕಿ ಇರುವಾಗಲೇ ರಾಜ್ಯ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ಜೋರಾಗಿದೆ. ಕಾಂಗ್ರೆಸ್​ನಿಂದ ಡಿ.ಕೆ ಶಿವಕುಮಾರ್​ ಸಿಎಂ ಅಭ್ಯರ್ಥಿಯಾಗುತ್ತಾರೆ ಎಂದು ಹೇಳುವ ಬಣ ಒಂದಾದರೆ ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳುವ ಬಣ ಇನ್ನೊಂದಿದೆ. ಸಿದ್ದರಾಮಯ್ಯರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ ಚಾಮರಾಜಪೇಟೆ ಶಾಸಕ ಜಮೀರ್​ ಅಹಮದ್​​ ಖಾನ್​ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಬಾಯಿ ಮುಚ್ಕೊಂಡು ಕೆಲಸ ಮಾಡಬೇಕು ಎಂದು ವಾರ್ನಿಂಗ್​ ನೀಡಿದ್ದಾರೆ.


ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ಮಾಡೋಕು ಮುನ್ನ ಪಕ್ಷವನ್ನು ಮೊದಲು ಅಧಿಕಾರಕ್ಕೆ ತನ್ನಿ. ನಿಮ್ಮ ನಿಮ್ಮ ಸಮುದಾಯಗಳನ್ನು ಸಂಘಟನೆ ಮಾಡಿ. ವ್ಯಕ್ತಿ ಪೂಜೆ ಮಾಡೋದನ್ನು ಬಿಟ್ಟು ಮೊದಲು ಪಕ್ಷ ಪೂಜೆ ಮಾಡಿ. ಆಗ ಮಾತ್ರ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯ.ಯಾರಾದರೂ ನನ್ನ ಲೆವೆಲ್​ನಲ್ಲಿ ಮಾತನಾಡೋರು ಇದ್ದರೆ ನಾನು ಮಾತನಾಡುತ್ತೇನೆ.ಈ ಜಮೀರ್​ ಗಿಮೀರ್​ಗೆ ನಾನು ಉತ್ತರ ಕೊಡೋದಿಲ್ಲ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಬಾಯಿ ಮುಚ್ಕೊಂಡು ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.


ಇನ್ನು ಇದೇ ವೇಳೆ ಗಾಂಧಿ ಕುಟುಂಬದ ವಿಚಾರವಾಗಿ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್​, ರಮೇಶ್​ ಕುಮಾರ್​ ಹೇಳಿಕೆಯಲ್ಲಿ ತಪ್ಪೇನಿಲ್ಲ. ಗಾಂಧಿ ಕುಟುಂಬ ಅಷ್ಟೊಂದು ವರ್ಷಗಳ ಕಾಲ ದೇಶದ ಅಧಿಕಾರವನ್ನು ಹೊಂದಿದ್ದರೂ ಸಹ ಯಾರೊಬ್ಬರೂ ಅಲ್ಲಿ ಆಸ್ತಿ ಮಾಡಿಲ್ಲ. ದೇಶಕ್ಕಾಗಿ ಗಾಂಧಿ ಕುಟುಂಬ ಸಾಕಷ್ಟು ಬಲಿದಾನಗಳನ್ನು ನೀಡಿದೆ. ಗಾಂಧಿ ಕುಟುಂಬಕ್ಕೆ ಪ್ರಧಾನಿಯಾಗುವ ಅವಕಾಶ ಕೂಡಿ ಬಂದಿದ್ದರೂ ಸಹ ಅವರು ಮನಮೋಹನ್​ ಸಿಂಗ್​​ಗೆ ಆ ಅವಕಾಶವನ್ನು ನೀಡಿದರು. ನೆಹರೂರಿಂದ ರಾಹುಲ್​ ಗಾಂಧಿಯವರೆಗೆ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗವನ್ನೇ ಮಾಡುತ್ತಾ ಬರುತ್ತಿದೆ ಎಂದು ಸಮರ್ಥನೆ ನೀಡಿದರು.

ಇದನ್ನು ಓದಿ : Amazon Prime Day Sale 2022 : ಎರಡು ದಿನಗಳ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಇಂದಿನಿಂದ ಆರಂಭ! ಸಖತ್‌ ಡಿಸ್ಕೌಂಟ್‌, ಫ್ರೀ ಡಿಲೇವರಿ ಎಲ್ಲಾ ಮಿಸ್‌ ಮಾಡ್ಕೋಬೇಡಿ!

ಇದನ್ನೂ ಓದಿ : Woman Gangraped : ರೈಲ್ವೆ ನಿಲ್ದಾಣದ ಸಿಬ್ಬಂದಿಯಿಂದಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ನಾಲ್ವರ ಬಂಧನ

KPCC president DK Shivakumar gave a warning to Jameer Ahmed

Comments are closed.