ಬೆಂಗಳೂರು : ಕಳೆದ ಮೂರು ವರ್ಷಗಳಿಂದ ಉಕ್ರೇನ್ ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿ ಕರ್ನಾಟಕ ಮೂಲದ ನವೀನ್ ಗೌಡರ್ (Naveen Death Ukraine) ಸಾವಿಗೆ ರಾಜ್ಯ ಹಾಗೂ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಮಧ್ಯೆ ಮಗನ ಸಾವಿನಿಂದ ಕಂಗೆಟ್ಟಿರುವ ನವೀನ್ ಪೋಷಕರ ಜೊತೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತುಕತೆ ನಡೆಸಿದ್ದು ಸಾಂತ್ವನ ಹೇಳಿದ್ದಾರೆ. ಮಾತ್ರವಲ್ಲ ಆದಷ್ಟು ಬೇಗ ನವೀನ್ ಮೃತದೇಹ ತರಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಯಾಗಿದ್ದ 21 ವರ್ಷದ ನವೀನ್ ಕರ್ನಾಟಕದ ಹಾವೇರಿ ಚಳಗೇರಿ ಮೂಲದವನಾಗಿದ್ದ. ಕಳೆದ ಮೂರು ವರ್ಷಗಳಿಂದ ಉಕ್ರೇನ್ ಅಧ್ಯಯನ ಮಾಡುತ್ತಿದ್ದ. ಪ್ರತಿನಿತ್ಯ ಮೂರು ಭಾರಿ ಮನೆಯವರೊಂದಿಗೆ ಪೋನ್ ಮಾತನಾಡುತ್ತಿದ್ದ ನವೀನ್ ಕಳೆದ ಕೆಲದಿನಗಳಿಂದ ಉಕ್ರೇನ್ ಪರಿಸ್ಥಿತಿಗೆ ಆತಂಕ ವ್ಯಕ್ತಪಡಿಸಿದ್ದನಂತೆ. ಇಂದು ಬೆಳಗ್ಗೆ ಕೂಡಾ ನವೀನ್ ತಂದೆ ಶೇಖರ್ ಗೌಡ್ ಅವರೊಂದಿಗೆ 9 ಗಂಟೆ ವೇಳೆಗೆ ಮಾತುಕತೆ ನಡೆಸಿದ್ದನಂತೆ. ಅಲ್ಲದೇ ಅಗತ್ಯ ವಸ್ತುಗಳನ್ನು ತರಲು ಹೊರಕ್ಕೆ ಹೋಗುವುದಾಗಿಯೂ ತಿಳಿಸಿದ್ದನಂತೆ. ಹೀಗೆ ಹೊರಗೆ ಹೋದಾಗಲೇ ರಷ್ಯಾ ಸೇನಾಪಡೆ ನಡೆಸಿದ ಶೆಲ್ ದಾಳಿಗೆ ನವೀನ್ ಸಾವನ್ನಪ್ಪಿದ್ದು ಈ ವಿಚಾರವನ್ನು ನವೀನ್ (Naveen) ಸ್ನೇಹಿತರು ಮೊದಲು ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಬಳಿಕ ವಿದೇಶಾಂಗ ಇಲಾಖೆ ಈ ಸಾವನ್ನು ಖಚಿತಪಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ನವೀನ್ (Naveen Death Ukraine) ಕುಟುಂಬಸ್ಥರು ಹಾಗೂ ಹುಟ್ಟೂರಲ್ಲಿ ದುಃಖ ಮಡುಗಟ್ಟಿದೆ. ಸ್ಥಳೀಯ ಅಧಿಕಾರಿಗಳು ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ನವೀನ್ ಸಾವಿಗೆ ಉಕ್ರೇನ್ ನಲ್ಲೇ ಇರೋ ಆತನ ಸ್ನೇಹಿತ ಯಶ್ವಂತ್ ರೆಡ್ಡಿ ಕೂಡಾ ದುಃಖ ವ್ಯಕ್ತಪಡಿಸಿದ್ದು, ತುಂಬ ಒಳ್ಳೆಯ ಹುಡುಗ ನವೀನ್. ನಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿ ಜೀವ ಉಳಿಸಿದ್ದ ಎಂದು ಕಣ್ಣೀರು ಹಾಕಿದ್ದಾನೆ.
“ಉಕ್ರೇನ್ ನಲ್ಲಿ ಶೆಲ್ ಗಳ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ, ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ.
— CM of Karnataka (@CMofKarnataka) March 1, 2022
ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು.
1/2
ನವೀನ್ (Naveen Death Ukraine)ಸಾವಿನ ಸಂಗತಿ ಬಯಲಾಗುತ್ತಿದ್ದಂತೆ ಉಕ್ರೇನ್ ನಲ್ಲಿರುವ ಕರ್ನಾಟಕದ ಮಕ್ಕಳ ಆತಂಕ ಹೆಚ್ಚಿದೆ. ಈ ಮಧ್ಯೆ ನಾಳೆ ಹಾಗೂ ನಾಡಿದ್ದು ಭಾರತದಿಂದ ತಲಾ 7 ರಂತೆ ವಿಮಾನಗಳು ಉಕ್ರೇನ್ ಗೆ ಹಾರಲಿದ್ದು ಅಲ್ಲಿರುವ ಅಂದಾಜು 8 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಿದೆ. ನವೀನ್ ಘಟನೆ ಬಳಿಕ ಆತಂಕಗೊಂಡಿರುವ ಸ್ಥಳೀಯ ವಿದ್ಯಾರ್ಥಿಗಳಿಗೆ ಉಕ್ರೇನ್ ನಲ್ಲಿರುವ ವಿದೇಶಾಂಗ ಕಛೇರಿ ಸಾಂತ್ವನ ಹಾಗೂ ಧೈರ್ಯ ಹೇಳಿದ್ದು ಯಾವುದೇ ಕಾರಣಕ್ಕೂ ಪ್ಯಾನಿಕ್ ಗೊಳ್ಳದಿರಿ ಎಂದು ಸಾಂತ್ವನಿಸಿದೆ.
ಇದನ್ನೂ ಓದಿ : ‘ಕಚ್ಚಾ ಬದಾಮ್’ ಗಾಯಕ ಭುವನ್ ಬಡ್ಯಾಕರ್‌ಗೆ ಕಾರು ಅಪಘಾತ, ಆಸ್ಪತ್ರೆಗೆ ದಾಖಲು
ಇದನ್ನೂ ಓದಿ : ಉಕ್ರೇನ್‌ನಲ್ಲಿ ಕರ್ನಾಟಕ ಮೂಲದ ನವೀನ್ ಸಾವು, ಪೋಷಕರಲ್ಲಿ ಹೆಚ್ಚಿದ ಆತಂಕ
(Naveen Death Ukraine Urgent action to bring Naveen’s body to his home: CM Bommai)