Benefits Of Nutmeg : ಚಿಕ್ಕ ಕಾಯಿಯಾದರೂ ಅದ್ಭುತ ಪ್ರಯೋಜನವಿದೆ ಜಾಯಿಕಾಯಿಯಲ್ಲಿ…

ನಮ್ಮ ಅಡುಗೆ ಮನೆ (Kitchen) ಒಂದು ಅಚ್ಚರಿಗಳ ಖಜಾನೆ ಎಂದರೆ ತಪ್ಪಾಗಲಾರದು. ಇಲ್ಲಿ ಶೀತ, ಕೆಮ್ಮುವಿನಿಂದ ಹಿಡಿದು ತ್ವಚೆಯವರೆಗೂ ಆರೋಗ್ಯ ಪ್ರಯೋಜನಗಳನ್ನು ನೀಡಬಲ್ಲ ಮನೆ ಔಷಧಗಳು (Home remedies) ಡಬ್ಬಿಗಳಲ್ಲಿ ಬೆಚ್ಚಗೆ ಕುಳಿತಿರುತ್ತವೆ. ಅವುಗಳಿಂದ ಸಾಮಾನ್ಯ ಕಾಯಿಲೆಗಳನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು. ಅಂತಹ ಪದಾರ್ಥಗಳಲ್ಲಿ ಜಾಯಿಕಾಯಿಯೂ (Nutmeg ) ಒಂದು. ಕೆಲವು ಸಿಹಿ ತಿನಿಸು, ಫಲಾವ್‌ಗಳಲ್ಲಿ ಮಾತ್ರ ಬಳಕೆಯಾಗುವ ಜಾಯಿಕಾಯಿಯಿಂದ ಅನೇಕ ಆರೋಗ್ಯದ ಪ್ರಯೋಜನಗಳೂ ಇವೆ (Benefits Of Nutmeg ). ವಿಶಿಷ್ಟವಾದ ಪರಿಮಳ, ಸ್ವಲ್ಪ ಖಾರದ ರುಚಿ ಹೊಂದಿರುವ ಇದನ್ನು ಮಸಾಲೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಡುಗೆಗಿಂತ ಔಷಧಗಳಲ್ಲಿಯೇ ಇದರ ಬಳಕೆ ಹೆಚ್ಚು. ಏಕೆಂದರೆ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಗಳನ್ನು ನೀಡುತ್ತದೆ.

ನಟ್‌ಮಗ್‌ ಎಂದು ಕರೆಯುವ ಜಾಯಿಕಾಯಿಯಲ್ಲಿ ಮ್ಯಾಂಗ್ನೀಶಿಯಂ, ಮ್ಯಾಂಗ್ನೀಸ್‌, ಕಾಪರ್‌, ವಿಟಮಿನ್‌ ಬಿ6 ಮುಂತಾದ ಖನಿಜ ಮತ್ತು ವಿಟಮಿನ್‌ಗಳನ್ನು ಹೊಂದಿದೆ. ಇದರಿಂದ ಜಾಯಿಕಾಯಿಯನ್ನು ಸ್ಕಿನ್‌ ಕೇರ್‌ ಔಷಧಗಳಲ್ಲಿ ಬಳಕೆ ಮಾಡುತ್ತಾರೆ. ಇಲ್ಲಿ ಕೆಲವೊಂದು ಮನೆಮದ್ದುಗಳನ್ನು ಹೇಳಿದ್ದೇವೆ.ಜಾಯಿಕಾಯಿಯಿಂದ ಯಾವೆಲ್ಲಾ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂಬುದು ಇಲ್ಲಿದೆ.‌‌

ಜಾಯಿಕಾಯಿಯ ಆರೋಗ್ಯ ಪ್ರಯೋಜನಗಳು :

ಹಲ್ಲುನೋವಿನಿಂದ ಪಾರಾಗಲು :
ಹಲ್ಲುನೋವಿಗೆ ಲವಂಗದ ಎಣ್ಣೆಯನ್ನು ಬಳಸುತ್ತಾರೆ. ಅದೇ ರೀತಿ ಜಾಯಿಕಾಯಿ ಅಥವಾ ಜಾಯಿಕಾಯಿಯ ಎಣ್ಣೆಯು ಹಲ್ಲು ನೋವಿಗೆ ಉಪಯೋಗಿಸುತ್ತಾರೆ. ಹೆಚ್ಚಿನ ಹರ್ಬಲ್‌ ಟೂತ್‌ಪೇಸ್ಟ್‌ಗಳಲ್ಲಿ ಇದನ್ನು ಉಪಯೋಗಿಸುತ್ತಾರೆ.

ಜಾಯಿಂಟ್‌ ಪೇನ್‌ ಕಡಿಮೆ ಮಾಡತ್ತೆ:
ಜಾಯಿಂಟ್‌ ಪೇನ್‌ ಇದ್ದವರಿಗೆ ಜಾಯಿಕಾಯಿಯಿಂದ ಬಹಳ ಆರಾಮ ಸಿಗುತ್ತದೆ. ಜಾಯಿಕಾಯಿನ್ನು ತೇಯ್ದು ಪೇಸ್ಟ್‌ ಮಾಡಿಕೊಳ್ಳಿ. ಅದನ್ನು ನೋವಿದ್ದ ಜಾಗದಲ್ಲಿ ಹಚ್ಚಿ. ಜಾಯಿಕಾಯಿಯ ಲೇಪವು ನೋವಿನಿಂದ ನಿಮಗೆ ಆರಾಮವನ್ನು ನೀಡುತ್ತದೆ. ಇದು ಮೊಣಕಾಲಿನ ಮತ್ತು ಸೊಂಟದ ನೋವಿಗೆ ಉತ್ತಮವಾಗಿದೆ.

ಧ್ವನಿ ಸರಿಪಡಿಸಿಕೊಳ್ಳಲು:
ಜಾಯಿಕಾಯಿಯಿಂದ ನಮ್ಮ ಗಂಟಲನ್ನು ಸರಿಪಡಿಸಿಕೊಳ್ಳಬಹುದು. ಕೆಲವೊಮ್ಮೆ ವಾತಾವರಣದ ಬದಲಾವಣೆಯಿಂದಲೋ ಅಥವಾ ಶೀತ, ಕೆಮ್ಮಿನಿಂದಲೋ ನಮ್ಮ ಗಂಟಲು ಕಟ್ಟಿದಂತಾಗಿ ಧ್ವನಿ ಸರಿಯಾಗಿ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಾಯಿಕಾಯಿಯ ಉಪಯೋಗದಿಂದ ಬೇಗನೆ ಧ್ವನಿಯನ್ನು ಸರಿಪಡಿಸಿಕೊಳ್ಳಬಹುದು. ಹೇಗೆಂದರೆ,ಕಾಲು ಚಮಚ ಜಾಯಿಕಾಯಿಯ ಪುಡಿ ತೆಗೆದುಕಕೊಳ್ಳಿ. ಅದನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಹಾಕಿ. ಅದರಿಂದ ಗಾರ್‌ಗಲ್‌ ಮಾಡಿ. ಹೀಗೆ ಮಾಡುವುದರಿಂದ ಧ್ವನಿ ಸರಿಯಾಗುತ್ತದೆ.

ಇದನ್ನೂ ಓದಿ : Health Benefits of Papaya Leaves : ಪಪ್ಪಾಯ ಎಲೆ ಆರೋಗ್ಯಕ್ಕೆ ದಿವ್ಯೌಷದ

ಇದನ್ನೂ ಓದಿ : Banana Shake Side Effects : ಮಕ್ಕಳಿಗೆ ಪ್ರತಿದಿನ ಬಾಳೆಹಣ್ಣಿನ ಮಿಲ್ಕ್‌ ಶೇಕ್‌ ಕೊಡುವ ಮೊದಲು ಇದನ್ನೊಮ್ಮೆ ಓದಿ…

(Benefits Of Nutmeg in daily life. How to use this miracle spice)

Comments are closed.