MP Sumalatha join BJP: ನಾಳೆ ಬಿಜೆಪಿ ಗೆ ಸೇರಲಿದ್ದಾರೆ ಸಂಸದೆ ಸುಮಲತಾ: ರೆಬೆಲ್‌ ಹೆಂಡತಿಯ ಒಳಗುಟ್ಟು ಬಯಲು

ಮೈಸೂರು: (MP Sumalatha join BJP) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಸದರು ಯಾವ ಪಕ್ಷಕ್ಕೆ ಸೇರುತ್ತಾರೆ ಎನ್ನುವ ಕುತೂಹಲ ಮೂಡುವುದು ಸಹಜ. ಇದೀಗ ಸಂಸದೆ ಸುಮಲತಾ ಯಾವ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ವಿಚಾರ ಬಹಳಷ್ಟು ಕುತೂಹಲ ಮೂಡಿಸಿತ್ತು. ಇವರ ರಾಜಕೀಯ ನಡೆ ಸಂಚಲನ ಮೂಡಿಸಿದ್ದು, ಇದರ ಮಧ್ಯೆ ಸುಮಲತಾ ಅಂಬರೀಶ್‌ ನಾಳೆ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ಜೆಡಿಎಸ್‌ ಶಾಸಕ ತಿಳಿಸಿದ್ದಾರೆ.

ಸುಮಲತಾ ಅಂಬರೀಶ್‌ ನಾಳೆ ಸುದ್ದಿಗೋಷ್ಠಿ ಕರೆದಿದ್ದು, ಅಧಿಕೃತವಾಗಿ ಬಿಜೆಪಿ ಸೇರಪಡೆಯಾಗುವ ಬಗ್ಗೆ ಘೋಷಿಸುವ ಸಾಧ್ಯತೆಗಳಿವೆ. ಬಿಜೆಪಿ ಸೇರ್ಪಡೆಗೆ ಹೈಕಮಾಂಡ್​ನಿಂದ​ ಗ್ರೀನ್ ಸಿಗ್ನಲ್​ ಬಂದಿದ್ದರಿಂದ ಸುಮಲತಾ ಅಂಬರೀಶ್ ತಮ್ಮ ನಿರ್ಧಾರವನ್ನು ಘೋಷಿಸಲು​ ಸುದ್ದಿಗೋಷ್ಠಿ ಕರೆದಿದ್ದಾರೆ ಎಂದು ತಿಳಿದುಬಂದಿದೆ. ಕಾರಣ ಸುಮಲತಾ ಬಿಜೆಪಿ ಸೇರ್ಪಡೆ ಆಗಲು, ಮದ್ದೂರು,ಮಂಡ್ಯ, ಶ್ರೀರಂಗಪಟ್ಟಣದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಬೇಕೆಂಬ ಕೆಲ ಷರತ್ತುಗಳು ಹಾಕಿದ್ದಾರ ಎಂದು ತಿಳಿದುಬಂದಿದೆ. ಇನ್ನು 2024ಕ್ಕೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್​ ಕೇಳಿದ್ದಾರೆ ಎನ್ನಲಾಗಿದೆ.

ಮೊದಲು ಕಾಂಗ್ರೆಸ್​​ ಸೇರ್ಪಡೆಗೆ ಒಲವು ತೋರಿದ್ದ ಸುಮಲತಾ ಅಂಬರೀಶ್​ ಇದೀಗ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ. ಹೀಗಾಗಿ ಎಸ್​ಎಂ ಕೃಷ್ಣ ಸೇರಿದಂತೆ ತಮ್ಮ ಆಪ್ತರೊಂದಿಗೆ ಚರ್ಚೆ ಮಾಡಿದ್ದಾರೆ. ಅಲ್ಲದೇ ಈಗಾಗಲೇ ಬಿಜೆಪಿ ನಾಯಕರ ಜೊತೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ನೋಡಿಕೊಂಡು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿತ್ತು.

ಇಂದು(ಮಾರ್ಚ್ 09) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ನಾಳೆ ಬಿಜೆಪಿಗೆ ಸೇರಲಿದ್ದಾರೆ. ಮೋದಿ ಕಾರ್ಯಕ್ರಮದಲ್ಲೇ ಪಕ್ಷ ಸೇರ್ಪಡೆಗೆ ಯೋಜನೆ ಮಾಡಿದ್ದರು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಅವಕಾಶ ಸಿಗಲಿಲ್ಲ ಎಂದು ಹೇಳಿದರು. ಈ ಮೂಲಕ ಸುಮಲತಾ ಬಿಜೆಪಿ ಸೇರುವುದು ಕನ್ಫರ್ಮ್‌ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Karnataka bandh withdrawn: ನಾಳೆ ಕಾಂಗ್ರೆಸ್‌ ನಿಂದ ಕರ್ನಾಟಕ ಬಂದ್‌ ಕರೆ ಹಿಂದಕ್ಕೆ ಪಡೆದ ಡಿಕೆಶಿ

ಇದನ್ನೂ ಓದಿ : ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನರ ರಾಜರು: ವಿವಾದದ ಕಿಡಿ ಹೊತ್ತಿಸಿದ ಮಿಥುನ್‌ ರೈ

ಇದನ್ನೂ ಓದಿ : ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು ಅರ್ಜಿ ತುರ್ತು ವಿಚಾರಣೆ: ಪಕ್ಷಪಾತ ಎಂದು ಸಿಜೆಗೆ ದೂರು ಸಲ್ಲಿಸಿದ ವಕೀಲರು

MP Sumalatha join BJP: Will join BJP tomorrow MP Sumalatha: Rebel wife’s secret exposed

Comments are closed.