Sumalatha : ಬಿಜೆಪಿಗೆ ಬರ್ತಾರಂತೆ ಸುಮಲತಾ : ಸಿದ್ಧವಾಗಿದೆ ಕಮಲ ಪಾಳಯದ ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ಪಂಚ ರಾಜ್ಯಗಳ ಚುನಾವಣೆಯ ಗೆಲುವಿನೊಂದಿಗೆ ನೈತಿಕವಾಗಿ ಬಲವರ್ಧಿಸಿಕೊಂಡಿರೋ ಬಿಜೆಪಿ ರಾಜ್ಯದಲ್ಲೂ ಅಧಿಕಾರದ ಚುಕ್ಕಾಣಿಯನ್ನು ಮುಂದಿನ ಭಾರಿಯೂ ತನ್ನದಾಗಿಸಿಕೊಳ್ಳುವ ಸಿದ್ಧತೆಯಲ್ಲಿದೆ. ಹೀಗಾಗಿ ವಿಧಾನಸಭಾ ಚುನಾವಣೆಗೆ ಮುನ್ನವೇ ರಾಜ್ಯ ಬಿಜೆಪಿ ( BJP) ಮಹಾ ಪ್ಲಾನ್ ಮಾಡಿದ್ದುಬೃಹತ ಸಮಾವೇಶದ ಮೂಲಕ ಮತದಾರರನ್ನಯ ಸೆಳೆಯಲು ಸಜ್ಜಾಗುತ್ತಿದೆ. ಮಾತ್ರವಲ್ಲ ಬಿಜೆಪಿ ಶಕ್ತವಾಗಿಲ್ಲದ ಸ್ಥಳದಲ್ಲಿ ಅನ್ಯ ಪಕ್ಷದವರನ್ನು ಬಿಜೆಪಿ ಗೆ ಸೇರಿಸಿಕೊಳ್ಳುವ ಯತ್ನದಲ್ಲಿದ್ದು, ಈ ಸಾಲಿಗೆ ಸುಮಲತಾ (MP Sumalatha) ಹೆಸರೇ ಮೊದಲು ಕೇಳಿಬಂದಿದೆ.

ಬಿಜೆಪಿ ಮಂಡ್ಯ ಭಾಗದಲ್ಲಿ ಹೇಳಿಕೊಳ್ಳುವಂತ ಶಕ್ತಿಯನ್ನೇನು ಗಳಿಸಿಕೊಂಡಿಲ್ಲ. ಹೀಗಾಗಿ ಆ ಭಾಗದಲ್ಲಿ ಶಕ್ತಿವರ್ಧನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮೇ 15 ರ ಬಳಿಕ ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸುವ ಸಿದ್ಧತೆಯಲ್ಲದೆ. ಕಾರ್ಯಕ್ರಮಕ್ಕೆ ಬರುವಂತೆ ಅಮಿತ್ ಶಾ ಗೆ ಮನವಿ ಮಾಡಿರೋ ರಾಜ್ಯ ಬಿಜೆಪಿ ಘಟಕ ಕನಿಷ್ಠ ಒಂದು ಲಕ್ಷ ಜನರನ್ನು ಸೇರಿಸಲು ಪ್ಲಾನ್ ಮಾಡಿದೆ. ಮೂಲಗಳ ಮಾಹಿತಿ ಪ್ರಕಾರ ಇದೇ ಸಮಾವೇಶದಲ್ಲಿ ಸಂಸದೆ ಸುಮಲತಾ ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರಂತೆ. ಇದರಿಂದ ಮಂಡ್ಯ ಭಾಗದಲ್ಲಿ ಬಿಜೆಪಿಗೆ ಬಲ ಬರಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಕೇವಲ ಸುಮಲತಾ ಮಾತ್ರವಲ್ಲ ಚುನಾವಣಾ ಕಾರ್ಯ ತಂತ್ರ ಹೆಣೆದಿರೋ ಬಿಜೆಪಿ ಹಳೆ ಮೈಸೂರು ಭಾಗ, ಕೋಲಾರ, ಹಾಸನ , ದೊಡ್ಡಬಳ್ಳಾಪುರದಲ್ಲಿ ಪಕ್ಷ ಬಲವರ್ಧನೆಗೆ ಮಹಾ ತಂತ್ರ ಹೂಡಿದ್ದು, ಪಕ್ಷ ವೀಕ್ ಇರುವ ಕಡೆ ಅನ್ಯ ಪಕ್ಷದ ನಾಯಕರನ್ನು ಸೆಳೆಯಲು ಪ್ಲಾನ್ ಮಾಡಿದೆ. ಸುಮಲತಾ ಜೊತೆಗೆ ಮಾಜಿ ಸಂಸದ ಮುದ್ದ ಹನುಮೇಗೌಡ ಕೂಡ ಕಮಲ ಹಿಡಿತಾರೆ ಎನ್ನಲಾಗ್ತಿದೆ. ಪಕ್ಷೇತರ ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳು ಖಚಿತಪಡಿಸಿದ್ದರೂ ಈ ಬಗ್ಗೆ ಸುಮಲತಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೂ ಮಗನ ಚುನಾವಣಾ ಭವಿಷ್ಯದ ಕಾರಣ ಮುಂದಿಟ್ಟುಕೊಂಡು ಸುಮಲತಾ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಅನ್ಯಪಕ್ಷದ ನಾಯಕರನ್ನು ಸೆಳೆಯೋದರ ಜೊತೆಗೆ ಕೋಲಾರ, ರಾಮನಗರ, ತುಮಕೂರು, ದೊಡ್ಡಬಳ್ಳಾಪುರ, ಹಾಸನ ಜಿಲ್ಲೆಗಳಲ್ಲೂ ಬೃಹತ್ ಸಮಾವೇಶ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಈ ರಾಲಿ ಹಾಗೂ ಸಮಾವೇಶಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಮಿತ್ ಶಾ‌ ಸೇರಿ ಕೇಂದ್ರದ ಪ್ರಮುಖ ನಾಯಕರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲೇ
ಹಾಲಿ ಶಾಸಕರು, ಮಾಜಿ ಶಾಸಕರು ಸೇರಿ ಅನ್ಯ ಪಕ್ಷದ ಸ್ಥಳೀಯ ಲೀಡರ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಳ್ಳಲು ರಣತಂತ್ರ ಸಿದ್ಧವಾಗಿದೆ. ಒಟ್ಟಿನಲ್ಲಿ ಬಿಜೆಪಿ ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಆರಂಭಿಸಿದ್ದು ಕಮಲ ಪಾಳಯದ ಈ ಹಳೆ ಟ್ರಿಕ್ಸ್ ವರ್ಕೌಟ್ ಆಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಹತ್ವದ ಹೇಳಿಕೆ ನೀಡಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ :  ಕೊರೊನಾ ನಾಲ್ಕನೇ ಅಲೆ : ಕರ್ನಾಟಕ ಸರಕಾರದಿಂದ ಜಾರಿಯಾಯ್ತು ಮಾರ್ಗಸೂಚಿ

Mandya MP Sumalatha Join BJP

Comments are closed.