Medical Seat Hike : ಮೆಡಿಕಲ್ ಸೀಟು ಹೆಚ್ಚಳಕ್ಕೆ ಭಾರತೀಯ ವೈದ್ಯಕೀಯ ಪರಿಷತ್ ಆಗ್ರಹ

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರೋ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣವಿಲ್ಲ. ಹೀಗಾಗಿ ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವ ಕಾರ್ಯ‌ಚುರುಕುಗೊಂಡಿದೆ. ಭಾರತದಾದ್ಯಂತ 18 ಸಾವಿರಕ್ಕೂ ಆಧಿಕ ವೈದ್ಯಕೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. ಹೀಗಾಗಿ ಈ ವಿದ್ಯಾರ್ಥಿಗಳ ಭವಿಷ್ಯದ ಕತೆಯೇನು ಎಂಬ ಆತಂಕ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ (medical seat hike) ಮನೆ ಮಾಡಿದೆ.

ಸಾವಿರಾರು ಸಂಖ್ಯೆಯಲ್ಲಿರುವ ಉಕ್ರೇನ್ ನಿಂದ ಹಿಂತಿರುಗಿದ ಭಾರತೀಯ ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ಭಾರತದಲ್ಲೇ ಮೆಡಿಕಲ್ ಏಜ್ಯುಕೇಶನ್ ಮುಂದುವರೆಸಲು ಅವಕಾಶ ಕೊಡಬೇಕು ಎಂಬ ಒತ್ತಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಮೆಡಿಕಲ್ ಸೀಟು ಏರಿಕೆ (Medical Seat Hike) ಮಾಡುವ ಸಾಧ್ಯತೆ ಇದೆ. ಉಕ್ರೇನ್ ರಷ್ಯಾ ಯುದ್ಧ ಹಿನ್ನೆಲೆ ಉಕ್ರೇನ್ ಸಾವಿರಾರು ಸಂಖ್ಯೆಯಲ್ಲಿ ಮೆಡಿಕಲ್ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವಿಧ್ಯಾರ್ಥಿಗಳ ಶಿಕ್ಷಣ ಅರ್ಧಕ್ಕೆ ಮೊಟಕು ಗೊಂಡಿರುವುದರಿಂದ ಇಲ್ಲಿಯೇ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಹೀಗಾಗಿ ಕರ್ನಾಟಕವೂ ಸೇರಿದಂತೆ ದೇಶದ ಮೆಡಿಕಲ್ ವಿದ್ಯಾರ್ಥಿಗಳಿಗೆ ಆಯಾ ರಾಜ್ಯದ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಬೇಕು. ವೈದ್ಯ ಕಾಲೇಜುಗಳಲ್ಲಿ ಮೂಲ ಸೌಕರ್ಯ ಹೆಚ್ಚಳ ಕ್ಕೆ ಕ್ರಮಕೈಗೊಳ್ಳಬೇಕೆಂಬ ಒತ್ತಡ ವ್ಯಕ್ತವಾಗುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ಹೆಚ್ಚಾಗಿ ಮೆಡಿಕಲ್ ಮಾಡಲು ಹೊರ ದೇಶಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಮುಂಬರುವ ಶೈಕ್ಷಣಿಕ ವರ್ಷದಿಂದ ಮೆಡಿಕಲ್ ಸೀಟು ಹೆಚ್ಚಳ (Medical Seat Hike) ಮಾಡಲು ಚಿಂತನೆ ನಡೆಸವಂತೆ ಈಗಾಗಲೇ ಕೇಂದ್ರಕ್ಕೆ ಭಾರತೀಯ ವೈದ್ಯಕೀಯ ಪರಿಷತ್ ಮನವಿ ಮಾಡಿದೆ.

ಮುಂದಿನ ವರ್ಷದಿಂದ ಮೆಡಿಕಲ್ ಸೀಟುಗಳನ್ನು ಹೆಚ್ಚಿಸಿ ಇಲ್ಲಿಯೇ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಪ್ರಸ್ತುತ ದೇಶದಲ್ಲಿ ಅಂದಾಜು 85 ಸಾವಿರ ದಷ್ಟು ಮೆಡಿಕಲ್ ಸೀಟುಗಳಿದ್ದು ಇದಕ್ಕಾಗಿ ಪ್ರತಿವರ್ಷ 5-6 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ನೀಟ್ ಪರೀಕ್ಷೆ ಬರೆಯುತ್ತಾರೆ. ಹೀಗಾಗಿಯೇ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಅರಸಿ ಬೇರೆ ದೇಶಗಳಿಗೆ ತೆರಳಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.

ಹೀಗಾಗಿ ಈಗಾಗಲೇ ಉಕ್ರೇನ್ ನಿಂದ ಆಗಮಿಸಿರುವ ಹಾಗೂ ಅರ್ಧ ಶಿಕ್ಷಣ ಪೊರೈಸಿರುವ ವಿದ್ಯಾರ್ಥಿಗಳಿಗೂ ಹಾಗೂ ಇತರ ವಿದ್ಯಾರ್ಥಿಗಳಿಗೂ ನೆರವು ನೀಡಲು ವೈದ್ಯಕೀಯ ಸೀಟು (Medical Seat Hike)ಗಳನ್ನು ಹೆಚ್ಚಿಸಿ ಎಂದು ಭಾರತೀಯ ವೈದ್ಯಕೀಯ ಪರಿಷತ್ ಮನವಿ‌ ಮಾಡಿದೆ. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದೆ.

ಇದನ್ನೂ ಓದಿ : ಟ್ರಾಫಿಕ್ ಪೊಲೀಸರಿಗೆ ಬಂತು ಕಡ್ಡಾಯ ಬಾಡಿ ವೋರ್ನ್ ಕ್ಯಾಮರಾ

ಇದನ್ನೂ ಓದಿ : ಭಾರತದಲ್ಲಿ ಒಂದೇ ದಿನ 4,575 ಹೊಸ ಕೊರೊನಾ ಪ್ರಕರಣ, 145 ಮಂದಿ ಸಾವು

( Ukraine Crisis : Indian Medical Council demands medical seat hike)

Comments are closed.