Modi tight schedule: ಪ್ರಧಾನಿ ಮೋದಿ ದಿನಕ್ಕೆ ಎಷ್ಟು ಕಿಮೀ ಪ್ರಯಾಣ, ಎಷ್ಟು ಸಭೆಯಲ್ಲಿ ಪಾಲ್ಗೋಳ್ಳತ್ತಾರೆ ಗೊತ್ತಾ ?

ನವದೆಹಲಿ: (Modi tight schedule) ಚುನಾವಣೆ ಇನ್ನೇನು ಸಮೀಪದಲ್ಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಸರಕಾರ ಚುನಾವಣಾ ಪ್ರಚಾರ ಭರ್ಜರಿಯಾಗೇ ನಡೆಸುತ್ತಿದೆ. ಇದರ ಜೊತೆಗೆ ಪ್ರಧಾನಿ ಮೋದಿ ಅವರು ಕೂಡ ಭರ್ಜರಿಯಾಗೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ನಾಲ್ಕು ದಿನಗಳಲ್ಲಿ ದೇಶದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮುನ್ನಡೆಸಲು 10,800 ಕಿಮೀ ಪ್ರಯಾಣ ಮಾಡಲಿದ್ದು, 90 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಹತ್ತು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೇಶದ ಧೀಮಂತ ನಾಯಕ ಪ್ರಧಾನಿ ಮೋದಿ ಅವರು 90 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಹತ್ತು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ನಾಗರಿಕರ ಅನುಕೂಲಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಪ್ರಧಾನಿ ಮೋದಿ ಅವರು ನಾಲ್ಕು ದಿನಗಳಲ್ಲಿ ಭಾರತದಾದ್ಯಂತ 10,800 ಕಿಮೀ ಪ್ರಯಾಣಿಸಲಿದ್ದಾರೆ.

ಫೆಬ್ರವರಿ 10 ರಂದು, ಪ್ರಧಾನಿ ಮೋದಿ ದೆಹಲಿಯಿಂದ ಲಕ್ನೋಗೆ ಪ್ರಯಾಣಿಸಿದ್ದು, ಅಲ್ಲಿ ಉತ್ತರ ಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ಅನ್ನು ಉದ್ಘಾಟಿಸಿದರು. ನಂತರ ಮುಂಬೈನಲ್ಲಿ ಎರಡು ವಂದೇ ಭಾರತ್ ರೈಲುಗಳು ಮತ್ತು ಸಮರ್ಪಿತ ರಸ್ತೆ ಯೋಜನೆಗಳಿಗೆ ಚಾಲನೆ ನೀಡಿದರು. ನಂತರ ನಗರದಲ್ಲಿ ಅಲ್ಜಮಿಯಾ-ತುಸ್-ಸೈಫಿಯಾ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದ್ದು, ಬಳಿಕ ದೆಹಲಿಗೆ ಮರಳಿದರು. ಫೆಬ್ರವರಿ 11 ರಂದು, ತ್ರಿಪುರಾಗೆ ಪ್ರಯಾಣಿಸಿದ ಮೋದಿ ಅಂಬಾಸಾ ಮತ್ತು ರಾಧಾಕಿಶೋರ್‌ಪುರದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರಾಷ್ಟ್ರ ರಾಜಧಾನಿಗೆ ಹಿಂತಿರುಗಿದ್ದಾರೆ.

ಇಂದು (ಭಾನುವಾರ) ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜನ್ಮದಿನದ ಸ್ಮರಣಾರ್ಥ ಒಂದು ವರ್ಷದ ಆಚರಣೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಬಳಿಕ ರಾಜಸ್ಥಾನದ ದೌಸಾಗೆ ತೆರಳಿ ವಿವಿಧ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದೌಸಾದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ನಂತರ, ಅವರು ನೇರವಾಗಿ ಬೆಂಗಳೂರಿಗೆ ತೆರಳಲಿದ್ದಾರೆ. ಫೆಬ್ರವರಿ 13 (ನಾಳೆ) ರಂದು ಮುಂಜಾನೆ, ಪ್ರಧಾನಿ ಮೋದಿ ಏರೋ ಇಂಡಿಯಾ 2023 ಅನ್ನು ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದು, ಅಲ್ಲಿಂದ ನೇರವಾಗಿ ತ್ರಿಪುರಾಕ್ಕೆ ತೆರಳಲಿರುವ ಅವರು ಮಧ್ಯಾಹ್ನ ಅಗರ್ತಲಾದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ : ದ.ಕ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣಕ್ಕೆ ಗ್ರಹಣ, 4 ವರ್ಷದಲ್ಲಿ 3 ಸಂಚಾಲಕರ ಬದಲಾವಣೆ !

ಪ್ರಧಾನಿ ಮೋದಿ ಅವರು ನಾಲ್ಕು ದಿನದಲ್ಲಿ ಹಲವು ಕಾರ್ಯಕ್ರಮಗಳನ್ನು ನೆರವೇರಿಸುವುದರ ಸಲುವಾಗಿ ಒಟ್ಟಾರೆ ಭಾರತದಲ್ಲಿ 10,800 ಕಿಮೀ ಪ್ರಯಾಣ ಮಾಡಲಿದ್ದಾರೆ. ಹತ್ತಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Modi tight schedule: Do you know how many km per day Prime Minister Modi travels and how many meetings he attends?

Comments are closed.