Credit Cards : ನೀವು ಬಳಸುವ ಕ್ರೆಡಿಟ್‌ ಕಾರ್ಡ್‌ ಮೇಲೆ ಒಂದು ಕಣ್ಣಿಡಿ!!

ಹೆಚ್ಚುತ್ತಿರುವ ಡಿಜಿಟಲೀಕರಣದೊಂದಿಗೆ ಕ್ರೆಡಿಟ್‌ ಕಾರ್ಡ್‌(Credit Cards)ಗಳ ಬಳಕೆ ಕೂಡಾ ಹೆಚ್ಚುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕ್‌(Bank)ಗಳು ಕ್ಯಾಶ್‌ಬ್ಯಾಕ್‌, ರಿಯಾಯಿತಿ ಕೂಪನ್‌ಗಳು ಮತ್ತು ರಿವಾರ್ಡ್‌ ಪಾಂಯಿಂಟ್‌ಗಳಂತಹ ಆಕರ್ಷಕ ಪ್ರಯೋಜನಗಳನ್ನು ನೀಡುತ್ತಿವೆ. ಅನೇಕ ಜನರು ಒಂದಕ್ಕಿಂತ ಹೆಚ್ಚು ಕ್ರೆಡಿಟ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಕೋ–ಬ್ರಾಂಡೆಡ್‌ ಕಾರ್ಡ್‌(Co-branded cards)ಗಳು ವಿಮಾನ ಟಿಕೆಟ್‌ಗಳು, ರೈಲು ಟಿಕೆಟ್‌ಗಳು, ಇಂಧನ ಸರ್ಚಾರ್ಜ್‌ ಮನ್ನಾ ಮುಂತಾದ ಖರೀದಿಯ ಮೇಲೆ ಪ್ರತಿಫಲವನ್ನು ನೀಡುವ ಕಾರ್ಡಗಳನ್ನು ಹೊಂದಿದ್ದಾರೆ.

ಕಾರ್ಡ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಿ :
ಒಂದಕ್ಕಿಂತ ಹೆಚ್ಚು ಕಾರ್ಡ್‌ ಹೊಂದುವುದರಿಂದ ಪ್ರಯೋಜನವಿದ್ದರೂ ನೀವು ಅವುಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಬಹು ಕಾರ್ಡ್‌ಗಳನ್ನು ಆಯ್ಕೆ ಮಾಡುವ ಮೊದಲು ಒಂದೇ ರೀತಿಯ ಪ್ರಯೋಜನಗಳನ್ನು ನೀಡುವ ಎರಡು ಕಾರ್ಡ್‌ಗಳನ್ನು ಹೊಂದುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ತಿಳಿಯಿರಿ. ಅಗತ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಕಾರ್ಡ್‌ ಆಯ್ಕೆ ಮಾಡಿಕೊಳ್ಳಿ. ಯಾರಾದರೂ ಪದೇ ಪದೇ ಪ್ರಯಾಣಿಸುವವರಾಗಿದ್ದರೆ ಕೋ–ಬ್ರಾಂಡೆಡ್‌ ಕಾರ್ಡ್‌ ಆಯ್ಕೆ ಮಾಡುವುದು ಅರ್ಥಪೂರ್ಣವಾಗಿದೆ. ಅಥವಾ ಯಾರಾದರೂ ನಿರ್ದಿಷ್ಟ ರಿಟೇಲ್‌ ಔಟ್‌ಲೆಟ್‌ ಬಳಸುತ್ತಿದ್ದರೆ ಆಗ ರಿಟೇಲ್‌ ಔಟ್‌ಲೆಟ್‌ನ ಕೋ–ಬ್ರಾಂಡೆಡ್‌ ಕಾರ್ಡ್‌ ಸಹಾಯವಾಗಬಹುದು ಏಕೆಂದರೆ ಅದರಿಂದ ಹೆಚ್ಚುವರಿ ಲಾಯಲ್ಟಿ ಪಾಯಿಂಟ್‌ಗಳನ್ನು ಪಡೆಯಬಹುದು.

ಸಮಯಕ್ಕೆ ಸರಿಯಾಗಿ ಪಾವತಿಸಿ :
ಕ್ರೆಡಿಟ್‌ ಕಾರ್ಡ್‌ ಖರ್ಚು ಮಾಡಿದ ದಿನದಿಂದ ಬಿಲ್ಲಿಂಗ್‌ ದಿನಾಂಕದವರೆಗೆ ಸುಮಾರು 5 ವಾರಗಳ ಕ್ರೆಡಿಟ್‌ ವಿಂಡೋವನ್ನು ನೀಡುತ್ತವೆ. ಆ ನಿರ್ದಿಷ್ಟ ಅವಧಿಯಲ್ಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ಮಾಡಿದ ಖರ್ಚು ಬಡ್ಡಿ–ಮುಕ್ತ ಸಾಲದಂತಿರುತ್ತದೆ. ಒಟ್ಟು ಬಾಕಿ ಉಳಿದ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಮಾಸಿಕ ಪಾವತಿಯು ಕನಿಷ್ಠ ಬಾಕಿ ಮೊತ್ತವನ್ನು ಒಳಗೊಂಡಿರಬೇಕು. ಇದನ್ನೂ ಸಾಮಾನ್ಯವಾಗಿ ಒಬ್ಬರ ಬಾಕಿ ಇರುವ ಹಣದ 5% ಎಂದು ಲೆಕ್ಕಹಾಕಲಾಗುತ್ತದೆ. ಎಲ್ಲಾ ಕಂತುಗಳ ಮೊತ್ತ ಬಡ್ಡಿ/ಇತರೆ ಬ್ಯಾಂಕ್‌ ಶುಲ್ಕಗಳು ಮತ್ತು ಕ್ರೆಡಿಟ್‌ ಮಿತಿಯ ಮೇಲೆ ಬಳಸಲಾದ ಮೊತ್ತ. ಬಾಕಿಯನ್ನು ರೋಲಿಂಗ್‌ ಮಾಡಲು ಬ್ಯಾಂಕ್‌ಗಳು ವಾರ್ಷಿಕ 45% ವರೆಗೆ ಬಡ್ಡಿದರವನ್ನು ವಿಧಿಸುವುದರರಿಂದ ಬಾಕಿ ಇರುವ ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸ ಬೇಕಾಗುವುದು. ಕ್ರೆಡಿಟ್‌ ಬಾಕಿಗಳನ್ನು ರೋಲಿಂಗ್‌ ಮಾಡುವುದು ಒಳ್ಳೆಯದಲ್ಲ.

ಕಾರ್ಡ್‌ ಬಳಕೆಯ ಅನುಪಾತ :
ಕ್ರೆಡಿಟ್‌ ಕಾರ್ಡ್‌ ಯುಟಿಲೈಸೇಶನ್‌ ಅನುಪಾತದ (Credit utilization Ratio) ಮೇಲೆ ಟ್ಯಾಬ್‌ ಇಟ್ಟುಕೊಳ್ಳಬೇಕು. ಇದು ಕ್ರೆಡಿಟ್‌ ಕಾರ್ಡ್‌ ಮಿತಿಯಿಂದ ಭಾಗಿಸಿದಾಗ ಬಾಕಿ ಉಳಿದಿರುವ ಅನುಪಾತವಾಗಿದೆ. ಕ್ರೆಡಿಟ್‌ ಮಿತಿಯು 2 ಲಕ್ಷ ರೂಪಾಯಿಗಳಾಗಿದ್ದರೆ ಮತ್ತು ಕಾರ್ಡ್ ಹೊಂದಿದವರು 50,000 ರೂಪಾಯಿಗಳಷ್ಟು (EMI ಸೇರಿಸಿ) ಖರೀದಿಸಿದ್ದರೆ ಆಗ ಕಾರ್ಡ್‌ ಹೋಲ್ಡರ್‌ನ CUR 25% ಗಳಾಗುವುದು. ಅತಿಯಾದ CUR ಕ್ರೆಡಿಟ್‌ ಕಾರ್ಡ್‌ ಸ್ಕೋರ್‌ ಮೇಲೆ ಪರಿಣಾಮ ಬೀರುವುದು. ಮತ್ತು ಇದು ದೀರ್ಘಾವಧಿಯವರೆಗೆ 40% ಕ್ಕಿಂತ ಹೆಚ್ಚಿರಬಾರದು. ವಿವಿಧ ಕಾರ್ಡ್‌ಗಳ ಮೇಲಿನ ವೆಚ್ಚಗಳನ್ನು ವಿಭಜಿಸುವುದು ಪ್ರತಿ ಕಾರ್ಡ್‌ಗೆ ಕ್ರೆಡಿಟ್‌ ಬಳಕೆಯ ಅನುಪಾತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆದರೆ ಸಾಮರ್ಥ್ಯವನ್ನು ಮೀರಿ ಖರ್ಚು ಮಾಡುವುದು ಆರ್ಥಿಕ ಸಂಕಷ್ಟ ಮತ್ತು ಸಾಲದ ಬಲೆಗೆ ಕಾರಣವಾಗುತ್ತದೆ. ಆದ್ದರಿಂದ ಕ್ರೆಡಿಟ್‌ ಕಾರ್ಡ್‌ ಅನ್ನು ಜವಾಬ್ದಾರಿಯುತವಾಗಿ ಬಳಸಬೇಕು ಮತ್ತು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ವಿಳಂಬ ಶುಲ್ಕ ತಪ್ಪಿಸಲು ನಿಗದಿತ ದಿನಾಂಕವನ್ನು ಫೋನ್‌ ಅಥವಾ ಕ್ಯಾಲೆಂಡರ್‌ನಲ್ಲಿ ರೆಮೈಂಡರ್‌ಅನ್ನು ಹಾಕಿಕೊಳ್ಳವುದು ಉತ್ತಮ. ಯಾವುದೇ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಟಾಪ್‌–ಅಪ್‌ ಲೋನ್‌ ಅಥವಾ ವೈಯಕ್ತಿಕ ಸಾಲದಂತಹ ಇತರ ನಿಧಿಗಳ ಮೂಲವನ್ನು ಹುಡುಕುವುದು ಉತ್ತಮ. ಏಕೆಂದರೆ ಇವರು ವಿಧಿಸುವ ದರಗಳಿಗಿಂತಕಡಮೆಯಾಗಿರುತ್ತದೆ

ಇದನ್ನೂ ಓದಿ : FD In Post Office : ಪೋಸ್ಟ್‌ ಆಫೀಸ್‌ನಲ್ಲಿ FD ಮಾಡುವುದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತೇ?

ಇದನ್ನೂ ಓದಿ : Pension Scheme ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ

(Credit Cards utilization keep an eye on your card)

Comments are closed.