Mysore golden gift : ಪ್ರಧಾನಿ ನರೇಂದ್ರ ಮೋದಿ ಕೈಗೆ ಮೈಸೂರು ಚಿನ್ನ: ಸಿದ್ಧವಾಗಿದೆ ಸ್ವರ್ಣಲೇಪಿತ ಸ್ಪೆಶಲ್ ಗಿಫ್ಟ್

ಕೊರೋನಾದಿಂದ ಸ್ತಬ್ಧಗೊಂಡಿದ್ದ ಜಗತ್ತು ಮತ್ತೇ ಚಲನಾಶೀಲವಾಗುತ್ತಿದೆ. ಹೀಗಾಗಿ ಎಲ್ಲೆಡೆ ಸಾಮಾಜಿಕ, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕೊರೋನಾ ಅಲೆಯ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಬಹು ವರ್ಷಗಳ ಬಳಿಕ ರಾಜ್ಯ ಭೇಟಿಗೆ ಆಗಮಿಸುತ್ತಿದ್ದಾರೆ.‌ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸೋ ಮೋದಿಯವರನ್ನು ವಿಶಿಷ್ಟವಾಗಿ ಸ್ವಾಗತಿಸಲು (Mysore golden gift) ಚಿನ್ನದ ವ್ಯಾಪಾರಿಗಳು ಸ್ವರ್ಣದ ಉಡುಗೊರೆಯೊಂದಿಗೆ ಸಜ್ಜಾಗಿದ್ದಾರೆ.

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಖ್ಯಾತಿಗಳಿಸಿರೋ ಮೈಸೂರು ದೇಶದ ದೊರೆಯ ಆಗಮನಕ್ಕೆ ಸಜ್ಜಾಗಿದೆ. ಬಿಗಿಭದ್ರತೆಯೊಂದಿಗೆ‌ ಮೋದಿಯನ್ನು ಸ್ವಾಗತಿಸಲು ಅಲಂಕಾರ ಗೊಂಡ ಮೈಸೂರು ಮದುಮಗಳಂತೆ ತೋರುತ್ತಿದೆ. ಈ ಮಧ್ಯೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿಯವರನ್ನು ವಿಶೇಷ ಉಡುಗೊರೆಯೊಂದು ಕಾದಿದೆ. ಮೈಸೂರಿನ ಆಭರಣದ ವ್ಯಾಪಾರಿಗಳಿಂದ ವಿಶೇಷ ಉಡುಗೊರೆ ಸಿದ್ಧಗೊಂಡಿದ್ದು, ಸಂಸದ ಪ್ರತಾಪ್ ಸಿಂಹ ಮೂಲಕ ಮೋದಿಗೆ ವಿಶೇಷ ಗಿಫ್ಟ್ ನೀಡಲು ಚಿನ್ನದ ವ್ಯಾಪಾರಿಗಳು ಸಜ್ಜಾಗಿದ್ದಾರೆ.

ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೋದಿಗೆ ನೆನಪಿನ ಕಾಣಿಕೆಯಾಗಿ ಮೈಸೂರಿನ ನವರತ್ನ ಜ್ಯುವೆಲರ್ಸ್ ವತಿಯಿಂದ ವಿಶಿಷ್ಟ ಪ್ರೇಮ್ ವೊಂದನ್ನು ಸಿದ್ಧಪಡಿಸಲಾಗಿದೆ. ಈ ಪ್ರೇಮ್ ನಲ್ಲಿ ಬಂಗಾರದಿಂದ ಅಕ್ಷರಗಳನ್ನು ಕೆತ್ತಲಾಗಿದ್ದು,ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರಗಳನ್ನೊಳಗೊಂಡ ಕೆತ್ತನೆಯನ್ನು ಈ ಪ್ರೇಮ್ ಒಳಗೊಂಡಿದೆ. ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕಗಳ ಅಳವಡಿಸಲಾಗಿದ್ದು, ಮೈಸೂರಿಗರ ಪರವಾಗಿ ಮೈಸೂರನ್ನ ಯೋಗ ದಿನಾಚರಣೆಗೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗಿದೆ.

ಥೈಲ್ಯಾಂಡ್ ನಲ್ಲಿ ಮಾಡಿಸಲಾಗಿರುವ ವಿಶೇಷ ನೆನಪಿನ ಕಾಣಿಕೆಯನ್ನು ಮೈಸೂರಿನ ಸಮಸ್ತ ಚಿನ್ನದ ವ್ಯಾಪಾರಿಗಳ ಪರವಾಗಿ ಸಂಸದ ಪ್ರತಾಪ್ ಸಿಂಹ ಮೋದಿಗೆ ಸಲ್ಲಿಸಲಿದ್ದಾರಂತೆ.
ಒಂದೊಮ್ಮೆ ಅವಕಾಶ ಸಿಕ್ಕರೇ ಚಿನ್ನದ ವ್ಯಾಪಾರಿಗಳೇ ಈ ನೆನಪಿನ ಕಾಣಿಕೆಯನ್ನು ಮೋದಿಗೆ ನೀಡಿ ಧನ್ಯರಾಗಲಿದ್ದಾರೆ. ಇದರೊಂದಿಗೆ ಮೈಸೂರಿನ ಸಾಂಸ್ಕೃತಿಕ ವಿಶೇಷವಾಗಿ ಮೈಸೂರು ಪೇಟ್ ವನ್ನು ಕೂಡಾ ಮೋದಿಗೆ ಪ್ರತಾಪ್ ಸಿಂಹ ನೀಡಲಿದ್ದಾರಂತೆ. ಇನ್ನೂ ಮೋದಿ ಮೈಸೂರಿಗೆ ಆಗಮಿಸಿದ ವೇಳೆ ಅಧಿದೇವತೆ ಚಾಮುಂಡೇಶ್ವರಿ ದರ್ಶನವನ್ನು ಪಡೆಯಲಿದ್ದು, ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರಂತೆ.‌ಜೊತೆಗೆ ಮೈಸೂರಿನ ರಾಜಮನೆತನದವರೊಂದಿಗು ಮೋದಿ ಮಾತುಕತೆ ನಡೆಸಲಿದ್ದಾರಂತೆ.

ಇದನ್ನೂ ಓದಿ : ಬೆಂಗಳೂರಿಗೆ ಇಂದು ಬರ್ತಾರೆ ಪ್ರಧಾನಿ ನರೇಂದ್ರ ಮೋದಿ : ರೋಡ್ ಗಿಳಿಯೋ ಮುನ್ನ ಈ ಸುದ್ದಿ ಓದಿ

ಇದನ್ನೂ ಓದಿ : PM Modi Surprise Gift : ಮೋದಿ ಭೇಟಿ ಮೇಲೆ ನೀರಿಕ್ಷೆಯ ಲಿಸ್ಟ್ : ರಾಜ್ಯಕ್ಕೆ ಘೋಷಣೆಯಾಗುತ್ತಾ ಏಮ್ಸ್ ?

Mysore golden gift to Prime Minister Narendra Modi

Comments are closed.