mla zameer ahmed : ‘ವೈಯಕ್ತಿಕ ಅಭಿಪ್ರಾಯವನ್ನು ಹೊರಹಾಕುವ ಸ್ವಾತಂತ್ರ್ಯ ನನಗಿದೆ’ : ಡಿಕೆಶಿಗೆ ಶಾಸಕ ಜಮೀರ್ ಅಹಮದ್​ ಟಾಂಗ್​​

ದಾವಣಗೆರೆ : mla zameer ahmed : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎಂಟು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಕಿತ್ತಾಟ ಜೋರಾಗಿದೆ. ಡಿ.ಕೆಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಹೆಸರು ಸಿಎಂ ಅಭ್ಯರ್ಥಿಗಳ ರೇಸ್​ನಲ್ಲಿ ಕೇಳಿ ಬರ್ತಿದೆ. ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ ಎಂದು ಹೇಳಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಬಾಯಿ ಮುಚ್ಕೊಂಡು ಕೆಲಸ ಮಾಡಿ ಅಂತಾ ಜಮೀರ್​ಗೆ ವಾರ್ನಿಂಗ್​ ಕೊಟ್ಟಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ಜಮೀರ್​ ಅಹಮದ್​ ಕೆಪಿಸಿಸಿ ಅಧ್ಯಕ್ಷರು ಸಿಟ್ಟು ಮಾಡಿಕೊಂಡರೆ ನಾನೇನು ಮಾಡೋಕೆ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.


ದಾವಣಗೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಶಾಸಕ ಜಮೀರ್​ ಅಹಮದ್​, ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರಿಗೆ ಸಿಟ್ಟು ಬಂದರೆ ನಾನೇನು ಮಾಡೋಕೆ ಸಾಧ್ಯ..? ಸಿಎಂ ಅಭ್ಯರ್ಥಿ ಯಾರಾಗಬೇಕು ಅನ್ನೋದನ್ನು ಹೈಕಮಾಂಡ್​ ತೀರ್ಮಾನ ಮಾಡುತ್ತೆ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ತಾರೆ. ಸಿದ್ದರಾಮಯ್ಯರೇ ನಮ್ಮ ಮುಂದಿನ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನನಗೆ ನನ್ನ ಅಭಿಪ್ರಾಯವನ್ನು ಹೊರ ಹಾಕುವ ಸ್ವಾತಂತ್ರ್ಯವಿದೆ. ಪಕ್ಷದ ಅಧ್ಯಕ್ಷರ ಮೇಲೂ ನನಗೆ ಗೌರವ ಇದೆ ಎಂದು ಹೇಳುವ ಮೂಲಕ ಟಾಂಗ್​ ನೀಡಿದ್ರು.


ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿ ವಿಚಾರವಾಗಿ ಮೊದಲು ಹೇಳಿಕೆ ನೀಡಿದ್ದೇ ಡಿ.ಕೆ ಶಿವಕುಮಾರ್​ , ಕೆಪಿಸಿಸಿ ಅಧ್ಯಕ್ಷರೇ ಮುಂದಿನ ಸಿಎಂ ಬಗ್ಗೆ ಮಾತನಾಡಿದ ಬಳಿಕವೇ ನಾವೆಲ್ಲ ಸಿಎಂ ಬಗ್ಗೆ ಮಾತನಾಡಿದ್ದೇವೆ . ಅದಕ್ಕೂ ಮುನ್ನ ನಮ್ಮಲ್ಲಿ ಯಾರೂ ಮುಂದಿನ ಸಿಎಂ ಬಗ್ಗೆ ಮಾತೇ ಆಡಿರಲಿಲ್ಲ. ಎಲ್ಲಾ ಸಮುದಾಯದವರಿಗೂ ಅವಕಾಶ ಸಿಗಬೇಕು ಎಂಬುದಷ್ಟೇ ನಮ್ಮ ಆಶಯ ಎಂದು ಜಮೀರ್​ ಹೇಳಿದ್ರು.


ದಾವಣಗೆರೆಯಲ್ಲಿ ಆಗಸ್ಟ್​ ಮೂರರಂದು ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯಲಿದೆ. ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಕಾಂಗ್ರೆಸ್​ ನ ಕೆಲ ನಾಯಕರು ಸೇರಿ ಈ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ನಡೆಸುವ ಪ್ಲಾನ್​ನಲ್ಲಿದ್ದಾರೆ. ಈ ಮೂಲಕ ವಿಪಕ್ಷಗಳಿಗೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವನ್ನೂ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದೇ ಕಾರ್ಯಕ್ರಮದ ಪ್ರಯುಕ್ತ ದಾವಣೆಗೆರೆಯಲ್ಲಿರುವ ಶಾಸಕ ಜಮೀರ್​ ಅಹಮದ್​ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಇದನ್ನು ಓದಿ : Meghana Raj producer : ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ, ನಿರ್ಮಾಪಕಿಯಾದ್ರು ಮೇಘನಾ ರಾಜ್

ಇದನ್ನೂ ಓದಿ :YouTube Remove Videos:ಗರ್ಭಪಾತದ ಬಗ್ಗೆ ತಪ್ಪು ಮಾಹಿತಿಯನ್ನು ಹೊಂದಿರುವ ವೀಡಿಯೊಗಳನ್ನು ತೆಗೆದುಹಾಕುವುದಾಗಿ ಯೂಟ್ಯೂಬ್ ಹೇಳಿಕೆ

mla zameer ahmed says siddaramaiah should become cm is my personal opinion

Comments are closed.