Virat Kohli century: 2023ರಲ್ಲಿ ಶುರು ಕಿಂಗ್ ಕೊಹ್ಲಿಯ ಶತಕ ಬೇಟೆ, ಸಚಿನ್ ದಾಖಲೆ ಮುರಿಯಲು ಇನ್ನು ಐದೇ ಹೆಜ್ಜೆ..!

ಗುವಾಹಟಿ: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli century) ತಮ್ಮ ಹೊಸ ವರ್ಷದ ಅಭಿಯಾನವನ್ನು ಶತಕದೊಂದಿಗೆ ಆರಂಭಿಸಿದ್ದಾರೆ. ಅಸ್ಸಾಂನ ಗುವಾಹಟಿ ಯಲ್ಲಿ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ (India Vs Sri Lanka ODI) ವಿರಾಟ್ ಕೊಹ್ಲಿ ಶತಕದೊಂದಿಗೆ ಅಬ್ಬರಿಸಿದ್ದಾರೆ. ಇದು ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಿಂಗ್ ಕೊಹ್ಲಿ ಸಿಡಿಸಿದ 45ನೇ ಶತಕ. ತವರು ನೆಲದಲ್ಲಿ ಬಾರಿಸಿದ 20ನೇ ಏಕದಿನ ಶತಕ.

ವಿರಾಟ್ ಕೊಹ್ಲಿ ಇನ್ನು ಐದು ಶತಕಗಳನ್ನು ಬಾರಿಸಿದರೆ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in ODI cricket) ದಾಖಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಿಂದ 49 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ 266 ಏಕದಿನ ಪಂದ್ಯಗಳಿಂದ 45 ಶತಕಗಳನ್ನು ಸಿಡಿಸಿದ್ದಾರೆ.

ಬಾಂಗ್ಲಾದೇಶ ಪ್ರವಾಸದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ ಪಾಲಿಗಿದು ಸತತ 2ನೇ ಏಕದಿನ ಶತಕವೂ ಹೌದು. ಶ್ರೀಲಂಕಾ ವಿರುದ್ಧ ಸಿಡಿಲಬ್ಬರದ ಆಟವಾಡಿದ ಕಿಂಗ್ ಕೊಹ್ಲಿ ಕೇವಲ 80 ಎಸೆತಗಳಲ್ಲಿ 73ನೇ ಅಂತರಾಷ್ಟ್ರೀಯ ಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ 87 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 113 ರನ್ ಗಳಿಸಿದ ಕೊಹ್ಲಿ, 49ನೇ ಓವರ್’ನಲ್ಲಿ ಔಟಾದರು.

ವಿರಾಟ್ ಕೊಹ್ಲಿ ಅವರ ಶತಕ, ನಾಯಕ ರೋಹಿತ್ ಶರ್ಮಾ (67 ಎಸೆತಗಳಲ್ಲಿ 83 ರನ್) ಮತ್ತು ಓಪನರ್ ಶುಭಮನ್ ಗಿಲ್ (60 ಎಸೆತಗಳಲ್ಲಿ 70 ರನ್) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ನಿಗದಿತ 50 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಕಲೆ ಹಾಕಿತು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಕನ್ನಡಿಗ ಕೆ.ಎಲ್ ರಾಹುಲ್ 29 ಎಸೆತಗಳಲ್ಲಿ 39 ರನ್ ಗಳಿಸಿದರು.

ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in ODI cricket)(ಟಾಪ್-5) ಆಟಗಾರ ಇನ್ನಿಂಗ್ಸ್ ಶತಕ

  1. ಸಚಿನ್ ತೆಂಡೂಲ್ಕರ್ (ಭಾರತ) 452 49
  2. ವಿರಾಟ್ ಕೊಹ್ಲಿ (ಭಾರತ) 257 45
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 365 30
  4. ರೋಹಿತ್ ಶರ್ಮಾ (ಭಾರತ) 229 29
  5. ಸನತ್ ಜಯಸೂರ್ಯ (ಶ್ರೀಲಂಕಾ) 433 28

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ (Most centuries in international cricket) (ಟಾಪ್-5) ಆಟಗಾರ ಇನ್ನಿಂಗ್ಸ್ ಶತಕ

ಇದನ್ನೂ ಓದಿ : Cricketer KL Rahul: ರಾಹುಲ್‌ಗೆ ಚಾನ್ಸ್ ಕೊಟ್ಟದ್ದೇಕೆ ಎಂದು ಪ್ರಶ್ನಿಸುವ “ಮೈಂಡ್‌ಲೆಸ್” ಜನರಿಗೆ ಇಲ್ಲಿದೆ ಉತ್ತರ!

  1. ಸಚಿನ್ ತೆಂಡೂಲ್ಕರ್ (ಭಾರತ) 782 100
  2. ವಿರಾಟ್ ಕೊಹ್ಲಿ (ಭಾರತ) 541 73
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 668 71
  4. ಕುಮಾರ ಸಂಗಕ್ಕಾರ (ಶ್ರೀಲಂಕಾ) 666 63
  5. ಜಾಕ್ ಕಾಲೀಸ್ (ದಕ್ಷಿಣ ಆಫ್ರಿಕಾ) 617 62

ಇದನ್ನೂ ಓದಿ : Faf du Plessis: ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ RCB ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್

English News Click Here

Virat Kohli century hunt begins in 2023 five more steps to break Sachin Tendulkar record

Comments are closed.