Joker Malware Attack : 50 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿದ ಗೂಗಲ್‌ ಪ್ಲೇ ಸ್ಟೋರ್‌! ನಿಮ್ಮ ಫೋನ್‌ನಲ್ಲೂ ಈ ಆಪ್‌ ಇದೆಯೇ ಎಂದು ಚೆಕ್‌ ಮಾಡಿ?

ಜೋಕರ್ ಮಾಲ್‌ವೇರ್ (Joker Malware), ಗೂಗಲ್ ಪ್ಲೇ ಸ್ಟೋರ್‌ನಲ್ಲಿಯ 50 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳ ಮೇಲೆ ದಾಳಿ ಮಾಡಿದೆ (Joker Malware Attack), ಎಂದು Zscaler Threatlabz ​​ಗುರುವಾರ ವರದಿಯಲ್ಲಿ ತಿಳಿಸಿತ್ತು. ಅದಕ್ಕಾಗಿ ಗೂಗಲ್ ತಕ್ಷಣವೇ ಕ್ರಮ ಕೈಗೊಂಡು ತನ್ನ ಆಪ್ ಸ್ಟೋರ್‌ನಿಂದ ಎಲ್ಲಾ ಸೋಂಕಿತ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿತು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಂತಹ ಯಾವುದೇ ಅಪ್ಲಿಕೇಶನ್‌ಗಳನ್ನು ನೀವು ಹೊಂದಿದ್ದರೆ, ನೀವು ತಕ್ಷಣ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ.

ಜೋಕರ್, ಫೇಸ್‌ಸ್ಟೀಲರ್ ಮತ್ತು ಕಾಪರ್ ಮಾಲ್‌ವೇರ್‌ ಗಳಿ ಇತ್ತೀಚೆಗೆ ಅಪ್ಲಿಕೇಶನ್‌ಗಳ ಮೂಲಕ ಧಾಳಿ ನಡೆಸುತ್ತಿರುವುದು ಕಂಡುಬಂದಿದೆ ಎಂದು Zscaler ThreatLabz ತಂಡವು ಗಮನಿಸಿದೆ. ಆದರೂ, ಥ್ರೆಟ್‌ಲ್ಯಾಬ್ಜ್ ತಂಡವು ತಕ್ಷಣವೇ ಈ ಹೊಸದಾಗಿ ಕಂಡುಹಿಡಿದ ಅಪಾಯಕಾರಿ ಮಾಲ್‌ವೇರ್‌ಗಳ ಕುರಿತು Google Androidನ ಭದ್ರತಾ ತಂಡವನ್ನು ಎಚ್ಚರಿಸಿದೆ. ಆಗ ಈ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು Google Play ಸ್ಟೋರ್‌ನಿಂದ ಡಿಲೀಟ್‌ ಮಾಡಿದೆ.

ಜೋಕರ್ ಮಾಲ್‌ವೇರ್‌ ಎಂದರೇನು?
ಜೋಕರ್ ಎಂಬುದು ಒಂದು ಮಾಲ್‌ವೇರ್. ಅದು ಪ್ರಾಥಮಿಕವಾಗಿ Android ಮೊಬೈಲ್ ಸಾಧನಗಳಲ್ಲಿ ವಿವಿಧ ಅಪ್ಲಿಕೇಶನ್‌ಗಳ ಮೂಲಕ ಧಾಳಿ ಮಾಡುತ್ತದೆ. ಈ ಮಾಲ್‌ವೇರ್ ತನ್ನ ಟ್ರಯಲ್ ಸಿಗ್ನೇಚರ್‌ಗಳನ್ನು ನಿಯತಕಾಲಿಕವಾಗಿ ನವೀಕರಿಸುವ ಮೂಲಕ Google ನ ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗೆ ಪ್ರವೇಶಿಸುತ್ತವೆ. ಇದು ವೈರಸ್‌ನ ಕೋಡ್, ಎಕ್ಸಿಕ್ಯುಷನ್‌ ಪ್ರೊಸೆಸ್ ಮತ್ತು ಪೇಲೋಡ್-ರಿಟ್ರೈವ್‌ ತಂತ್ರಗಳ ನವೀಕರಣಗಳನ್ನು ಸಹ ಒಳಗೊಂಡಿದೆ.

ಬಳಕೆದಾರರ ಫೋನ್‌ಗಳಿಗೆ ಪ್ರವೇಶಿಸಿದ ಮಾಲ್‌ವೇರ್‌ ನಂತರ ಬಳಕೆದಾರರ ಕಾಂಟಾಕ್ಟ್‌, ಡೇಟಾ ಮತ್ತು SMS ಸಂದೇಶಗಳನ್ನು ಕದಿಯುತ್ತದೆ.

ನೀವೂ ಈ ಕೆಳಗಿನ ಯಾವುದಾದರೂ ಒಂದು ಆಪ್‌ ಬಳಸುತ್ತಿದ್ದರೆ ದಯವಿಟ್ಟು ಅದನ್ನು ಅನ್‌ಇನ್‌ಸ್ಟಾಲ್‌ ಮಾಡಿ. ಜೋಕರ್‌ ಮಾಲ್‌ವೇರ್‌ ಆಟ್ಯಾಕ್‌ ಮಾಡಿದ ಆಪ್‌ಗಳು :

  • Universal PDF Scanner
  • Private Messenger
  • Premium SMS
  • Smart Messages
  • Text Emoji SMS
  • Blood Pressure Checker
  • Funny Keyboard
  • Memory Silent Camera
  • Custom Themed Keyboard
  • Light Messages
  • Themes Photo Keyboard
  • Send SMS
  • Themes Chat Messenger
  • Instant Messenger
  • Cool Keyboard
  • Fonts Emoji Keyboard
  • Mini PDF Scanner
  • Smart SMS Messages
  • Creative Emoji Keyboard
  • Fancy SMS
  • Fonts Emoji Keyboard
  • Personal Message
  • Funny Emoji Message
  • Magic Photo Editor
  • Professional Messages
  • All Photo Translator
  • Chat SMS
  • Smile Emoji
  • Wow Translator
  • All Language Translate
  • Cool Messages
  • Blood Pressure Diary
  • Chat Text SMS
  • Hi Text SMS
  • Emoji Theme Keyboard
  • iMessager
  • Text SMS
  • Camera Translator
  • Come Messages
  • Painting Photo Editor
  • Rich Theme Message
  • Quick Talk Message
  • Advanced SMS
  • Professional Messenger
  • Classic Game Messenger
  • Style Message
  • Private Game Messages
  • Timestamp Camera
  • Social Message

ಇದನ್ನೂ ಓದಿ : Amazon Prime Day Sale 2022 : ಎರಡು ದಿನಗಳ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಇಂದಿನಿಂದ ಆರಂಭ! ಸಖತ್‌ ಡಿಸ್ಕೌಂಟ್‌, ಫ್ರೀ ಡಿಲೇವರಿ ಎಲ್ಲಾ ಮಿಸ್‌ ಮಾಡ್ಕೋಬೇಡಿ!

ಇದನ್ನೂ ಓದಿ : Weight Loss Tips:ವೈಟ್ ಲಾಸ್ ಮಾಡಲು ಪ್ರಯತ್ನಿಸುತ್ತಿದ್ದೀರಾ ! ಆಹಾರದ ಮೂಲಕವೇ ವೈಟ್ ಲಾಸ್ ಮಾಡಲು ಇಲ್ಲಿದೆ ಒಂದಿಷ್ಟು ಟಿಪ್ಸ್

(Joker Malware Attack google play store deletes 50 apps)

Comments are closed.