EXCLUSIVE : ಕೋಟಿ ಕೋಟಿ ತೆರಿಗೆ ಕಟ್ಟದೇ ಮಾಲ್ ಗಳ ಕಳ್ಳಾಟ: ಇಲ್ಲಿದೆ ಪ್ರತಿಷ್ಠಿತ ಮಾಲ್ ಗಳ ಲಿಸ್ಟ್‌

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಆಕರ್ಷಣೆ ಎಂದರೇ ಟೂತ್ ಪೇಸ್ಟ್ ನಿಂದ ಆರಂಭಿಸಿ ಐಷಾರಾಮಿ ವಸ್ತುವಿನ ತನಕ ಎಲ್ಲವನ್ನೂ ಒಂದೇ ಸೂರಿನಡಿ ಒದಗಿಸುವ ಮಾಲ್ ಗಳು. ಆರಂಭದಲ್ಲಿ ಒಂದೆರಡು ಸಂಖ್ಯೆಯಲ್ಲಿದ್ದ ಮಾಲ್ ಗಳು ಈಗ ನೂರಾರು ಸಂಖ್ಯೆಯಲ್ಲಿ ತಲೆ ಎತ್ತಿದ್ದು ವೀಕೆಂಡ್ ನಲ್ಲಿ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುತ್ತವೆ. ಆದರೆ ಹೀಗೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸೋ ಮಾಲ್ ಗಳು ಬಿಬಿಎಂಪಿ ಗೆ ಮಾತ್ರ ಕೋಟ್ಯಾಂತರ ರೂಪಾಯಿ ತೆರಿಗೆ (BBMP TAX Pending) ಉಳಿಸಿಕೊಂಡಿವೆ.

ಬಿಬಿಎಂಪಿ ತೆರಿಗೆ ಬಾಕಿ ಉಳಿಸಿಕೊಂಡು ಕಳ್ಳಾಟ ಆಡ್ತಾ ಇರೋದು ಇದೇ ಮೊದಲೇನಲ್ಲ. ಈಗಾಗಲೇ ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ನಗರದ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಈಗಾಗಲೇ ನಾಲ್ಕು ಭಾರಿ ಬೀಗ ಹಾಕಲಾಗಿದೆ. ಆದರೆ ಇದರಿಂದ ಯಾವ ಮಾಲ್ ಗಳು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಇನ್ನೂ ನಗರದ ನೂರಾರು ಮಾಲ್‌ಗಳು ಬಿಬಿಎಂಪಿಗೆ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸಬೇಕಿದೆ.

ನಗರದ ಪ್ರಮುಖ 44 ಮಾಲ್ ಗಳ ಪೈಕಿ ಎಷ್ಟು ಮಾಲ್ ಗಳು ಬಿಬಿಎಂಪಿ ಗೆ ತೆರಿಗೆ ಪಾವತಿಸದೇ ವಂಚಿಸುತ್ತಿವೆ ಎಂಬ ಎಕ್ಸಕ್ಲೂಸಿವ್ ಲಿಸ್ಟ್ ನ್ಯೂಸ್ ನೆಕ್ಟ್ ಗೆ ಲಭ್ಯವಾಗಿದೆ. ಬೆಂಗಳೂರಿನ 7 ಪ್ರತಿಷ್ಠಿತ ಮಾಲ್‌ಗಳಿಂದ ಇನ್ನು ತೆರಿಗೆ ಬಾಕಿ ಉಳಿಸಿಕೊಂಡಿವೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಬೆಂಗಳೂರಿನ ಪ್ರತಿಷ್ಟಿತ ಮಾಲ್ ಗಳಿಂದ 46 ಕೋಟಿ, 70 ಲಕ್ಷ ತೆರಿಗೆ ಬಾಕಿ ಇದೆ.

ಯಾವ ಯಾವ ಮಾಲ್ ಗಳಿಂದ ಎಷ್ಟೆಷ್ಟು ತೆರಿಗೆ ಬಾಕಿ ಇದೆ ಅನ್ನೋದನ್ನು ನೋಡೋದಾದರೇ,

  1. ಜಿಟಿ ಮಾಲ್ – 3,15,74,989, ಕೋಟಿ ( 2019-20 ರಿಂದ ಬಾಕಿ )
    2.ಮಂತ್ರಿ ಮಾಲ್ – 27,11,13,104 ಕೋಟಿ (2018 – 19 ರಿಂದ ಬಾಕಿ )
    3.ರಾಕ್ ಲೈನ್ ಮಾಲ್ – 6,64,90,228 ಕೋಟಿ ( 2015-16 ರಿಂದ ಬಾಕಿ )
    4.ರಾಯಲ್ ಮೀನಾಕ್ಷಿ ಮಾಲ್ – 4,96,61,028 ಕೋಟಿ ( 2022-23 ರಿಂದ ಬಾಕಿ)
    5.ಮಹದೇವಪುರ ವರ್ಜಿನಿಯಾ ಮಾಲ್ – 60,92,868 ಲಕ್ಷ ( 2020- 21 ರಿಂದ ಬಾಕಿ )
    6.ಟೋಟಲ್ ಮಾಲ್ – 3,66,43,448 ಕೋಟಿ ( 2018 – 19 ರಿಂದ ಬಾಕಿ )
    7.ವಿಆರ್ ಮಾಲ್ – 3, 66, 43, 448 ಕೋಟಿ ಬಾಕಿ
BBMP TAX Pending Bangalore prestigious malls Exclusive List

ಒಟ್ಟು – 46,70,42,032 ಕೋಟಿ ಬಾಕಿ ಉಳಿಸಿಕೊಂಡಿರುವ ಮಾಲ್ ಗಳು ಇನ್ನೂ ತೆರಿಗೆ ಪಾವತಿಗೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸದ್ಯದಲ್ಲೇ ಬಿಬಿಎಂಪಿ ಕಾನೂನು ಕ್ರಮದ ಮೂಲಕ ತೆರಿಗೆ ವಸೂಲಿಗೆ ಸಿದ್ಧತೆ ನಡೆಸಿದೆ.

ಇದನ್ನೂ ಓದಿ : Pilot-free Metro Train : ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ: ಇನ್ಮುಂದೇ ಸಂಚರಿಸಲಿದೆ ಪೈಲಟ್ ರಹಿತ ಮೆಟ್ರೋ ರೈಲು

ಇದನ್ನೂ ಓದಿ : ಬೆಂಗಳೂರಿಗೆ ಇಂದು ಬರ್ತಾರೆ ಪ್ರಧಾನಿ ನರೇಂದ್ರ ಮೋದಿ : ರೋಡ್ ಗಿಳಿಯೋ ಮುನ್ನ ಈ ಸುದ್ದಿ ಓದಿ

BBMP TAX Pending Bangalore prestigious malls Exclusive List

Comments are closed.