ಇನ್ನೂ 10 ವರ್ಷ ನನ್ನದೇ ನಾಯಕತ್ವ: ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಸಂದೇಶ

ವಿಧಾನ ಪರಿಷತ್ ಚುನಾವಣೆ, ರಾಜ್ಯಸಭಾ ಚುನಾವಣೆ ಹೀಗೆ ಎಲ್ಲಾ ಸಂದರ್ಭದಲ್ಲೂ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yeddyurappa) ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಅದರಲ್ಲೂ ಬಿ.ವೈ.ವಿಜಯೇಂದ್ರ ಗೆ ವಿಧಾನ ಪರಿಷತ್ ಸ್ಥಾನ ನೀಡದೇ ಇದ್ದಾಗಲೂ ಬಿಎಸ್ವೈ ಕಡೆಗಣನೆ ಆಗ್ತಿದೆ ಎಂದೇ ಅರ್ಥೈಸಲಾಗ್ತಿತ್ತು. ಆದರೆ ಈಗ ಸಂದೇಹಗಳಿಗೆಲ್ಲ ಬಿಎಸ್ವೈ ಉತ್ತರ ನೀಡಿದ್ದು, ನನಗೆ ವಯಸ್ಸಾಗಿದೆ ಎಂಬ ಚಿಂತೆ ಪಕ್ಷದ ಕಾರ್ಯಕರ್ತರಿಗೆ ,ಮುಖಂಡರಿಗೆ ಬೇಡ ನಾನಿನ್ನು 10 ವರ್ಷ ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಬಿಎಸ್ವೈ ಗುಡುಗಿದ್ದಾರೆ. ಆ ಮೂಲಕ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಬೇಕೆಂದು ಹೈಕಮಾಂಡ್ ಗೆ ರಾಜಾಹುಲಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ವಿಧಾನಪರಿಷತ್ ವಾಯುವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಚುನಾವಣೆಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಿ.ಎಸ್.ಯಡಿಯೂರಪ್ಪ ವಿಜಯಪುರದಲ್ಲಿ ಮಾತನಾಡುವ ವೇಳೆ ತುಸು ಭಾವುಕರಾರದೂ ಮಾತಿನಲ್ಲಿ ಖಡಕ್ ಆಗಿ ಸಂದೇಶ ರವಾನಿಸಿದ್ದಾರೆ. ನನಗೆ 70 ವರ್ಷ ವಯಸ್ಸಾಯಿತು. 80 ವರ್ಷ ವಯಸ್ಸಾಯಿತು ಎಂದು ನೀವು ಯೋಚನೆ ಮಾಡಬೇಡಿ. ಇನ್ನು 10 ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡ್ತೇನೆ.ಮುಂದಿನ ದಿನಗಳಲ್ಲಿ ಮತ್ತೆ ಬಂದು ರಾಜಕೀಯ ಭಾಷಣ ಮಾಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.

ಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಕೆಲಸ ಮಾಡುವೆ ಎಂದಿರುವ ಬಿ.ಎಸ್.ಯಡಿಯೂರಪ್ಪ, 90 ವರ್ಷ ದಾಟುವ ವರೆಗೂ ಇದೆ ರೀತಿ ಚಟುವಟಿಕೆಯಿಂದ ಕೆಲಸ ಮಾಡ್ತೇನೆ. ನಿಮ್ಮ ಬೆಂಬಲ, ಆಶೀರ್ವಾದ ಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನೂ ಯಡಿಯೂರಪ್ಪ ಈ ಮಾತಿಗೆ ಬಿಎಸ್ವೈ ಮಾತು ಕೇಳಿ ಕೇಕೇ ಸಿಳ್ಳೆ ಹೊಡೆದ ಕಾರ್ಯಕರ್ತರು ರಾಜಾಹುಲಿ ಎಂದು ಕಿರುಚಿ ಸಂಭ್ರಮಿಸಿದ್ದಾರೆ.

ಕೇವಲ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಮಾತ್ರವಲ್ಲ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 140 ಶಾಸಕರನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಶ್ರಮವಹಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ಆದರೆ ಇದೆಲ್ಲದಕ್ಕಿಂತ ಬಿಎಸ್ವೈ ನಾನು ಇನ್ನೂ 10 ವರ್ಷ ಪಕ್ಷ ಸಂಘಟನೆ ಮಾಡ್ತಿನಿ ಎಂದಿದ್ದು ಹಾಗೂ 90 ವರ್ಷದವರೆಗೂ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ ಎಂದಿದ್ದು, ಹೈಕಮಾಂಡ್ ಗೆ ಬಿಎಸ್ವೈ ರವಾನಿಸಿರೋ ಸಂದೇಶ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ : Health minister Sudhakar : ಪೋನ್ ಎತ್ತಲ್ಲ, ದೂರಿಗೂ ಸ್ಪಂದಿಸಲ್ಲ: ಡಾ.ಸುಧಾಕರ್ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷಿಯರು

ಇದನ್ನೂ ಓದಿ : ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಮಾಸ್ಟರ್ ಪ್ಲ್ಯಾನ್ : ಸ್ವತಃ ಕಣಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡರು

Next 10 years My Own Leadership Says BS Yeddyurappa

Comments are closed.