ಶಾಸಕರು ಗೋಣಿಚೀಲದಲ್ಲಿ ಹಣ ತರ್ತಾರೆ ! ಹರೀಶ್‌ ಪೂಂಜಾಗೆ ಮುಳುವಾಗುತ್ತಾ ಇಡಿ(ED)ಯ ಪಿಎಂಎಲ್‌ಎ ಕಾಯ್ಡೆ ?

ಬೆಳ್ತಂಗಡಿ : ಶಾಸಕರು ಗೋಣಿ ಚೀಲದಲ್ಲಿ ಹಣ ತರುತ್ತಾರೆ. ಶಾಸಕರ ಕಚೇರಿ, ಮನೆಗೆ ಬಂದವರಿಗೆ ಲಕ್ಷಾಂತರ ರೂಪಾಯಿ ಹಣವನ್ನು ನೀಡುತ್ತಾರೆ. ಶಾಸಕರು ಜನಪರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ (MLA Harish Poonja) ಅವರನ್ನು ಹೊಗಳುವ ಮೂಲಕ ಬಿಜೆಪಿ ಕಾರ್ಯಕರ್ತ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ. ಇದೀಗ ಶಾಸಕ ಹರೀಶ್ ಪೂಂಜಾ ವಿರುದ್ದ ಇಡಿ ಹಾಗೂ ಎಸಿಬಿಗೆ ದೂರು ಸಲ್ಲಿಕೆಯಾಗಿದ್ದು, ಇಡಿಯ ಪಿಎಂಎಲ್‌ಎ ಕಾಯ್ಡೆಯ ಕಲಂ 3 ಮುಳುವಾಗುವ ಸಾಧ್ಯತೆಯಿದೆ.

ಬೆಳ್ತಂಗಡಿಯ ಬಳಂಜ ಗ್ರಾಮದ ನಾರಾಯಣಗುರು ಸಭಾಭವನದಲ್ಲಿ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಹರೀಶ್‌ ಪೂಂಜಾ ಅವರನ್ನು ಹೊಗಳುವ ಬರದಲ್ಲಿ ಶಾಸಕ ಹರೀಶ್‌ ಪೂಂಜಾ ಅವರ ಮನೆಗೆ ನಾನು ಹೋಗಿದ್ದೆ. ಈ ವೇಳೆಯಲ್ಲಿ ಪೂಂಜಾ ಅವರು ಮನೆಯ ಒಳಗೆ ಹೋಗಿ 10,000 ರೂ. ಹಣವನ್ನು ತಂದು ಸಹಾಯ ಕೇಳಿ ಬಂದ ಮಹಿಳೆಗೆ ಕೊಟ್ಟಿದ್ದಾರೆ. ನಂತರ ಬಳಂಜದ ಬಾಲಕೃಷ್ಣ ಪೂಜಾರಿ ಅವರಿಗೂ 10 ಸಾವಿರ ರೂಪಾಯಿ ಕೊಟ್ಟಿದ್ದರು. ಇನ್ನು ಶಾಸಕ ಕಚೇರಿ ಶ್ರಮಿಕಕ್ಕೆ ಹೋಗಿದ್ದೆ, ಅವರು ದಿನಾಲೂ ಒಳಗಿನಿಂದ ಚೀಲದಲ್ಲಿ ದೊಡ್ಡ ಮೊತ್ತದ ಹಣವನ್ನು ತರುತ್ತಾರೆ. ನಾನು ಸತ್ಯಾಂಶವನ್ನು ಹೇಳಿತ್ತಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ಹರೀಶ್ ವೈ ಚಂದ್ರಮ ನೀಡಿರುವ ಹೇಳಿಕೆ ಇದೀಗ ಶಾಸಕ ಹರೀಶ್‌ ಪೂಂಜಾಗೆ ಮುಳುವಾಗುವ ಸಾಧ್ಯತೆಯಿದೆ.

ಶಾಸಕರ ಪರ ಹೇಳಿಕೆ ನೀಡಿರುವ ಬೆನ್ನಲ್ಲೇ ಕಮ್ಯುನಿಸ್ಟ್‌ ನಾಯಕ ಶೇಖರ್ ಲಾಯಿಲಾ ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ (PMLA) ಕಾಯ್ದೆಯ ಕಲಂ ಮೂರರ ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಕೋರಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿಯೇ ಅನ್‌ಅಕೌಂಟೆಡ್‌ ಹಣದ ಕುರಿತು ಬಹಿರಂಗವಾಗಿ ಹೇಳಿಕೆ ನೀಡಲಾಗಿದೆ ಅಲ್ಲದೆ ಹಣದ ಮೂಲ (source of money) ಬಹಿರಂಗವಾಗಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಅಲ್ಲದೇ ವೇದಿಕೆಯಲ್ಲಿ ಶಾಸಕರು ಇದ್ದರೂ ಕೂಡ ಅದನ್ನು ತಡೆಯುವ ಕಾರ್ಯವನ್ನು ಮಾಡಿಲ್ಲ. ಹೀಗಾಗಿ ಶಾಸಕರ ಕಚೇರಿ ಹಾಗೂ ಮನೆಯನ್ನು ಶೋಧ ನಡೆಸಬೇಕು ಎಂದು E. D ಗೆ ಸಲ್ಲಿಸಿದ ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಏನ್‌ ಹೇಳುತ್ತೆ ಗೊತ್ತಾ PMLA ಕಾಯ್ದೆ ಯ ಕಲಂ 3 ?

ಅನ್‌ ಅಕೌಂಟೆಂಡ್‌ ಹಣದ ವ್ಯವಹಾರ ಮಾಡುವುದು, ಮಾಹಿತಿ ಗೊತ್ತಿದ್ದರೂ ಕೂಡ ಹಣದ ಮಾಹಿತಿಯನ್ನು ಮುಚ್ಚಿಡುವುದು ಅಪರಾಧ. ಇಂತಹ ಪ್ರಕರಣದಲ್ಲಿ ಇಡಿ ನೇರವಾಗಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ನಡೆಸಲು ಅವಕಾಶವಿದೆ. ಒಂದೊಮ್ಮೆ ಅಪರಾಧ ಸಾಬೀತಾದ್ರೆ ಶಾಸಕ ಹರೀಶ್‌ ಪೂಂಜಾ ಅವರಿಗೆ ಮುಳುವಾಗುವುದು ಖಚಿತ.

ಕಲಂ 3 ಯಾವುದೇ ವ್ಯಕ್ತಿ ಅನ್ ಅಕೌಂಟೆಡ್ ಹಣವನ್ನು ಹೊಂದಿದ್ದರೆ ಅದರ ಬಗ್ಗೆ ಮಾಹಿತಿಯನ್ನು ಸರಕಾರಕ್ಕೆ ತಿಳಿಸಬೇಕು ಎಂದು ಕಾಯ್ಡೆ ಸ್ಪಷ್ಟವಾಗಿ ಹೇಳುತ್ತದೆ. ಒಂದೊಮ್ಮೆ ಈ ವ್ಯಕ್ತಿ ಹಣವನ್ನು ಪಡೆದಿದ್ದರೆ ಅದು ಅಪರಾಧವಾಗುತ್ತದೆ. ಜೊತೆಗೆ ಹಣವನ್ನು ನೀಡುವುದು ಮಾತ್ರವಲ್ಲ, ಹಣದ ಬಗ್ಗೆ ಮಾಹಿತಿ ಇದ್ದರೂ ಕೂಡ ಅದನ್ನು ಮುಚ್ಚಿಡುವುದು ಅಪರಾಧವಾಗುತ್ತದೆ. ಇದೇ ಕಾರಣಕ್ಕೆ ಶೇಖರ ಲಾಯಿಲ ಅವರು ತಮ್ಮ ಅರ್ಜಿಯಲ್ಲಿ ಇಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಕೋರಿಕೊಂಡಿದ್ದಾರೆ.

ಶಾಸಕರ ಪರ ಬಿಜೆಪಿ ಕಾರ್ಯಕರ್ತ ಹರೀಶ ವೈ. ಚಂದ್ರಮ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನೊಂದೆಡೆಯಲ್ಲಿ ಇಡಿ(ED)ಗೆ ಸಲ್ಲಿಕೆಯಾಗಿರುವ ದೂರು ಶಾಸಕರಿಗೆ ಮುಳುವಾಗಲಿದೆ ಅನ್ನೋ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ ಕೂಡ ಇದೇ ಪ್ರಕರಣವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇಡಿ ಹಾಗೂ ಎಸಿಬಿ ಪ್ರಕರಣವನ್ನು ಹೇಗೆ ಪರಿಗಣಿಸುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ : ಹೈಕಮಾಂಡ್ ಕೈಸೇರಿದೆ 20 ಆಕಾಂಕ್ಷಿಗಳ ಲಿಸ್ಟ್

ಇದನ್ನೂ ಓದಿ : ಮತ್ತೊಮ್ಮೆ ಸಿಎಂ ಸ್ಥಾನಕ್ಕೇರಲು ಎಚ್.ಡಿ.ಕುಮಾರಸ್ವಾಮಿ ಸರ್ಕಸ್ : ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್‌

Belthangady MLA Harish Poonja Trouble under ED PMLA Act

Comments are closed.