Next Chief Minister Murugesh Nirani : ಮುಂದಿನ ಮುಖ್ಯಮಂತ್ರಿ ಮುರುಗೇಶ್ ನಿರಾಣಿ: ಏನಿದು ವೈರಲ್ ಪೋಸ್ಟರ್ ನ ಅಸಲಿಯತ್ತು?

ಬೆಂಗಳೂರು : (Next Chief Minister Murugesh Nirani) ರಾಜ್ಯ ಬಿಜೆಪಿಯಲ್ಲಿ ನಿಧಾನಕ್ಕೆ ವಲಸೆ ಮತ್ತು ಮೂಲ ಬಿಜೆಪಿಗರ‌ ನಡುವೆ ಫೈಟ್ ತಾರಕಕ್ಕೇರುತ್ತಿದೆ. ಇದರ ಜೊತೆಗೆ ಸಿದ್ಧು ಸಿಎಂ ಸ್ಥಾನಕ್ಕೆ ಏರೋ‌ಕನಸಿನಲ್ಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಸರ್ಕಸ್ ನಡೆಸುತ್ತಿದೆ. ಇದೆಲ್ಲದರ ಮಧ್ಯೆ ಈಗಾಗಲೇ ಬಿಜೆಪಿಯಲ್ಲಿ ಚರ್ಚೆ ಗೊಳಗಾಗಿದ್ದ ನಿರಾಣಿ ಸಿಎಂ ಸಂಗತಿ‌ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಹೌದು ಬೃಹತ ಕೈಗಾರಿಕಾ ಸಚಿವರಾಗಿ ಕೆಲಸ ನಿರ್ವಹಿಸಿದ್ದ ಬಿಜೆಪಿಯ ಹಿರಿಯ ನಾಯಕ ಮುರುಗೇಶ್ ನಿರಾಣಿ ಅಗಸ್ಟ್ 18 ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿರಾಣಿಯವರ ಈ ಹುಟ್ಟುಹಬ್ಬದ ಸಂಭ್ರಮದ ನಡುವೆ ಈಗ ಅವರು ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಂಗತಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಹೌದು ಮುರುಗೇಶ್ ನಿರಾಣಿಯವರ ಆಪ್ತ ಕಾರ್ಯದರ್ಶಿ ನಿರಾಣಿಯವರ ಹುಟ್ಟುಹಬ್ಬಕ್ಕೆ ಪೋಸ್ಟರ್ ಸಿದ್ಧಪಡಿಸಿದ್ದಾರೆ. ಈ ಪೋಸ್ಟರ್ ನಲ್ಲಿ ನೇರವಾಗಿ ಮುಂದಿನ ಮುಖ್ಯಮಂತ್ರಿಗಳು ಹಾಗೂ ಜಮಖಂಡಿ ಜಿಲ್ಲೆಯ ಕನಸನ್ನು ನನಸು ಮಾಡುವ ನಾಯಕ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ಆರ್.ನಿರಾಣಿಯವರಿಗೆ ಜನುಮದಿನದ ಶುಭಾಶಯಗಳು ಎಂದು ಹಾರೈಸಿದ್ದಾರೆ.

Next Chief Minister Murugesh Nirani, What is the authenticity of the viral poster

ಈ ಪೋಸ್ಟರ್ ನ್ನು ಸಚಿವ ಮುರುಗೇಶ್ ನಿರಾಣಿಯವರ ಆಪ್ತ ಸಹಾಯಕ ಕಿರಣ್ ಬಡಿಗೇರ್ ಸಿದ್ಧಪಡಿಸಿದ್ದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಿರಣ್ ಈ ಪೋಸ್ಟರ್ ಹಂಚಿಕೊಳ್ಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಸಖತ್ ವೈರಲ್ ಆಗಿದ್ದು, ಕಾಂಗ್ರೆಸ್ ನಂತೆ ಬಿಜೆಪಿಯಲ್ಲೂ ಚುನಾವಣೆಗೂ ಮುನ್ನವೇ ಸಿಎಂ ಸ್ಥಾನಕ್ಕೆ ಟವೆಲ್ ಹಾಕುವ ಜನರ ಸಂಖ್ಯೆ ಹೆಚ್ಚಿದೆ ಎಂದು ಟೀಕಿಸಲಾರಂಭಿಸಿದ್ದಾರೆ.

ಅಷ್ಟೇ ಅಲ್ಲ ಪೋಸ್ಟರ್ ನ್ನು ಕೂಡ ಸಖತ್ ವೈರಲ್ ಮಾಡಲಾಗಿದ್ದು, ಮುರುಗೇಶ್ ನಿರಾಣಿ ಉದ್ದೇಶ ಪೂರ್ವಕವಾಗಿಯೇ ತಮ್ಮ ಆಪ್ತ ಸಹಾಯಕನ ಮೂಲಕ ಪೋಸ್ಟರ್ ವೈರಲ್ ಮಾಡಿಸಿದ್ರಾ ಎಂಬ ಅನುಮಾನವೂ ಹುಟ್ಟಿಕೊಂಡಿದೆ. ಹಾಗೇ ನೋಡಿದ್ರೇ ಮುರುಗೇಶ್ ನಿರಾಣಿ ಸಿಎಂ ಸ್ಥಾನದ ಆಕಾಂಕ್ಷಿ ಅನ್ನೋದು ಈಗಾಗಲೇ ಬಹಿರಂಗವಾಗಿರೋ ಸಂಗತಿ. ಈ ಹಿಂದೆ ಮಾಜಿ ಸಚಿವ ಈಶ್ವರಪ್ಪ ಕೂಡ ಮುರುಗೇಶ್ ನಿರಾಣಿ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವ ಮೂಲಕ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಮ್ಮೆ ನಿರಾಣಿ ಸಿಎಂ ಎಂಬ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಿಜೆಪಿ ನಾಯಕರು ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ : Lalbagh flower show historical record : ಐತಿಹಾಸಿಕ ದಾಖಲೆ ಬರೆದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಒಂದೇ ದಿನ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ

ಇದನ್ನೂ ಓದಿ : Ganesha festival in Idga Maidan : ಸ್ವಾತಂತ್ರ್ಯೋತ್ಸವ ಆಯ್ತು ಈಗ ಗಣೇಶೋತ್ಸವಕ್ಕೆ ಬೇಡಿಕೆ : ಮತ್ತೆ ವಿವಾದಕ್ಕೆ ಕಾರಣವಾಯ್ತು ಈದ್ಗಾ ಮೈದಾನ

Next Chief Minister Murugesh Nirani, What is the authenticity of the viral poster?

Comments are closed.