ಲೋಕಸಭಾ ಚುನಾವಣೆ : ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ? ಜಯಭೇರಿ ಹಿಂದಿರೋ ಲೆಕ್ಕಾಚಾರಗಳೇನು ಗೊತ್ತಾ?!

Lok sabha Election 2024  : ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶದ ಲೆಕ್ಕಾಚಾರವಷ್ಟೇ. ಈ ಮಧ್ಯೆ ಬಿಜೆಪಿ ಜೆಡಿ ಎಸ್ ಮೈತ್ರಿ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.

Lok sabha Election 2024  : ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶದ ಲೆಕ್ಕಾಚಾರವಷ್ಟೇ. ಈ ಮಧ್ಯೆ ಬಿಜೆಪಿ ಜೆಡಿ ಎಸ್ ಮೈತ್ರಿ ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಮತ ಎಣಿಕೆಗೆ ಇನ್ನೂ 11 ದಿನ ಬಾಕಿ ಇರುವಾಗಲೇ ಬಿಜೆಪಿ ಹಲವು ಅಂಶಗಳನ್ನು ಗಣನೆಯಲ್ಲಿಟ್ಟುಕೊಂಡು ಯಾವೆಲ್ಲ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು. ಗೆಲುವಿಗೆ ಯಾವೆಲ್ಲ ಅಂಶ ಕಾರಣವಾಗಬಹುದು ಎಂಬ ಪಟ್ಟಿ ತಯಾರಿಸಿದೆ. ಬಿಜೆಪಿ ಆಂತರಿಕ ಲೆಕ್ಕಾಚಾರದ ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ.

Lok sabha Election 2024 How many seats won Bjp in Karnataka
Image Credit to Original Source

ಮೋದಿಯವರನ್ನು ಪ್ರಧಾನಿ ಮಾಡುವುದಕ್ಕಾಗಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಹಾಗೂ ಇನ್ನಷ್ಟು ಕಾರಣಗಳನ್ನು ಇಟ್ಟುಕೊಂಡು ಮೈತ್ರಿಕೂಟ 20 ರಿಂದ 22 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ. ಹಾಗಿದ್ದರೇ ಬಿಜೆಪಿ ಹಾಗೂ ಜೆಡಿಎಸ್ ನ ಅಭೂತಪೂರ್ವ ಗೆಲುವಿಗೆ ಕಾರಣವಾಗೋ ಅಂಶಗಳನ್ನು ಖುದ್ದು ಬಿಜೆಪಿ ಪಟ್ಟಿ ಮಾಡೋದು ಹೀಗೆ.

ಇದನ್ನೂ ಓದಿ :  ಚುನಾವಣೆ ಮುಗಿದರೂ ಮುಗಿಯದ ಬಂಡಾಯದ ಭೀತಿ : ಬಿಜೆಪಿ ವಿರುದ್ದ ಮುನಿಸಿಕೊಂಡ ಉಡುಪಿ ಮಾಜಿ ಶಾಸಕ ರಘುಪತಿ ಭಟ್‌

 • ಉಡುಪಿ ಚಿಕ್ಕಮಗಳೂರು – ಹೊಸ ಅಭ್ಯರ್ಥಿ ಆಗಿದ್ದರೂ, ಮೋದಿ,- ಹಿಂದೂತ್ವದ ಬಲವಿದೆ ಎಂಬ ನಂಬಿಕೆ.
 • ಹಾಸನ – ದೇವೇಗೌಡ್ರ ವರ್ಚಸ್ಸು, ಜಿಲ್ಲೆಯಲ್ಲಿನ ರೇವಣ್ಣ ಪ್ರಾಬಲ್ಯ, ಅವರ ಕಾರ್ಯಗಳು, ದೋಸ್ತಿ, ಮೋದಿಯ ಬಲವಿದೆ ಎಂಬುದು ವಿಶ್ವಾಸ.
 • ದಕ್ಷಿಣ ಕನ್ನಡ – ಹಿಂದೂತ್ವ,ಮೋದಿ, ಯುವಕ, ಬಿಜೆಪಿ ಸರ್ಕಾರದ ಕಾರ್ಯಗಳ ಇಂಪ್ಯಾಕ್ಟ್,
 • ಚಿತ್ರದುರ್ಗ -ಅಭ್ಯರ್ಥಿ ದಲಿತ ನಾಯಕ ಜೊತೆಗೆ ಮೋದಿ, ಸಮಾಜಕ್ಕೆ ಬಿಜೆಪಿ ಕೊಟ್ಟ ಕೊಡುಗೆಗಳು.
 • ತುಮಕೂರು – ಲಿಂಗಾಯತ ಸಮಾಜದ ನಾಯಕ,ಜೆಡಿಎಸ್ ನಾಯಕರ ಸಹಕಾರ- ಮೋದಿ ನಾಮದ ಬಲ
 • ಮಂಡ್ಯ -ಒಕ್ಕಲಿಗ ಸಮಾಜದ ಪ್ರಬಲ ಮುಖಂಡ ಮತ್ತು ದೋಸ್ತಿ ಹಾಗೂ ಬಿಜೆಪಿ ಬಲ
 • ಮೈಸೂರು – ರಾಜ ಮತ್ತು ಮೋದಿ ಎಂಬ ವಿಶ್ವಾಸ ಉಳಿದ ನಾಯಕರಿಂದ ಒಗ್ಗಟ್ಟಿನ ತಂತ್ರ
 • ಚಾಮರಾಜನಗರ- ದಲಿತ ಸಮಾಜ, ಬಿಜೆಪಿಯ ಸಾಧನೆ ಹಾಗೂ ಮೋದಿಯ ಜಪ
 • ಬೆಂಗಳೂರು ಗ್ರಾಮಾಂತರ- ಜಯದೇವ ನಿರ್ದೇಶಕರಾಗಿ ಬಡವರಿಗೆ ಒಳ್ಳೆಯ ಕೆಲಸ ಮಾಡಿದ ಹೆಸರು ,ಡಾಕ್ಟರ್,ಬಿಜೆಪಿ ಮುಖ್ಯವಾಗಿ ದೋಸ್ತಿಗಳ ಒಗ್ಗಟ್ಟಿನ ತಂತ್ರ ಫಲಿಸುವ ವಿಶ್ವಾಸ.
 • ಬೆಂಗಳೂರು ಉತ್ತರ ಮೋದಿ ಹವಾ ಮತ್ತು ಬಿಜೆಪಿ ಶಾಸಕರ ಬೆಂಬಲ.
  ಬೆಂಗಳೂರು ಕೇಂದ್ರ ಸರ್ಕಾರದ ಕಾರ್ಯಕ್ರಮ ಮತ್ತು ಅಭ್ಯರ್ಥಿಯ ಹಿಂದಿನ ಕಾರ್ಯಗಳ ಬೆಂಬಲ.
 • ಬೆಂಗಳೂರು ದಕ್ಷಿಣ- ಮೋದಿಯ ನಾಮಬಲ ಮತ್ತು ಹಿಂದೆ ಸಂಸದರಾಗಿ ಮಾಡಿದ ಕಾರ್ಯಗಳ ನೆರವು.
 • ಚಿಕ್ಕಬಳ್ಳಾಪುರ- ವೈದ್ಯ, ಯುವನಾಯಕ ಹಾಗೂ ಸೋಲಿನ ಸಿಂಪಥಿ

  Lok sabha Election 2024 How many seats won Bjp in Karnataka
  Image Credit to Original Source

ಇದನ್ನೂ ಓದಿ : ಪರಶುರಾಮ ಥೀಮ್‌ ಪಾರ್ಕ್‌ ಸುನಿಲ್‌ ಕುಮಾರ್‌ ಆಸ್ತಿಯಲ್ಲ, ಕಾರ್ಕಳದ ಆಸ್ತಿ, ಜನರೇ ತೀರ್ಮಾನ ಕೈಗೊಳ್ಳಿ : ಶಾಸಕ ಸುನಿಲ್‌ ಕುಮಾರ್‌

 • ಕೋಲಾರ ಸ್ಥಳೀಯವಾಗಿ ಅಭ್ಯರ್ಥಿ ಪ್ರಾಬಲ್ಯಹಾಗೂ ಮೋದಿ ಪ್ರಚಾರದ ಬೆಂಬಲ
 • ಚಿಕ್ಕೋಡಿ: ಮೋದಿ ವರ್ಚಸ್ಸು, ಸ್ಥಳೀಯ ಅಭ್ಯರ್ಥಿಯ ಕೆಲಸ, ಮತ್ತೆ ಪ್ರಾಬಲ್ಯವಿದೆ.
 • ಬೆಳಗಾವಿ – ಪ್ರತಿಪಕ್ಷ ನಾಯಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿರುವ ಕಾರ್ಯಗಳು, ಬಣಜಿಗ ಲಿಂಗಾಯತ ಮತಗಳು
 • ಬಾಗಲಕೋಟೆ -ಸ್ಥಳೀಯ ಅಭ್ಯರ್ಥಿ ಕಾರ್ಯ, ಪ್ರಾಬಲ್ಯ
 • ಬಿಜಾಪುರ‌-ಸ್ಥಳೀಯ ಅಭ್ಯರ್ಥಿಯ ಪ್ರಾಬಲ್ಯ, ಸಾಧನೆಗಳು ಹಾಗೂ ಮೋದಿಯ ಹೆಸರು.
 • ಗುಲ್ಬರ್ಗ ಮೋದಿ, ಬಿಜೆಪಿ, ಬಂಜಾರ ಸಮುದಾಯದ ನಾಯಕ + ಸಮುದಾಯಕ್ಕೆ ಬಿಜೆಪಿ ಸರ್ಕಾರ ನೀಡಿದ ಕೊಡುಗೆ
 • ರಾಯಚೂರು – ಸ್ಥಳೀಯವಾಗಿ ವಿರೋಧ ವಿದ್ದರೂ, ತಮ್ಮ ಪ್ರಾಬಲ್ಯ ಹಾಗೂ ಮೋದಿ ಬಲ
 • ಬೀದರ್ – ಸ್ಥಳೀಯವಾಗಿ ವಿರೋಧ ಇದ್ದರೂ, ತಮ್ಮ ಕಾರ್ಯ ಹಾಗೂ ಮೋದಿ ಶಕ್ತಿ
 • ಕೊಪ್ಪಳ – ಸ್ಥಳೀಯ ವಾಗಿ ವಿರೋಧ ಇದ್ದರೂ, ಯುವ ನಾಯಕತ್ವಕ್ಕೆ ಒಲವು ತೋರಿರುವ ಸಾಧ್ಯತೆ – ಜನಾರ್ದನ್ ರೆಡ್ಡಿಯ ಸಹಕಾರ – ಮೋದಿಯ ಬಲ
 • ಬಳ್ಳಾರಿ – ಎಸ್ಟಿ ಸಮಾಜದ ನಾಯಕ, ಕಳೆದ ಬಾರಿ ಸೋತಿರುವ ಸಿಂಪಥಿ, ಜನಾರ್ದನ್ ರೆಡ್ಡಿಯ ಸಹಕಾರ ಮತ್ತು ಮೋದಿ ಬಲ
 • ಹಾವೇರಿ – ಸಿಎಂ ಆಗಿ ಜಿಲ್ಲೆಗೆ ಮಾಡಿದ್ದ ಕಾರ್ಯಗಳು, ಹಿಂದುಗಳ ಸಮಾಜಗಳಿಗೆ ಬಿಜೆಪಿ ಕೊಟ್ಟ ಕಾರ್ಯಕ್ರಮಗಳು ಮತ್ತು ಮೋದಿಯ ಬಲ
 • ಧಾರವಾಡ + ಕ್ಷೇತ್ರದ ಜನರ ಜೊತೆಗಿನ ಒಡನಾಟ, ಕೇಂದ್ರ ಸಚಿವರಾಗಿ ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳು, ಮೋದಿ, ಮತ್ತೆ ಬಿಜೆಪಿ ಬಲ
 • ಉತ್ತರ ಕನ್ನಡ – ಮೋದಿ, ಬಿಜೆಪಿ- ಹಿಂದೂತ್ವದ ಬಲ – ಕಳೆದ ಬಾರಿ ಸೋಲಿನ ಸಿಂಪಥಿ, ಕೊನೆಯ ಚುನಾವಣೆ,
 • ದಾವಣಗೆರೆ – ಸಿದ್ದೇಶ್ವರ್ ಕುಟುಂಬದ ಪ್ರಾಬಲ್ಯ, ಮಹಿಳಾ ಅಭ್ಯರ್ಥಿ, ಮೋದಿ ಬಲ
 • ಶಿವಮೊಗ್ಗ – ಹಿಂದೂತ್ವ, ಯಡಿಯೂರಪ್ಪ ಶಕ್ತಿ, ಲಿಂಗಾಯತ ಸಮಾಜ – ಹಿಂದೆ ಲೋಕಸಭಾ ಸದಸ್ಯರಾಗಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳು

ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮೋದಿಯ ನಾಮಬಲ ಹಾಗೂ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದ ಗೆಲುವಿನ ಲೆಕ್ಕಾಚಾರ ಸಿದ್ಧಪಡಿಸಿದ. ಆದರೆ ಈ ಲೆಕ್ಕಾಚಾರ ಎಷ್ಟು ಸರಿ? ಎಷ್ಟು ತಪ್ಪು ಅನ್ನೋದನ್ನು ಅರಿಯೋದಿಕ್ಕೆ ಜೂನ್ 4 ರ ತನಕ ಕಾಯಲೇಬೇಕಿದೆ.

ಇದನ್ನೂ ಓದಿ : ಕನ್ನಡದಲ್ಲೇ ಐಎಎಸ್ ಬರೆಯಬೇಕಾ ? ಇಲ್ಲಿದೆ ಸರಳವಾದ ಟಿಪ್ಸ್

Lok sabha Election 2024 How many seats won Bjp in Karnataka

Comments are closed.