Nalin Kumar Kateel : ಭ್ರಮೆ ಮತ್ತು ಹುಚ್ಚಿನಿಂದ ಹೊರ ಬನ್ನಿ: ಸ್ವಪಕ್ಷೀಯರಿಗೆ ಕುಟುಕಿದ ನಳಿನ್ ಕುಮಾರ್ ಕಟೀಲ್

ಬೆಂಗಳೂರು : ಸೋಮವಾರ ಸಂಜೆ ವೇಳೆಗೆ ಬಿಜೆಪಿಯಲ್ಲಿ ಮತ್ತೊಂದು ನಾಯಕತ್ವ ಬದಲಾವಣೆ ಪ್ರಹಸನ ಆರಂಭವಾಗಿದೇ ಎಂಬಷ್ಟರ ಮಟ್ಟಿಗೆ ಚುರುಕುಗೊಂಡಿದ್ದ ರಾಜಕೀಯ ಪ್ರಹಸನಗಳು ಮಂಗಳವಾರ ಮಧ್ಯಾಹ್ನದ ವೇಳೆ ತಿಳಿಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲು (Nalin Kumar Kateel) ಸೇರಿದಂತೆ ಎಲ್ಲ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸಲು ಆರಂಭಿಸಿದ್ದಾರೆ.

ಮಂಗಳವಾರ ಸಿಎಂ ಕರೆದ ಔತಣಕೂಟ, ಅಮಿತ್ ಶಾ ರಾಜ್ಯ ಭೇಟಿ, ದೆಹಲಿಯಲ್ಲಿ ನಡೆದ ಸಾಲು ಸಾಲು ಸಭೆಗಳು, ಬಿ.ಎಲ್.ಸಂತೋಷ್ ನೀಡಿದ ಯುವ ನಾಯಕತ್ವದ ಹೇಳಿಕೆ ಎಲ್ಲವೂ ಮಂಗಳವಾರ ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಕಾರಣವಾಗಲಿದೆ. ಬಿಜೆಪಿಯಿಂದ ಮೂರನೇ ಸಿಎಂ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳಿಗೆ ಮುನ್ನುಡಿ ಬರೆದಿತ್ತು.

ತಡರಾತ್ರಿ ಸಿಎಂ ಬೊಮ್ಮಾಯಿ ಬಿಎಸ್ವೈ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದು, ಈ ಊಹಾಪೋಹಗಳಿಗೆ ಪುಷ್ಟಿ ಕೊಟ್ಟಿತ್ತು. ಆದರೆ ಇದೆಲ್ಲವೂ ಕೇವಲ ಊಹಾಪೋಹ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಅಮಿತ್ ಶಾ ಭೇಟಿ ಬಳಿಕ ಮಾತನಾಡಿದ ನಳಿಕ್ ಕುಮಾರ್ ಕಟೀಲ್, ಭ್ರಮೆ, ಆಸೆ ಮತ್ತೆ ಹುಚ್ಚಿನಲ್ಲಿ ಇದ್ರೆ ಅದನ್ನು ಬಿಟ್ಟು ಬಿಡಿ ಎಂದು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಕಟೀಲ್ ಸ್ಪಷ್ಟ ಸಂದೇಶ ನೀಡಿದರು.

ಯಾರು ಈ ರೀತಿಯ ಗೊಂದಲ ಸೃಷ್ಟಿ ಮಾಡ್ತಿದ್ದಾರೋ ಅವರಿಗೆ ಇದು ಸ್ಪಷ್ಟ ಸಂದೇಶವಾಗಿದೆ. ಪಾರ್ಟಿಯಲ್ಲಿ ಆಗಲಿ, ಸರ್ಕಾರದಲ್ಲಿ ಆಗಲಿ ನಾಯಕತ್ವದ ಗೊಂದಲಗಳು ಇಲ್ಲಯಡಿಯೂರಪ್ಪ ಮಾರ್ಗದರ್ಶನದಲ್ಲಿ ಟೀಮ್ ಒಂದಾಗಿ ಚುನಾವಣೆ ಎದುರಿಸುತ್ತೇವೆ.ಯಡಿಯೂರಪ್ಪ ನವರು ಪ್ರಮುಖರು.ಆದರೆ ಯಾರು ಭ್ರಮೆಯಲ್ಲಿ ತೇಲಾಡ್ತಿದ್ರೆ, ಆಸೆ ಮತ್ತು ಹುಚ್ಚಿನಲ್ಲಿ ಇದ್ರೆ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು ಎಂದ ಕಟೀಲ್ ಎಚ್ಚರಿಸಿದರು.

ಕೇವಲ ನಳಿನ್ ಕುಮಾರ್ ಕಟೀಲ್ ಮಾತ್ರವಲ್ಲ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಕೂಡ ಮಾತನಾಡಿದ್ದು, ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ಒಳ್ಳೆಯ ರೀತಿಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಮಧ್ಯೆ ಮೇ ಅಂತ್ಯದೊಳಗೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ. ಪ್ರಧಾನಿಯವರು ವಿದೇಶ ಪ್ರವಾಸದಿಂದ ಹಿಂತಿರುಗಿದ ಬಳಿಕ ಈ ಬದಲಾವಣೆಗಳೆಲ್ಲ ಮೂರ್ತ ರೂಪ ಪಡೆಯಲಿದೆ ಎಂದು ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ : ರಾಜ್ಯಕ್ಕೆ ಅಮಿತ್​ ಶಾ ಆಗಮನ : ಗೃಹ ಸಚಿವರ ಭೇಟಿಗೂ ಮುನ್ನ ಬಿಎಸ್​ವೈ ಜೊತೆ ಸಿಎಂ ಮಾತುಕತೆ

ಇದನ್ನೂ ಓದಿ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ : ಅರುಣ್​ ಸಿಂಗ್

BJP State President Nalin Kumar Kateel Reaction About CM Change Karnataka

Comments are closed.