BJP Master Plan : ಲೋಕಸಭಾ ಚುನಾವಣೆಗೆ ಹೊಸಮುಖಗಳು : ಬಿಜೆಪಿ ಪ್ಲ್ಯಾನ್ ಏನು ಗೊತ್ತಾ ?

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲೂ ಅಧಿಕಾರದ ಗದ್ದುಗೆ ಹಿಡಿಯೋ ಲೆಕ್ಕಾಚಾರದಲ್ಲಿದೆ. ಅದಕ್ಕಾಗಿ ಈಗಾಗಲೇ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ (BJP Master Plan) ಸಿದ್ಧಪಡಿಸಿದ್ದು, ವಿಶೇಷವಾಗಿ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಹೊಸಮುಖಗಳಿಗೆ ಅವಕಾಶ ನೀಡೋ ವಿಭಿನ್ನ ಪ್ರಯತ್ನಕ್ಕೆ ಸಿದ್ಧತೆ ನಡೆದಿದೆ ಎನ್ನಲಾಗ್ತಿದೆ.

ಹೌದು ಬಿಜೆಪಿ ಎಲ್ಲಾ ರಾಜ್ಯಗಳನ್ನು ರಾಜಕೀಯ ಪ್ರಯೋಗಶಾಲೆಯಾಗಿ ಬಳಸಿಕೊಳ್ಳುತ್ತಿದೆ. ಕರ್ನಾಟಕದ ಮಟ್ಟಿಗೂ ಅಂತಹುದೇ ಪ್ರಯೋಗವೊಂದಕ್ಕೆ ಬಿಜೆಪಿ ಹೈಕಮಾಂಡ್ ಸಿದ್ಧವಾಗಿದೆ. ಹೌದು 2024 ಕ್ಕೆ ಬಿಜೆಪಿಯಲ್ಲಿ ಭಾರೀ ಬದಲಾವಣೆ ಮಾಡಲಾಗ್ತಿದ್ದು, ಬಿಜೆಪಿಯ ಹಿರಿಯ ಸಂಸದರಿಗೆ ರೆಸ್ಟ್ ಕೊಡಲು ಪ್ಲಾನ್ ಮಾಡಿದೆ. ಅಲ್ಲದೇ ಸಂಸದ ಸ್ಥಾನಕ್ಕೆ ಯುವಕರತ್ತ ಚಿತ್ತ ಹರಿಸಿದ ಹೈಕಮಾಂಡ್, ಮುಂದಿನ ಲೋಕಸಭಾ ಚುನಾವಣೆಗೆ ಭಾರೀ ಬದಲಾವಣೆ ಮಾಡಲು ಸಿದ್ಧತೆ ನಡೆಸಿದೆ. ಹಾಲಿ ರಾಜ್ಯದಲ್ಲಿ ಇರುವ ಬಿಜೆಪಿ ಸಂಸದರಿಗೆ ಹೈಕಮಾಂಡ್ ಖೋಕ್ ನೀಡಲು ಚಿಂತನೆ ನಡೆಸಿದ್ದು ಆರರಿಂದ ಏಳು ಲೋಕಾ ಕ್ಷೇತ್ರದ ಹಾಲಿ ಎಂಪಿಗಳಿಗೆ ಕೊಕ್ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆಗೆ ಎರಡು ವರ್ಷ ಇರುವಾಗಲೆ ನೂತನ ಅಭ್ಯರ್ಥಿಗಳಿಗೆ ತಲಾಶ್ ನಡೆದಿದ್ದು, ವಿಶೇಷವಾಗಿ ವಯಸ್ಸಾದ ಸಂಸದರನ್ನು ಬಿಟ್ಟು ಯುವ ನಾಯಕರನ್ನು ಅಯ್ಕೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆಯಂತೆ. ಸಂಸದ ಪ್ರತಾಪ ಸಿಂಹ್, ತೇಜಸ್ವಿ ಸೂರ್ಯ ಮಾದರಿಯಲ್ಲಿ ಯುವ ಮುಖಗಳನ್ನು ಸಂಸದರಾಗಿ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗ್ತಿದೆ.

ಇನ್ನು ಮುಂದಿನ ಲೋಕಸಭಾ ಚುನಾವಣೆಗೆ ಯಾರು ಯಾರಿಗೆ ಟಿಕೆಟ್ ಕೈ ತಪ್ಪೋ ಸಾಧ್ಯತೆ ಇದೇ ಅನ್ನೋದನ್ನು ಗಮನಿಸೋದಾದರೇ, ಬೆಂಗಳೂರು ಉತ್ತರ ಕ್ಷೇತ್ರದ ಡಿ ವಿ ಸದಾನಂದಗೌಡ, ಚಿಕ್ಕಬಳ್ಳಾಪುರದ ಕೆ ಪಿ ಬಚ್ಚೇಗೌಡ, ತುಮಕೂರು ಕ್ಷೇತ್ರದ ಜಿಎಂ ಬಸವರಾಜ್, ಚಾಮರಾಜನಗರದ ವಿ ಶ್ರೀನಿವಾಸಪ್ರಸಾದ, ಬಾಗಲಕೋಟೆ ಪಿ ಸಿ ಗದ್ದಿಗೌಡರ್
ವಿಜಯಪುರದ ರಮೇಶ್ ಜಿಗಜಿಣಗಿ ಗೆ ಸ್ಥಾನ ತಪ್ಪಲಿದೆ ಎನ್ನಲಾಗ್ತಿದೆ.

ಮುಂದಿನ ಚುನಾವಣೆಗೆ ಹೊಸಮುಖ, ಯುವಮುಖ, ಜಾತಿ ಪ್ರಾಬಲ್ಯ, ಜನಪ್ರಿಯತೆ,ಬಿಜೆಪಿ ಸಿದ್ದಾಂತ ಹಿನ್ನೆಲೆ, ಶುದ್ಧಹಸ್ತ, ವಿದ್ಯಾವಂತ, ಉತ್ತಮ ಚಾರಿತ್ರ್ಯ ಇರುವಂತವರಿಗೆ ಆದ್ಯತೆ ನೀಡಲಾಗುತ್ತಿದೆ. ವಿಶೇಷವಾಗಿ ಈ ಆರು ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಹೊಸ ಅಭ್ಯರ್ಥಿಯ ತಲಾಶ್ ನಡೆಸಿದ್ದು, ಹೊಸ ಮುಖಗಳನ್ನು ಪರಿಚಯಿಸಿ ಅವರನ್ನು ಪಾರ್ಟಿ ಬಲದಿಂದ ಗೆಲ್ಲಿಸಿಕೊಳ್ಳಲು ಬಿಜೆಪಿ ಲೆಕ್ಕಾಚಾರ ಹಾಕಿದ್ದು ಇದಕ್ಕೆ ಹಾಲಿ ಸಂಸದರು ಹೇಗೆ ಪ್ರತಿಕ್ರಿಯಿಸುತ್ತಾರೆ? ಇದೇ ಬಿಜೆಪಿಯ ಪಾಲಿಗೆ ಮುಳುವಾಗುತ್ತಾ ಎಂಬ ಅನುಮಾನವೂ ಮೂಡಿದೆ.

ಇದನ್ನೂ ಓದಿ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಸಿಹಿಸುದ್ದಿ: ಮಂತ್ರಿಗಿರಿ ಬದಲು ಸಿಗುತ್ತೆ‌ ನಿಗಮ ಮಂಡಳಿ ಸ್ಥಾನ

ಇದನ್ನೂ ಓದಿ : Karnataka cabinet expansion : ಮತ್ತೊಮ್ಮೆ ದೆಹಲಿಗೆ ಸಿಎಂ ಬೊಮ್ಮಾಯಿ : ಮುನ್ನಲೆಗೆ ಬಂತು ಸಂಪುಟ ವಿಸ್ತರಣೆ ಸರ್ಕಸ್

New Candidates to the Lok Sabha elections, do you know what BJP Master Plan is ?

Comments are closed.