Summer Hairstyle: ಬೇಸಿಗೆಗೆ ಯಾವ ರೀತಿಯ ಹೇರ್‌ ಸ್ಟೈಲ್‌ ಇದ್ದರೆ ಬೆಸ್ಟ್‌ ಅಂತೀರಾ?

ಬೇಸಿಗೆಯ()Summer) ನಲ್ಲಿ ಕೂದಲಿನ ನಿರ್ವಹಣೆ ಮಾಡಿ ಸಾಕಾಗಿದೆಯೇ? ಬೆವರು ಮತ್ತು ಬಿಸಿ ವಾತಾವರಣದಲ್ಲಿ ಓಪನ್‌ ಹೇರ್‌ ಎಲ್ಲರಿಗೂ ಕಿರಿಕಿರಿಯನ್ನು ಅನುಭವಿಸುವಂತಾಗುತ್ತದೆ (Summer Hair Style). ಬೇಸಿಗೆಯ ಬಿಸಿಲಿಗೆ ಕುತ್ತಿಗೆ ಮತ್ತು ಮುಖದ ತುಂಬಾ ಹರಡುವ ಓಪನ್‌ ಹೇರ್‌ ಅಹಿತಕರ ಅನುಭವ ನೀಡುತ್ತದೆ.
ಒಂದು ವೇಳೆ ನಿಮಗೆ ಬೇಸಿಗೆಯಲ್ಲಿ ಕೂದಲಿನ ನಿರ್ವಹಣೆ ಹೇಗೆ ಎಂದು ಅನಿಸುತ್ತಿದ್ದರೆ ನಾವು ಇಲ್ಲಿ ಕೆಲವು ಹೇರ್‌ ಸ್ಟೈಲ್‌ಗಳನ್ನು ಬಗ್ಗೆ ಹೇಳುತ್ತಿದ್ದೇವೆ. ಒಮ್ಮೆ ನೋಡಿ

ಸ್ಟೈಲ್‌ ಆಗಿ ಜಡೆ ಹಾಕಿಕೊಳ್ಳಿ
ಓಪನ್‌ ಹೇರ್‌ ಮಾಡಿಕೊಳ್ಳುವುದಕ್ಕಿಂತ , ಸ್ಟೈಲಿಶ್‌ ಆಗಿ ಜಡೆ ಹೆಣೆದುಕೊಳ್ಳಿ. ಎಲ್ಲಾ ಕೂದಲನ್ನು ಒಟ್ಟುಗೂಡಿಸಿ ಮೇಲೆ ಪೊನಿ ಹಾಕಿಕೊಳ್ಳಿ. ಇದರಿಂದ ನಿಮ್ಮ ಕೂದಲನ್ನು ದಿನ ಪೂರ್ತಿ ನಿರ್ವಹಣೆಮಾಡುವುದು ಅತಿ ಸುಲಭ.

ಟಾಪ್‌ ನಾಟ್‌ ಬನ್‌
ನಿಮ್ಮ ಕುತ್ತಿಗೆ ಮತ್ತು ಮುಖಕ್ಕೆ ತೊಂದರೆ ಕೊಡುವ ಕೂದಲುಗಳನ್ನು ಒಟ್ಟುಗೂಡಿಸಿ ಮೇಲಕ್ಕೆ ಎತ್ತಿ ನಾಟ್‌ ಹಾಕಿಕೊಳ್ಳಿ. ಕೆಲವು ಕೂದಲಿನ ಎಳೆಗಳನ್ನು ಹಾಗ ಫ್ರಿಯಾಗಿ ಬಿಡಿ.

ಇದನ್ನೂ ಓದಿ : Summer Skincare : ಬೆವರಿನ ದುರ್ಗಂಧದಿಂದ ಅವಮಾನ ಎದುರಿಸುತ್ತಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

ಮೆಸ್ಸೀ ಲೊ ಬನ್‌
ಎಲ್ಲಾ ಕೂದಲುಗಳನ್ನು ಒಟ್ಟುಗೂಡಿಸಿ ಸರಿಯಾಗಿ ಕುತ್ತಿಗೆಯ ಮೇಲೆ ಬರುವಂತೆ ಮೆಸ್ಸಿಯಾಗಿ ಬನ್‌ ಹಾಕಿಕೊಳ್ಳಿ. ಇದು ಬೇಸಿಗೆಗೆ ಕೂಲ್‌ ಆದ ಹೇರ್‌ ಸ್ಟೈಲ್‌. ಬನ್‌ ಹಾಕುವುದನ್ನು ಕಲಿತರೆ ಸಾಕು ಅದರಲ್ಲೇ ನಿಮಗೆ ಬೇಕಾದ ರೀತಿಯ ಬನ್ನ ಹಾಕಿಕೊಳ್ಳಬಹುದು.

ಶಾರ್ಟ್‌ ಹೇರ್‌
ಬೇಸಿಗೆಯ ಕೂದಲಿನ ನಿರ್ವಹಣೆ ಮಾಡಲು ಬೆಸ್ಟ್‌ ಉಪಾಯವೆಂದರೆ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಇದರಿಂದ ಬೇಸಿಗೆಯ ಬೆವರಿನಿಂದ ಕೂದಲನ್ನು ಮೆಂಟೈನ್‌ ಮಾಡುವುದು ಸುಲಭ.

ಪೊನಿಟೇಲ್‌
ಕೂದಲು ನಿರ್ವಹಣೆಗೆ ಸರಳ ಮಾರ್ಗವೆಂದರೆ ಎತ್ತರಕ್ಕೆ ಹಾಕಿದ ಪೊನಿಟೈಲ್‌. ಈ ಹೇರ್‌ ಸ್ಟೈಲ್‌ ಎಂದಿಗೂ ಓಟ್‌ಡೇಟ್‌ ಆಗುವುದೇ ಇಲ್ಲ. ಇದು ಎಲ್ಲಾ ಕಾಲಕ್ಕೂ ಉಚಿತವೆನಿಸುತ್ತದೆ.

ಇದನ್ನೂ ಓದಿ : Amazon Summer Sale 2022 : ಮೊಬೈಲ್‌ ಖರೀದಿಸುವವರಿಗೆ ಸುವರ್ಣಾವಕಾಶ! ಮೇ 4 ರಿಂದ ಶುರವಾಗಲಿದೆ ಅಮೆಜಾನ್‌ ಸಮ್ಮರ್‌ ಸೇಲ್‌!

(Summer hairstyle and comfortable to beat the heat)

Comments are closed.