ಕಾಂಗ್ರೆಸ್ ಟಿಕೇಟ್ ಹಂಚಿಕೆಯಲ್ಲೇ ಅಪಸ್ವರ : ಬಂಡಾಯದ ಸೂಚನೆ ಕೊಟ್ಟ ಎಂ.ಬಿ.ಪಾಟೀಲ್

ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ,ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳಲ್ಲೂ ಟಿಕೇಟ್ ಗಾಗಿ ಕಿತ್ತಾಟ ತಾರಕಕ್ಕೇರಿದೆ. ಕಾಂಗ್ರೆಸ್ ನ ಟಿಕೇಟ್ ಹಂಚಿಕೆಗಾಗಿ ನಡೆದಿರೋ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಲಿಂಗಾಯತ್ ಸಮುದಾಯದ ಟಿಕೇಟ್ ಗಾಗಿ ಎಂ.ಬಿ.ಪಾಟೀಲ್ (M. B. Patil) ದುಂಬಾಲು ಬಿದ್ದಿದ್ದು , ಇದೇ ವಿಚಾರಕ್ಕೆ ಅಂದಾಜು 40-50 ಕ್ಷೇತ್ರಗಳ ಟಿಕೇಟ್ ಅಂತಿಮಗೊಂಡಿಲ್ಲ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಹೈಕಮಾಂಡ್ ನಾಯಕರು ಹಾಗೂ ರಾಜ್ಯದ ಹಿರಿಯ ನಾಯಕರ ಸಮ್ಮುಖದಲ್ಲಿ ಸ್ಕ್ರಿನಿಂಗ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ ಬಿ ಪಾಟೀಲ್ ಬೆಂಗಳೂರಿನಲ್ಲಿ (Congress in Bangalore) ಎರಡು ಕ್ಷೇತ್ರಗಳಿಗೆ ಲಿಂಗಾಯತ್‌ರಿಗೆ ಟಿಕೆಟ್‌ಗಾಗಿ ಒತ್ತಡ ಹೇರಿದ್ದಾರೆ.

ಬೆಂಗಳೂರಿನಲ್ಲಿ ಕನಿಷ್ಟ ಎರಡು ಟಿಕೆಟ್ ಕೊಡುವಂತೆ ಒತ್ತಾಯಿಸಿರುವ (M. B. Patil) ಎಂ‌.ಬಿ.ಪಾಟೀಲ್, ರಾಜಾಜಿನಗರದಲ್ಲಿ ಪುಟ್ಟರಾಜುಗೆ ಟಿಕೆಟ್ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲದೇ ಮೀಟಿಂಗ್ ನಲ್ಲಿ ಎಂ ಬಿ ಪಾಟೀಲ್ ಜೋರು ಧ್ವನಿಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಳಿ ಪುಟ್ಟರಾಜುಗಾಗಿ ಲಾಬಿ ನಡೆಸಿದ್ದಾರಂತೆ. ಪುಟ್ಟರಾಜು ಬದಲಿಗೆ ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಗೆ ಟಿಕೆಟ್ ಕೊಡುವುದಾಗಿ ಸಿದ್ದು ಹಾಗೂ ಡಿಕೆಶಿ ಹೇಳಿದ್ದು, ಎಂ.ಬಿ.ಪಾಟೀಲ್ ಅಸಮಧಾನಕ್ಕೆ‌ ಕಾರಣವಾಗಿದೆ. ಕಾಂಗ್ರೆಸ್ ನ ಈ ನಿರ್ಧಾರದಿಂದ ಲಿಂಗಾಯತರಿಗೆ ಬೆಂಗಳೂರಿನಲ್ಲಿ ಅನ್ಯಾಯವಾದಂತಾಗಲಿದೆ ಎಂದು ಎಂ.ಬಿ.ಪಾಟೀಲ್ ಏರು ಧ್ವನಿಯಲ್ಲಿ ಜಗಳವಾಡಿದ್ದು, ಇದೇ ರೀತಿ ಟಿಕೇಟ್ ಹಂಚಿಕೆ ಮಾಡೋದಾದರೇ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್‌ಗೆ ಗೈರಾಗುವುದಾಗಿ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರಂತೆ ಎಂದು ತಿಳಿಸಿದ್ದಾರೆ.

ರಾಜಾಜಿನಗರಕ್ಕೆ ಲಿಂಗಾಯತ ಟಿಕೆಟ್ ಕೊಡುವಂತೆ ಪಟ್ಟು ಹಿಡಿದಿದ್ದ ಪಾಟೀಲ್ ತಮ್ಮ ಮಾತಿಗೆ ಬೆಲೆ ಬರದೇ ಇರೋದಿಕ್ಕೆ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಎಂ ಬಿ ಪಾಟೀಲ್ ಸ್ಕ್ರೀನಿಂಗ್ ಕಮಿಟಿಯ ಇತರ ಅಭ್ಯರ್ಥಿಗಳ ಆಯ್ಕೆ ಸಭೆಗೆ ಗೈರಾಗಿದ್ದು ಪಕ್ಷಕ್ಕೆ ಬಂಡಾಯದ ಬಾವುಟ ಹಾರಿಸಿದ್ದಾರೆ‌. ಕೇವಲ ಎಂ.ಬಿ.ಪಾಟೀಲ್‌ ಮಾತ್ರವಲ್ಲದೇ ಸ್ಕ್ರಿನಿಂಗ್ ಕಮಿಟಿ ಸಭೆಯಲ್ಲಿ ಇನ್ನೂ ಹಲವು ನಾಯಕರು ಮುನಿಸಿ ಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, 170 ಸೀಟ್ ಬಗ್ಗೆ ಚರ್ಚೆ ಮಾಡಿದ್ದೇವೆ. ಚರ್ಚೆ ಮಾಡಿ ಎಐಸಿಸಿ ಎಲೆಕ್ಷನ್ ಕಮಿಟಿಗೆ ಕಳುಹಿಸುತ್ತೇವೆ. ಅಲ್ಲಿ ಫೈನಲ್ ಮಾಡಿ ಲಿಸ್ಟ್ ಅನೌನ್ಸ್ ಮಾಡ್ತಾರೆ. ಆದರೆ ಕೆಲವು ಕಡೆ ಭಿನ್ನಾಬಿಪ್ರಾಯವಿದೆ.

ಇದನ್ನೂ ಓದಿ : Karnataka bandh withdrawn: ನಾಳೆ ಕಾಂಗ್ರೆಸ್‌ ನಿಂದ ಕರ್ನಾಟಕ ಬಂದ್‌ ಕರೆ ಹಿಂದಕ್ಕೆ ಪಡೆದ ಡಿಕೆಶಿ

ಇದನ್ನೂ ಓದಿ : ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನರ ರಾಜರು: ವಿವಾದದ ಕಿಡಿ ಹೊತ್ತಿಸಿದ ಮಿಥುನ್‌ ರೈ

ಇದನ್ನೂ ಓದಿ : ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು ಅರ್ಜಿ ತುರ್ತು ವಿಚಾರಣೆ: ಪಕ್ಷಪಾತ ಎಂದು ಸಿಜೆಗೆ ದೂರು ಸಲ್ಲಿಸಿದ ವಕೀಲರು

ನಾಳೆಯಿಂದ ಸಂಧಾನ ಕೆಲಸ ಮಾಡ್ತೇವೆ. 40 ರಿಂದ 50 ಕಡೆ ಸಂಧಾನ ಕೆಲಸ ಮಾಡುತ್ತೇವೆ. ಎಲ್ಲ ಕಡೆ ಸಂಧಾನ ಮಾಡಬೇಕು ಅಂತ ಇದೆ. ಎಲ್ಲೆಲ್ಲಿ ಸಂಧಾನ ಮಾಡಲು ಸಾಧ್ಯವಿದೆಯೋ ಅಲ್ಲೆಲ್ಲಾ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ ಲಿಂಗಾಯತ್ ಟಿಕೇಟ್ ಗೆ ಎಂಬಿಪಾಟೀಲ್ ಪಟ್ಟು ಹಿಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಮಗೆ ವ್ಯಕ್ತಿಗಳು ಮುಖ್ಯ ಅಲ್ಲ, ಅಭ್ಯರ್ಥಿಗಳು ಮುಖ್ಯ. ಆ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಸಾಮಾಜಿಕ ನ್ಯಾಯ ನೀಡಿ ಅಭ್ಯರ್ಥಿಗಳ ಅಯ್ಕೆ ಮಾಡುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಸ್ಕ್ರಿನಿಂಗ್ ಕಮಿಟಿ ಸಭೆ ಹಂತದಲ್ಲೇ ಕಾಂಗ್ರೆಸ್ ಬಂಡಾಯ ಭುಗಿಲೆದ್ದಿದೆ.

Congress in Bangalore : Disgruntled with the distribution of Congress tickets: M. B. Patil gave notice of rebellion.

Comments are closed.