Dakshina Kannada Congress Candidates: : ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಎಲ್ಲವೂ ಹೊಸಮುಖ : ಹೈಕಮಾಂಡ್ ಹೊಸ ಸೂತ್ರ ಬಹುತೇಕ ಅಂತಿಮ !

ಮಂಗಳೂರು : Dakshina Kannada Congress Candidates: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಜ್ಜಾಗುತ್ತಿದೆ. ಕರಾವಳಿ ರಾಜಕೀಯದ ಮಟ್ಟಿಗೆ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಹೈಕಮಾಂಡ್ ಹೊಸಮುಖದ ಸೂತ್ರ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.

ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಬಾರಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳನ್ನೇ ಇಟ್ಟುಕೊಂಡು ಮುಂದಿನ ಒಂದೆರಡು ದಶಕಗಳ ಕಾಲ ಪಕ್ಷವನ್ನು ಗಟ್ಟಿಗೊಳಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಜಾತಿ, ವಯಸ್ಸು, ವರ್ಚಸ್ಸು ಸೇರಿದಂತೆ ಎಲ್ಲಾ ದೃಷ್ಟಿಕೋನದಲ್ಲಿಯೂ ಕಾಂಗ್ರೆಸ್ ಹೈಕಮಾಂಡ್ ಲೆಕ್ಕಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯ ಜೊತೆಗೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಗಿರುವ ಎಡವಟ್ಟುಗಳು ಪುನರಾವರ್ತನೆ ಆಗದಂತೆ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಯನ್ನು ಇರಿಸುತ್ತಿದೆ.

ಹಾಗಾದ್ರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಅನ್ನೋ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಉಳ್ಳಾಲ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿಯೂ ಹೊಸಮುಖಗಳು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದು ಖಚಿತ. ಅದ್ರಲ್ಲೂ ಯುವ ಮುಖಂಡರಿಗೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ. ಜೊತೆಗೆ ಜಾತೀವಾರು ಲೆಕ್ಕಾಚಾರದಲ್ಲಿಯೂ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿಕೊಂಡಿದೆ. ಹಾಗಾದ್ರೆ ಈ ಬಾರಿಯ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

Dakshina Kannada Congress Candidates : ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ :

ಮಂಗಳೂರು : ಯು.ಟಿ ಖಾದರ್
ಮಂಗಳೂರು ದಕ್ಷಿಣ : ಐವನ್ ಡಿಸೋಜ
ಮೂಡಬಿದ್ರಿ : ಮಿಥುನ್ ರೈ
ಬಂಟ್ವಾಳ : ಪದ್ಮರಾಜ್. ಆರ್
ಪುತ್ತೂರು : ಅಶೋಕ್ ಕುಮಾರ್ ರೈ
ಬೆಳ್ತಂಗಡಿ : ರಕ್ಷಿತ್ ಶಿವರಾ೦
ಮಂಗಳೂರು ಉತ್ತರ : ಇನ್ಯಾಯತ್ ಆಲಿ
ಸುಳ್ಯ: ನಂದಕುಮಾರ್

ಇದನ್ನೂ ಓದಿ : ಸಾಲ‌ಮನ್ನಾ ಹೆಸರಲ್ಲಿ ಸಿದ್ಧವಾಗ್ತಿದೆ ಭಾವುಕ ಅಸ್ತ್ರ : ರೈತರಿಗೆ ಪತ್ರ ಬರಿತಾರಂತೆ ಎಚ್ ಡಿಕೆ

ಕಾಂಗ್ರೆಸ್ ಸಿದ್ದಪಡಿಸಿರುವ ಪಟ್ಟಿ ಬಿಜೆಪಿ ನಾಯಕರ ತಲೆ ಕೆಡಿಸಿದಂತಿದೆ. ಒಂದೊಮ್ಮೆ ಇದೇ ಪಟ್ಟಿ ಬಿಡುಗಡೆಯಾದ್ರೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಬದಲಾಗಬಹುದು ಎನ್ನುತ್ತಿವೆ ಬಿಜೆಪಿಯ ಆಂತರಿಕ ಮೂಲಗಳು. ಇನ್ನು ಕಾಂಗ್ರೆಸ್ ಪಕ್ಷ ಹಳೆಯ ಮುಖಗಳನ್ನು ಬದಲಾಯಿಸಿ, ಹೊಸ ಮುಖಗಳಿಗೆ ಆದ್ಯತೆ ನೀಡಲು ಹೊರಟಿರವುದು ಕಾಂಗ್ರೆಸ್ ಪಾಳಯದಲ್ಲಿಯೇ ಸಂಚಲನ ಮೂಡಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಇದನ್ನೂ ಓದಿ : Congress New formula : 2 ಬಂಟ, 2 ಬಿಲ್ಲವ, 2 ಮುಸ್ಲೀಂ,1 ಕ್ರಿಶ್ಚಿಯನ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೊಸ ಸೂತ್ರ

ಕಾಂಗ್ರೆಸ್ ಹೊಸ ಮುಖಗಳಿಗೆ ಆದ್ಯತೆ ನೀಡಿದರೆ ಕಾಂಗ್ರೆಸ್ ದಕ್ಷಿಣ ಕನ್ನಡದಲ್ಲಿ ಮರಳಿ ತನ್ನ ಗತವೈಭವವನ್ನು ಪಡೆಯುತ್ತದೆ ಎನ್ನುತ್ತಿವೆ ಸಮೀಕ್ಷೆಯ ವರದಿಗಳು. ಸಮೀಕ್ಷೆಯ ವರದಿಗಳನ್ನೇ ಕಾಂಗ್ರೆಸ್ ಹೈಕಮಾಂಡ್ ಕೂಡ ಪರಿಗಣನೆ ಮಾಡಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಪಕ್ಷದ ಗೆಲುವಿಗಾಗಿ ಹೊಸ ಮುಖಗಳಿಗೆ ಮಣೆ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎನ್ನಲಾಗುತ್ತಿದೆ.

MLA Election 2023 new Candidates in Dakshina Kannada Congress High Command new formula is almost final

Comments are closed.