India Tour of Zimbabwe : ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿದೆ ಟೀಮ್ ಇಂಡಿಯಾದ ಪ್ಲೇಯಿಂಗ್ XI

ಹರಾರೆ: (India Playing XI)ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ (ಗುರುವಾರ) ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ನಾಯಕತ್ವದಲ್ಲಿ ಆಡಲಿದ್ದು, ವಿವಿಎಸ್ ಲಕ್ಷ್ಮಣ್ (VVS Laxman) ಕೋಚಿಂಗ್ ಜವಾಬ್ದಾರಿ ಹೊತ್ತಿದ್ದಾರೆ. 6 ತಿಂಗಳ ನಂತರ ಕೆ.ಎಲ್ ರಾಹುಲ್ ಏಕದಿನ ತಂಡಕ್ಕೆ ಮರಳಿದ್ದು, ಅನುಭವಿ ಓಪನರ್ ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಅಹ್ಮದಾಬಾದ್’ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ನಂತರ ಕೆ.ಎಲ್ ರಾಹುಲ್ ಯಾವುದೇ ಏಕದಿನ ಪಂದ್ಯಗಳ ನ್ನಾಡಿಲ್ಲ. ಐಪಿಎಲ್ ಬಳಿಕ ಗಾಯದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ದೂರವಿದ್ದ ರಾಹುಲ್ ಅವರಿಗೆ ಜಿಂಬಾಬ್ವೆ ವಿರುದ್ಧದ ಸರಣಿ ಟೀಮ್ ಇಂಡಿಯಾ ಕಂಬ್ಯಾಕ್ ಸರಣಿಯಾಗಿದೆ.

ರಾಹುಲ್ ಆಗಮನದಿಂದ ಮತ್ತೊಬ್ಬ ಓಪನರ್ ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿ 205 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ದೀಪಕ್ ಹೂಡ, ವಿಕೆಟ್ ಕೀಪರ್’ಗಳಾದ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕಾಣಿಸಿಕೊಳ್ಳುವುದು ಖಚಿತ. ಎಡಗೈ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಮತ್ತು ಚೈನಾಮೆನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ವೇಗದ ಬೌಲರ್’ಗಳ ಕೋಟಾದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸ್ಥಾನ ಖಚಿತ. ಉಳಿದೆರಡು ಸ್ಥಾನಗಳಿಗಾಗಿ ಸ್ವಿಂಗ್ ಬೌಲರ್ ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಆವೇಶ್ ಖಾನ್ ಮತ್ತು ಮೊಹಮ್ಮದ್ ಸಿರಾಜ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ XI

  1. ಕೆ.ಎಲ್ ರಾಹುಲ್ (ನಾಯಕ)
  2. ಶಿಖರ್ ಧವನ್
  3. ಶುಭಮನ್ ಗಿಲ್
  4. ದೀಪಕ್ ಹೂಡ
  5. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
  6. ಇಶಾನ್ ಕಿಶನ್
  7. ಅಕ್ಷರ್ ಪಟೇಲ್
  8. ದೀಪಕ್ ಚಹರ್
  9. ಕುಲ್ದೀಪ್ ಯಾದವ್
  10. ಪ್ರಸಿದ್ಧ್ ಕೃಷ್ಣ
  11. ಶಾರ್ದೂಲ್ ಠಾಕೂರ್/ಮೊಹಮ್ಮದ್ ಸಿರಾಜ್

ಪಂದ್ಯ ಆರಂಭ: ಮಧ್ಯಾಹ್ನ 12.45ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನ, ಹರಾರೆ

ಇದನ್ನೂ ಓದಿ : KL Rahul fan in Zimbabwe team : ಜಿಂಬಾಬ್ವೆ ತಂಡದಲ್ಲಿದ್ದಾನೆ ಕೆ.ಎಲ್ ರಾಹುಲ್ ಅಭಿಮಾನಿ

ಇದನ್ನೂ ಓದಿ : Rohit Sharma video viral: ಹೋಟೆಲ್‌ಗೆ ಹೋದ ರೋಹಿತ್ ಶರ್ಮಾಗೆ ಶಾಕ್, ಫ್ಯಾನ್ಸ್ ಕಾಟಕ್ಕೆ ಹಿಟ್‌ಮ್ಯಾನ್ ಮಾಡಿದ್ದೇನು ಗೊತ್ತಾ?

India vs Zimbabwe Playing First ODI Match India Playing XI

Comments are closed.