WhatsApp :ವಾಟ್ಸಾಪ್‌ನಲ್ಲಾದ ಇತ್ತೀಚಿನ ಬದಲಾವಣೆಗಳು ನಿಮಗೆ ತಿಳಿದಿದೆಯಾ?

ಇಂದಿನ ಈ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣವನ್ನು(WhatsApp) ಬಳಸದೆ ಇರುವ ವ್ಯಕ್ತಿ ಕಾಣಸಿಗುವುದು ಅಪರೂಪದಲ್ಲಿ ಅಪರೂಪ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ವಯಸ್ಸಿನವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇನ್ಸ್ಟಾಗ್ರಾಮ್, ವಾಟ್ಸಾಪ್, ಯೂಟ್ಯೂಬ್, ಟ್ವಿಟರ್ ಹೀಗೆ ಒಂದಲ್ಲ ಒಂದು ಕಡೆ ತಮ್ಮ ಖಾತೆಯನ್ನು ತೆರೆದಿರುತ್ತಾರೆ. ಅದರಲ್ಲಿಯೂ ವಾಟ್ಸಾಪ್‌ನಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ವಾಟ್ಸಾಪ್ ಬಳಸಲು ಒಂದು ಕಾರಣ ಅತಿ ಸುಲಭವಾಗಿ ಬಳಸಬಹುದು ಎನ್ನುವುದಾದರೆ ಇನ್ನೊಂದು ಅತಿ ವೇಗವಾಗಿ ನಮ್ಮ ಭಾವನೆಯನ್ನು ಇನ್ನೊಬ್ಬರಿಗೆ ತಲುಪಿಸಬಹುದು ಎನ್ನುವುದು.

ಈ ವಾಟ್ಸಾಪ್ ದಿನದಿಂದ ದಿನಕ್ಕೆ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಒಂದಾದ ನಂತರ ಒಂದರAತೆ ಹೊಸ ಹೊಸ ಪಿಚರ್ಸ್ಗಳನ್ನು ನೀಡುತ್ತಾ ಬಂದಿದೆ. ಇದೀಗ ನಮ್ಮ ವಾಟ್ಸಾಪ್‌ನಲ್ಲಿಯೂ ಹೊಸದಾಗಿ ನಾಲ್ಕು ರೀತಿಯ ಪಿಚರ್ಸ್ಗಳ ಸೇರ್ಪಡೆಯಾಗಿದೆ. ಇದರಿಂದ ನಾವು ನಮ್ಮವರನ್ನು ಇನ್ನು ಹತ್ತಿರದಿಂದ ಕಾಣಲು, ಬೇಗ ತಲುಪಲು, ನಮ್ಮ ಭಾವನೆ ವ್ಯಕ್ತ ಪಡಿಸಲು ಸಹಕಾರಿಯಾಗಿದೆ. ಆ ನಾಲ್ಕು ಪಿಚರ್ಸ್ಗಳು ಯಾವುವೆಂದರೆ.

ಮೊದಲನೆಯದಾಗಿ
ವಾಟ್ಸಾಪ್‌ನಲ್ಲಿ ಇನ್ಸ್ಟಾಗ್ರಾಮ್‌ನಂತೆ ನಾವು ಕಳುಹಿಸಿದ ಸಂದೇಶಗಳಿಗೆ ಅಥವಾ ನಮಗೆ ಬಂದ ಸಂದೇಶಗಳಿಗೆ ಹಾರ್ಟ್, ನಗುವ, ಬೇಸರದ, ಖುಷಿಪಡುವ ಹೀಗೆ ಬೇರೆ ಬೇರೆ ಎಮೋಜಿಗಳನ್ನು ಕಳುಹಿಸಬಹುದಾಗಿದೆ. ನಮಗೆ ಬಂದ ಸಂದೇಶವನ್ನು ಒತ್ತಿ ಹಿಡಿದಾಗ ಎಲ್ಲಾ ರೀತಿಯ ಎಮೋಜಿಗಳು ಕಾಣಿಸುತ್ತವೆ. ಅದರಲ್ಲಿ ನಮಗೆ ಇಷ್ಟವಾದ ಎಮೋಜಿಯನ್ನು ಬಳಸಿಕೊಳ್ಳಬಹುದಾಗಿದೆ.

ಏರಡನೆಯದಾಗಿ
ವಾಟ್ಸಾಪ್ ವಾಯ್ಸ್ ಕಾಲ್ ಮಾಡುವಾಗ ಒಟ್ಟಿಗೆ ೩೨ ಜನರ ಜೊತೆ ಕಾನ್ಪರೆನ್ಸ್ ಕಾಲ್‌ಗಳನ್ನು ಮಾಡಬಹುದಾಗಿದೆ. ಈ ಹಿಂದೆ ೧೨ ಜನರ ಜೊತೆ ಮಾತ್ರ ಕಾನ್ಪರೆನ್ಸ್ ಕಾಲ್‌ಗಳನ್ನು ಮಾಡಬಹುದಾಗಿತ್ತು.

ಮೂರನೆಯದಾಗಿ
ವಾಟ್ಸಾಪ್ ಸ್ಟೇಟಸ್‌ಗಳ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಸ್ಟೇಟಸ್ ಸೆಲೆಕ್ಟ್ ಮಾಡಿ ಅದರ ಕೆಳಗಡೆ ಓನ್ಲಿ ಶೇರ್ ವಿತ್, ಮೈ ಕಾಂಟೆಕ್ಟ್, ಮೈ ಕಾಂಟೆಕ್ಟ್ ಎಕ್ಸೆಪ್ಟ್ಗಳಲ್ಲಿ ನಮಗೆ ಬೇಕಾಗಿದ್ದನ್ನು ಸೆಲೆಕ್ಟ್ ಮಾಡಿ ಸ್ಟೇಟಸ್ ಹಾಕಬಹುದು.

ಕೊನೆಯದಾಗಿ
ವಾಯ್ಸ್ ಮೆಸೇಜ್ ಕಳಿಸುವಾಗ ವಾಯ್ಸ್ ಮೆಸೇಜ್ ಬಟನ್ ಒತ್ತಿ ಹಿಡಿದು ಬೇಕಾದಾಗ ನಿಲ್ಲಿಸಿ ಮತ್ತೆ ಅದೇ ವೈಸ್ ಮುಂದುವರೆಸಬಹುದಾಗಿದೆ. ಹೀಗೆ ವಾಟ್ಸಾಪ್‌ನಲ್ಲಿ ಹೊಸದಾದ ನಾಲ್ಕು ರೀತಿಯ ಅಪ್‌ಡೇಟ್‌ಗಳು ಆಗಿವೆ. ಇದರಿಂದ ಬಳಕೆದಾರರಿಗೂ ಈ ವಾಟ್ಸಾಪ್ ಬಳಸುವಲ್ಲಿ ಇನ್ನಷ್ಟು ಖುಷಿಯೊಂತು ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.


ಇದನ್ನೂ ಓದಿ: Sunny Leone Autograph : ಅಭಿಮಾನಿ ಎದೆಮೇಲೆ ಸನ್ನಿ ಲಿಯೋನ್ ಆಟೋಗ್ರಾಫ್ : ಮಳೆ ಚಳಿಗೆ ಬಿಸಿ ಏರಿಸಿದ ಮಾದಕ ನಟಿ


ಇದನ್ನೂ ಓದಿ: HD Kumaraswamy : ಮತ್ತೊಮ್ಮೆ ಸಿಎಂ ಸ್ಥಾನಕ್ಕೇರಲು ಎಚ್.ಡಿ.ಕುಮಾರಸ್ವಾಮಿ ಸರ್ಕಸ್ : ದೇವಮೂಲೆಗಾಗಿ ಮಾಗಡಿಗೆ ಶಿಫ್ಟ್‌

(WhatsApp Four New Features)

Comments are closed.